ಸರ್ವಾಧಿಕಾರವನ್ನು ಎದುರಿಸಲು ಎಲ್ಲರೂ ಒಂದಾಗಬೇಕಿದೆ

Date: 23-09-2019

Location: ಮೈಸೂರು


’ಸರ್ವಾಧಿಕಾರವನ್ನು ಮೆಟ್ಟಿಸಲು ಸಾಧ್ಯವಿದೆ. ವಿರೋಧ ಪಕ್ಷದವರೆಲ್ಲರೂ ಒಗ್ಗೂಡಬೇಕಿದೆ’ ಎಂದು ಬರಹಗಾರ ನಟರಾಜ್ ಹುಳಿಯಾರ್‌ ಅಭಿಪ್ರಾಯಪಟ್ಟರು.

ಮೈಸೂರಿನಲ್ಲಿ ನಡೆದ ನಟರಾಜ್ ಹುಳಿಯಾರ್‌ ಸಾಹಿತ್ಯ; ಸಮಕಾಲೀನ ಸ್ಪಂದನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂಡಿಯಾದ ಗಡಿಗಳಲ್ಲಿ ಇವತ್ತು ಗುಂಡಿಗೆ ಎದೆಯೊಡ್ಡಿ ಸಾಯುತ್ತಿರುವ ಬಹುತೇಕರು ಬಡವರಾದ ಶೂದ್ರರು, ಮುಸ್ಲಿಮರು, ದಲಿತರೇ ಹೊರತು ದಿನನಿತ್ಯ ದೇಶಪ್ರೇಮದ ಬಗ್ಗೆ ಕೂಗುತ್ತಿರುವವರ ಮಕ್ಕಳಲ್ಲ. ಈ ನೆಲದಲ್ಲಿಯೇ ಹುಟ್ಟಿ, ಇಲ್ಲಿಯೇ ನರಳಿ, ದೇಶಕ್ಕೆಲ್ಲ ಬೆಳೆ ಬೆಳೆದುಕೊಟ್ಟು ಇಲ್ಲಿಯೇ ನೇಣು ಹಾಕಿಕೊಳ್ಳುತ್ತಿರುವ ರೈತರನ್ನು ಉಳಿಸಿಕೊಳ್ಳಲು ಹೋರಾಡಬೇಕೆಂಬ ದೇಶಪ್ರೇಮ ಈ ಹುಸಿ ದೇಶಭಕ್ತರ ಬಾಯಲ್ಲಿ ಎಂದೂ ಹೊರಟಂತಿಲ್ಲ. ಎಂದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜೇಂದ್ರ ಚೆನ್ನಿ ಅವರು ’ಇಂದು ಪ್ರಜಾಪ್ರಭುತ್ವದಲ್ಲಿ ನಮ್ಮ ವಿಚಾರಗಳನ್ನು ಧೈರ್ಯವಾಗಿ ಹೇಳುವಂತಹ ಸನ್ನಿವೇಶ ಇಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

ನಟರಾಜ ಹುಳಿಯಾರರ ಇಂತಿ ನಮಸ್ಕಾರಗಳು ಕೃತಿಯ ಕುರಿತು ರಾಜೇಂದ್ರ ಚೆನ್ನಿ ಮಾತನಾಡಿದರೆ, ಮಾಯಾ ಕಿನ್ನರಿ ಮತ್ತು ಕಾಮನ ಹುಣ್ಣಿಮೆ ಕುರಿತು ಎಲ್. ಜಿ. ಮೀರಾ ಅವರು ಮಾತನಾಡಿದರು.

MORE NEWS

ಪುಸ್ತಕ ಸಂಸ್ಕೃತಿ ಬೆಳೆಸುವುದು ಸಾಮಾಜಿಕ ನ್ಯಾಯದ ಭಾಗ ಅಂತ ಸರ್ಕಾರಗಳು ಭಾವಿಸಬೇಕು: ಬರಗೂರು

23-04-2024 ಬೆಂಗಳೂರು

ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...

ಪ್ರಕಾಶನ ಸಂಸ್ಥೆಯನ್ನು ತೆರೆದಿರುವ ಪ್ರಕಾಶಕರೆಲ್ಲರೂ ಹುಚ್ಚರೇ; ಕೆ.ಎನ್. ಗಣೇಶಯ್ಯ

23-04-2024 ಬೆಂಗಳೂರು

ಪುಸ್ತಕಗಳನ್ನು ಕೊಂಡುಕೊಂಡು ಓದುವವರ ಪ್ರಮಾಣ ಕಡಿಮೆಯೂ ಆಗಿಲ್ಲ ಹೆಚ್ಚು ಕೂಡ ಆಗಿಲ್ಲ. ಬಹುಶಃ ಪುಸ್ತಕವನ್ನು ಓದಬೇಕು ಅನ್...

‘ಕಠಾರಿ ಅಂಚಿನ ನಡಿಗೆ’ ಸಮಕಾಲೀನ ವಿಡಂಬನೆಗಳ ಪುಸ್ತಕ: ಶಿವಸುಂದರ್

22-04-2024 ಬೆಂಗಳೂರು

ಬೆಂಗಳೂರು: ಚಂದ್ರಪ್ರಭ ಕಠಾರಿಯವರು ವಿಡಂಬನೆಗಳನ್ನು ಬರೆದಿದ್ದಾರೆ. ವಿಡಂಬನೆ, ಲೇವಡಿ ಮಾಡುವುದಕ್ಕೆ ಇಂದು ಬಹಳ ಧೈರ್ಯ ಬ...