ಸಮ್ಮೇಳನದ ಯಶಸ್ವಿಗೆ ಬೇಕು ನಮ್ಮದು ಎಂಬ ಭಾವ: ಸಲಹೆ

Date: 28-01-2020

Location: ಕಲಬುರಗಿ


ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಯೋಗದ `ಕನ್ನಡ ಸಾಹಿತ್ಯ ವಿಶೇಷ ಉಪನ್ಯಾಸ ಮಾಲಿಕೆ’ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಬಿ. ಶರತ್ ಅವರು ಉದ್ಘಾಟಿಸಿದರು. 

ನಂತರ ಮಾತನಾಡಿ, ’ಕನ್ನಡ ಸಾಹಿತ್ಯ ಸಮ್ಮೇಳನಗಳು ಯಶಸ್ವಿಯಾಗಬೇಕಾದರೆ ನಮ್ಮದು ಎಂಬ ಭಾವ ಮೊದಲಾಗಬೇಕು. ಕನ್ನಡದ ಉಳಿವಿಗೆ ಪ್ರತಿಯೊಬ್ಬರ ಕೊಡುಗೆ ಏನು ಎಂಬ ಚಿಂತನಯೇ ಪ್ರಮುಖವಾಗಬೇಕು. ಸರ್ಕಾರ ದುಡ್ಡು ಕೊಡುತ್ತದೆ ನಿಜ. ಆದರೆ, ಸಮ್ಮೇಳನದ ಯಶಸ್ವಿಗೆ ಪ್ರತಿಯೊಬ್ಬರ ’ನಮ್ಮದು’ ಭಾವವೇ ಪ್ರಮುಖವಾಗಿದೆ ಎಂದರು.

ಬರೀ ಅಲಂಕಾರದ ಸಮ್ಮೇಳನವಾಗಬಾರದು. ಕಚ್ಚಾಡುವವರನು ಕೂಡಿಸಿ ಬೆಸೆಯಬೇಕು. ಕವಿಯ ಮಾತಿನಲ್ಲಿ ಹೇಳುವುದಾದರೆ ‘ಸತ್ತಂತಿಹರನು ಬಡಿದೆಚ್ಚರಿಸು..’ ಎನ್ನುವಂತಾಗಬೇಕು ಎಂದರು.

ವಿಶೇಷ ಉಪನ್ಯಾಸ ನೀಡಿದ ಸ್ವಾಮಿರಾವ್ ಕುಲಕರ್ಣಿ, ಜೀವನವೇ ಸಾಹಿತ್ಯ ಆಗಿರುವಾಗ ಸಮ್ನಮೇಳನಗಳೂ ಸಹ ‘ನಮ್ಮ’ ಎಂಬ ಭಾವದ ಭಾಗವಾಗಬೇಕು ಎಂದು ಆಶಿಸಿದರು.

ಅಧ್ಯಕ್ಷೀಯ ಭಾಷಣ ಮಾಡಿದ ಗು.ವಿ.ವಿ. ಕುಲಪತಿ ಡಾ. ದೇವಿದಾಸ ಮಾಲೆ, ವಿಶ್ವವಿದ್ಯಾಲಯವು ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಯಶಸ್ವಿಗೆ ನೆರವು ನೀಡಲಿದೆ” ಎಂದರು. 

ಎಚ್.ಟಿ. ಪೋತೆ, ವಿಕ್ರಮ, ಶಿವಪುತ್ರ ಮಾವಿನ, ವಿಜಯಕುಮಾರ ಬೀಳಗಿ, ಪರಿಮಳ ಅಂಬೇಕರ್, ಶ್ರೀಶೈಲ ನಾಗರಾಳ, ಸಂಗಪ್ಪ ಹೊಸಮನಿ, ಸುರೇಶ ಬಡಿಗೇರ, ಅಬ್ದುಲ್ ರಬ್ ಉಸ್ತಾದ್, ಸುನಂದಾ, ಎಂ.ಬಿ. ಕಟ್ಟಿ ಮತ್ತು ಅತಿಥಿ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಇನ್ನಿತರರು ಪಾಲ್ಗೊಂಡಿದ್ದರು.

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...