ಸಾಂಸ್ಕೃತಿಕ ವೈರುಧ್ಯದ ಪದರುಗಳ ಅಭಿವ್ಯಕ್ತಿ: ಶೀಲಾಗೌಡ

Date: 14-12-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಬೆಂಗಳೂರು ಮೂಲದ ಪೇಂಟಿಂಗ್ ಹಾಗೂ ಇನ್‌ಸ್ಟಾಲೇಷನ್ಸ್ ಕಲಾವಿದೆ ಶೀಲಾ ಗೌಡ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದೆ: ಶೀಲಾ ಗೌಡ (Sheela Gowda)
ಜನನ: 1957
ಶಿಕ್ಷಣ: ಕೆನ್ ಕಲಾಶಾಲೆ, ಬೆಂಗಳೂರು; ವಿಶ್ವಭಾರತಿ ವಿವಿ, ಶಾಂತಿನಿಕೇತನ; ರಾಯಲ್ ಕಾಲೇಜ್ ಆಫ್ ಆರ್ಟ್, ಲಂಡನ್
ವಾಸ: ಬೆಂಗಳೂರು
ಕವಲು: ಪೋಸ್ಟ್ ಮಿನಿಮಲಿಸ್ಟ್ ಆಬ್‌ಸ್ಟ್ರಾಕ್ಷನ್
ವ್ಯವಸಾಯ: ಪೇಂಟಿಂಗ್ಸ್, ಇನ್‌ಸ್ಟಾಲೇಷನ್ಸ್

ಶೀಲಾಗೌಡ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಒಂದು ಶಿಲ್ಪ ತಾನೇನು ಹೇಳಬೇಕೋ ಅದನ್ನು ಹಲವು ಪದರುಗಳಲ್ಲಿ ತನ್ನ ಅಸ್ಥಿತ್ವ ಮತ್ತು ಅಭಿವ್ಯಕ್ತಿಯ ಮೂಲಕವೇ ಹೇಳಬೇಕು. ಹಾಗೆ ಹೇಳುವಾಗ ಆ ಶಿಲ್ಪ ಇರಿಸಲಾಗಿರುವ ಜಾಗ, ಅದನ್ನು ನೋಡುವ ವೀಕ್ಷಕ ಕೂಡ ಆ ಶಿಲ್ಪದ ಭಾಗವಾಗುತ್ತಾರೆ ಮತ್ತು ಆಗ ಅದನ್ನೊಂದು ಇನ್ಸ್ಟಾಲೇಷನ್ ಆಗಿ ನೋಡುವುದು ಸಾಧ್ಯವಾಗುತ್ತದೆ ಎಂದು ವಿವರಿಸುವ ಶೀಲಾ ಗೌಡ, ಸಮಕಾಲೀನ ಭಾರತದಿಂದ ಹೊರಗೆ ಭಾರತದ ಪ್ರಮುಖ ಕಲಾವಿದರಲ್ಲಿ ಒಬ್ಬರೆಂದು ಪರಿಗಣಿತರಾಗಿದ್ದಾರೆ. ಭಾರತದ ಮೊದಲ ದ್ವೈವಾರ್ಷಿಕ ಕಲಾ ಪ್ರದರ್ಶನ ಕೊಚ್ಚಿ ಮುಝರ್ರಿಸ್ ಬಯೆನ್ನಾಲ್‌ ನಲ್ಲಿ, ಬೆಂಗಳೂರಿನಲ್ಲೇ ಸಂಗ್ರಹಿಸಿದ್ದ ಸುಮಾರು 170 ಮಸಾಲೆ ಅರೆಯಲು ಬಳಕೆಯಾಗುವ ಒರಳುಗಲ್ಲುಗಳನ್ನು ಸಂಗ್ರಹಿಸಿ ಪ್ರದರ್ಶಿಸಿದ್ದ ಅವರ ಶಿಲ್ಪ(Stopover – 2012)ಗಮನ ಸೆಳೆದಿತ್ತು. ಮಹಾನಗರದ ಒಳಗೇ, ಜನದಟ್ಟಣೆಯ ನಡುವೆಯೇ, ಇದ್ದೂ ಕಣ್ಣಿಗೆ ಕಾಣಿಸದಂತಿದ್ದ ಈ ಕಲ್ಲುಗಳು ಕಾಣಬಲ್ಲ ಸ್ವರೂಪಕ್ಕೆ ಬದಲಾಗಿದ್ದವು. ಹೀಗೆ, ಸುಲಭ ಲಭ್ಯ ವಸ್ತುಗಳು, ಚಿತ್ರಗಳಲ್ಲಿ ತನ್ನನ್ನು ಕಂಡುಕೊಂಡು, ವೀಕ್ಷಕರಿಗೂ ಆ ’ಅವಕಾಶ’ದೊಳಗೆ ತಮ್ಮನ್ನು ಕಂಡುಕೊಳ್ಳುವ ಹಾದಿಯನ್ನು ಕಲ್ಪಿಸುವ ಅವರ ಶೈಲಿ ಅನನ್ಯ.

