ಸಮಕಾಲಿನ ಬರಹಗಾರ ರಾಜೇಂದ್ರ ಪ್ರಸಾದ್:ಎಚ್‌.ಎಸ್‌.ವೆಂಕಟೇಶಮೂರ್ತಿ

Date: 17-11-2019

Location: ಬೆಂಗಳೂರು


ಕಳೆದ ಆರು ವರ್ಷಗಳಿಂದ ಕನ್ನಡದ ಪ್ರತಿಭಾವಂತ ಬರಹಗಾರರನ್ನ ಗೌರವಿಸಿ ನೀಡುವ ನರಹಳ್ಳಿ ಪ್ರಶಸ್ತಿಯನ್ನು ರಾಜೇಂದ್ರ ಪ್ರಸಾದ್ ಅವರಿಗೆ ಇಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇಂಪಿನ ಗುಂಪಿನಿಂದ ಗೀತ ಗಾಯನದ ನಂತರ ಲೇಖಕಿ ಎಂ. ಆರ್‌. ಕಮಲ ಪ್ರಶಸ್ತಿ ಪ್ರದಾನ ಮಾಡಿ “ರಾಜೇಂದ್ರ ಪ್ರಸಾದ್‌ ಅವರಲ್ಲಿ, ಅವರ ಬರಹಗಳಲ್ಲಿ ಬಂಡಾಯದ ಗುಣವಿದೆ. ಪರಂಪರೆಯ ಬಗ್ಗೆ ಗೌರವ ಭಾವವಿದೆ” ಎಂದು ಶ್ಲಾಘಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ ಎಚ್. ಎಸ್‌. ವೆಂಕಟೇಶಮೂರ್ತಿಯವರು “ರಾಜೇಂದ್ರ ಪ್ರಸಾದ್ ಅವರು ಸಮಕಾಲೀನ ಸಮಸ್ಯೆಗಳಿಗೆ ಸಂವೇದನಾಶೀಲರಾಗಿದ್ದಾರೆ. ಕವಿಯಾದವನು ತೆರೆದ ಕಣ್ಣಿನಿಂದ, ಸೂಕ್ಷ್ಮ ಮನಸ್ಸಿನಿಂದ ತನ್ನೆಲ್ಲಾ ಸುತ್ತಲಿನ ಅನುಭವಗಳನ್ನ ಕಾವ್ಯದ ಮುತ್ತಾಗಿ ಅರಳಿಸಬೇಕು” ಎಂದರು.  ಗುಲ್ಬರ್ಗಾದ ಕೇಂದ್ರೀಯ ಪ್ರಾಧ್ಯಾಪಕ, ವಿಮರ್ಶಕ ವಿಕ್ರಮ್ ವಿಸಾಜಿ ಅವರು ರಾಜೇಂದ್ರ ಅವರ ಏಳು ಕವನ ಸಂಕಲನಗಳಲ್ಲಿ ಕಾವ್ಯ ಸತ್ವ, ಸೊಬಗನ್ನು ವಿವರಿಸಿದರು. “ಅವರು ವಿಸ್ತಾರವಾದ ಓದನ್ನು ನಡೆಸಿರುವುದರಿಂದ ಅವರ ಕವನಗಳಲ್ಲಿ ವೈವಿಧ್ಯತೆ ಇದೆ, ಆಳವಾದ ಸಂವದನಾಶೀಲತೆ ಇದೆ, ಶುದ್ಧ ಮನಸ್ಸಿನ ಪ್ರತಿಕ್ರಿಯೆ ಇದೆ" ಎಂದು ತಿಳಿಸಿದರು.

ಪ್ರಶಸ್ತಿ ಪುರಸ್ಕೃತ ಯುವ ಕವಿ ರಾಜೇಂದ್ರ ಪ್ರಸಾದ್ ಮಾತನಾಡಿ “ತಾವು ಈಗಾಗಲೆ ಕಳೆದ ಇಪ್ಪತ್ತು ವರ್ಷಗಳಿಂದ ಕವನ ರಚಿಸುತ್ತಿದ್ದು ಅಭಿವ್ಯಕ್ತಿಯ ಏಕೈಕ ಮಾಧ್ಯಮವಾಗಿದೆ. ನನ್ನ ಕಾವ್ಯದಲ್ಲಿ ಸಮಾಜದ ನೋವಿಗೆ ಸ್ಪಂದಿಸಬೇಕೆಂಬ ಹಂಬಲ ತುಂಬಿದ್ದು, ನರಹಳ್ಳಿ ಪ್ರಶಸ್ತಿಯು ಮತ್ತಷ್ಟು ಜವಬ್ದಾರಿಯನ್ನು ಹೆಚ್ಚಿಸಿದೆ" ಎಂದು ಕಾವ್ಯಯಾನದ ಬಗ್ಗೆ ನೆನೆದರು. ಸಮಾರಂಭದಲ್ಲಿ’ಪ್ರೇಮ ಉಪಾಧ್ಯ, ರಜನಿ ನರಹಳ್ಳಿ, ಪಿ. ಚಂದ್ರಿಕ ವೆಂಕಟಗಿರಿ ದಳವಾಯಿ, ಅನಂತಮೂರ್ತಿ, ನರಹಳ್ಳಿ ಸುರೇಶ್’ರನ್ನು ಗೌರವಿಸಲಾಯಿತು. ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷರಾದ ಸಿ. ಕೆ. ರಾಮೇಗೌಡ, ನರಹಳ್ಳಿ ಪ್ರತಿಷ್ಠಾನದ ಕಾರ್ಯದರ್ಶಿಯಾದ ಆನಂದರಾಮ ಉಪಾಧ್ಯ ಮತ್ತಿತರರು ಉಪಸ್ಥಿತರಿದ್ದರು.  

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...