ಶೈಲಜಾ ಹಾಸನ ಅವರ " ನಿಲ್ಲುನಿಲ್ಲೆ ಪತಂಗಕ್ಕೆ" ಸಂಜೆ ಸಾಹಿತ್ಯ ಪ್ರಶಸ್ತಿ

Date: 29-01-2023

Location: ಬೆಂಗಳೂರು


ಮೆಹೆಂದಳೆ ಪ್ರತಿಷ್ಠಾನ ಕೊಡಮಾಡುವ ಪ್ರತಿಷ್ಟಿತ ಸಂಜೆ ಸಾಹಿತ್ಯ ಪ್ರಶಸ್ತಿ- 2022 ಕ್ಕೆ ಕವಯಿತ್ರಿ, ಲೇಖಕಿ ಶೈಲಜಾ ಹಾಸನ ಅವರು ಆಯ್ಕೆಯಾಗಿದ್ದಾರೆ. ಅವರ "ನಿಲ್ಲುನಿಲ್ಲೆ ಪತಂಗ " ಕಥಾ ಸಂಕಲವು ಆಯ್ಕೆ ಆಗಿದೆ.

ಸಂಜೆ ಸಾಹಿತ್ಯ ಪ್ರಶಸ್ತಿಯ ಇತರ ಸಂಕಲನಗಳಲ್ಲಿ ದ್ವೀತಿಯ ಸ್ಥಾನವನ್ನು ಬೀರಣ್ಣ ನಾಯಕ ಮೊಗಟಾ ಅವರ ಹಣ್ಮರ ಸಂಕಲನಕ್ಕೆ, ಮತ್ತು ತೃತೀಯ ಸ್ಥಾನಕ್ಕೆ ಮಲಮ್ಮ ಜೊಂಡಿ ಅವರ ಗೌಡ ಶ್ಯಾನಿ ಸಂಕಲನ ಆಯ್ಕೆಯಾಗಿವೆ. ಸಮಾಧಾನಕರ ಬಹುಮಾನಕ್ಕಾಗಿ ಹುಳಗೋಳ ನಾಗಪತಿ ಹೆಗಡೆ ಅವರ ಕಡಲ ಒಡಲ ಮುತ್ತುಗಳು ಸಂಕಲನ ಆಯ್ಕೆ ಮಾಡಲಾಗಿದೆ.

ಮೊದಲ ಪ್ರಶಸ್ತಿಗಳಿಸಿದ ಸಂಕಲವನ್ನು ವಿಕ್ರಂ ಪ್ರಕಾಶನ ಪ್ರಕಟಪಡಿಸಲಿದ್ದು, ಪ್ರಶಸ್ತಿಯು 10 ಸಾವಿರ ರೂ. ನಗದು ಮತ್ತು ಸ್ಮರಣಾರ್ಥ ಫಲಕವನ್ನು ಒಳಗೊಂಡಿರುತ್ತದೆ.

ಸಂಜೆ ಸಾಹಿತ್ಯ ಪ್ರಶಸ್ತಿ-2022 ಗಾಗಿ ನಡೆದ ಸ್ಪರ್ಧೆಯಲ್ಲಿ68 ಕಥಾ ಸಂಕಲನಗಳು ಬಂದಿದ್ದು ಅವುಗಳಲ್ಲಿ ಅತ್ಯುತ್ತಮವಾದ ಕಥಾ ಸಂಕಲನಗಳನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ .ಕತೆಗಾರ ಬಸವಣೆಪ್ಪ ಕುಂಬಾರ, ಲೇಖಕ ಶ್ರೀದೇವಿ ಕೆರೆಮನೆ, ಲೇಖಕಿ ಪ್ರಜ್ಞಾಮತ್ತಿ ಹಳ್ಳಿ. ಹಾಗು ಅನಾಮಧೇಯ ಸಾಹಿತಿಯೊಬ್ಬರು ತಮ್ಮ ನಿರ್ಣಯ ನೀಡಿದ್ದರು.

ಅಂತಿಮ ಹಂತದ ನಿರ್ಣಾಯಕರಾಗಿ ಪತ್ರಕರ್ತೆ ಕೆ.ಎಚ್ ಸಾವಿತ್ರಿ ಮತ್ತು ಕಾದಂಬರಿಕಾರ ಸಂತೋಷಕುಮಾರ ಮೆಹೆಂದಳೆ ಆಯ್ಕೆ ನಿರ್ಣಯ ನೀಡಿದ್ದು, ಪ್ರಥಮ ಬಾರಿಗೆ ಬಹುಮಾನ ಪ್ರಶಸ್ತಿಯ ಜೊತೆಗೆ ಪುಸ್ತಕವನ್ನೂ ಮುದ್ರಿಸಿಕೊಡುವ ಯೋಜನೆಯನ್ನು ಸಂಜೆ ಸಾಹಿತ್ಯ ಪ್ರಶಸ್ತಿಗಾಗಿ ಮೆಹೆಂದಳೆ ಪ್ರತಿಷ್ಠಾನ(ರಿ) ಕೈಗೊಂಡಿದೆ.

2023 ಫೆಬ್ರವರಿ ಕೊನೆಯ ವಾರ ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಆಯ್ಕೆಯಾದ ಸಂಕಲನ ಬಿಡುಗಡೆ ಮತ್ತು ಪ್ರಶಸ್ತಿ ವಿತರಣೆ ಮಾಡಲಾಗುವುದೆಂದು ಪ್ರತಿಷ್ಠಾನ ಪ್ರಕಟನೆ ತಿಳಿಸಿದೆ.

 

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...