ಕನ್ನಡಿಗರಿಗೆ, ರಾಜ್ಯ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರೂ, ಜನಪದ ಕಲಾಲೋಕದ ರೂವಾರಿಯೂ ಆಗಿದ್ದ ಡಾ| ಎಚ್.ಎಲ್ ನಾಗೇಗೌಡರ ಮಗಳು ಎಂದು ಪರಿಚಿತರಾಗಿರುವ ಶೀಲಾ ಗೌಡ, ಬೆಂಗಳೂರಿನಲ್ಲೇ ವಾಸವಿದ್ದರೂ, ಸಾರ್ವಜನಿಕ ಜೀವನದಿಂದ ಅಂತರ ಕಾಯ್ದುಕೊಂಡಿರುವ ಕಾರಣಕ್ಕೆ ಕರ್ನಾಟಕದಲ್ಲಿ ಸುದ್ದಿಯಲ್ಲಿರುವುದು ತೀರಾ ಕಡಿಮೆ. ಆದರೆ, ಭಾರತದ ಸಮಕಾಲೀನ ಕಲಾ ಜಗತ್ತಿನ ಹೆಸರು ಬಂದಾಗ ಜಾಗತಿಕ ಕಲಾರಂಗ ಗುರುತಿಸುವ ಪ್ರಮುಖ ಹೆಸರುಗಳಲ್ಲಿ ಒಂದು ಶೀಲಾ ಗೌಡ. ಭದ್ರಾವತಿಯಲ್ಲಿ ಜನಿಸಿದ ಅವರು ಬೆಂಗಳೂರಿನ ಕೆನ್ ಕಲಾಶಾಲೆ, ಕೋಲ್ಕತಾದ ಶಾಂತಿನಿಕೇತನ ಮತ್ತು ಬಳಿಕ ಲಂಡನ್ನಿನ ರಾಯಲ್ ಕಾಲೇಜಿನಲ್ಲಿ ಪೇಂಟಿಂಗಿನಲ್ಲಿ ಸ್ನಾತಕ ಪದವಿ ಪಡೆದರು. ಬಳಿಕ. ಆರಂಭದಲ್ಲಿ ಪೇಂಟಿಂಗ್‌ಗಳನ್ನು ಮಾಡುತ್ತಿದ್ದ ಶೀಲಾ, 90ರ ದಶಕದಲ್ಲಿ ಇನ್ಸ್ಟಾಲೇಶನ್ ಕಲೆಯತ್ತ ಹೊರಳಿಕೊಂಡರು. ಅವರು ಸ್ವಿಸ್ ಕಲಾವಿದ ಕ್ರಿಸ್ಟೋಪ್ ಸ್ಟೋರ್ಜ್ ಅವರನ್ನು ಮದುವೆಯಾಗಿದ್ದಾರೆ.

ಸೆಗಣಿ, ಅಗರಬತ್ತಿಯ ಬೂದಿ, ತಲೆಕೂದಲು, ಬಾಗಿಲಿನ ದಾರಂದ, ಫೋಟೊಗಳು, ಕುಂಕುಮದಂತಹ ದೈನಂದಿನ ಬಳಕೆಯ ಮತ್ತು ಭಾರತದ ಒಳಗಿನ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಖಚಿತ ಜಾಗಗಳನ್ನು ಪಡೆದಿರುವ ವಸ್ತುಗಳನ್ನು ಬಳಸಿಕೊಂಡು ಕಲಾಕೃತಿಗಳನ್ನು ರಚಿಸುವ ಶೀಲಾ, ವೀಕ್ಷಕರಿಗೆ ಅಲ್ಲಿಂದ ಮುಂದಕ್ಕೆ ಆ ಕಲಾಕೃತಿಯ ಚಿಂತನೆಗಳನ್ನು ಒಯ್ಯಲು ಪ್ರೇರಕ ಅಂಶಗಳನ್ನು ಒದಗಿಸುತ್ತಾರೆ. ಬೆಂಗಳೂರಿನಲ್ಲಿ ನಡೆದ ಹಕ್ಕಿಪಿಕ್ಕಿ ಸಮುದಾಯದವರ ಪ್ರತಿಭಟನೆಯ ಚಿತ್ರವೊಂದನ್ನು ಬಳಸಿಕೊಂಡು, ಅದನ್ನು ಅಲ್ಲಿಂದ ಮುಂದೆ ಆ ಸಮುದಾಯದ ತನ್ನನ್ನು ಜನ ಹೇಗೆ ನೋಡಬಯಸುತ್ತಾರೆಂದು ಕಲ್ಪಿಸಿಕೊಂಡು ಪ್ರಸ್ತುತಪಡಿಸಿಕೊಳ್ಳುವುದನ್ನೂ ಮತ್ತು ಜನ ಒಂದು ಬುಡಕಟ್ಟು ಸಮುದಾಯದ ಎಂದರೆ ಹೇಗೆ ಕಲ್ಪಿಸಿಕೊಳ್ಳಬಯಸುತ್ತಾರೆ ಎಂಬುದನ್ನೂ ಮುಖಾಮುಖಿ ಮಾಡಿಸುವ ಕಲಾವಿದೆ, ಅಲ್ಲಿರುವ ವೈರುಧ್ಯಗಳ ಸೂಕ್ಷ್ಮಗಳನ್ನು ಪ್ರಸ್ತುತಪಡಿಸುತ್ತಾರೆ. (ವಿಡಿಯೊ ಲಿಂಕ್ ನೊಡಿ)

ಅಂತಹದೇ ಇನ್ನೊಂದು ಉದಾಹರಣೆ ಎಂದರೆ ವಾಹನಗಳನ್ನು ನಿಯಂತ್ರಿಸುವ ಚಾಲಕರು, ತಮ್ಮ ನಿಯಂತ್ರಣವನ್ನು ಮೀರಿದ ನಿಯಂತ್ರಣವೊಂದಕ್ಕಾಗಿ ತಲೆಕೂದಲುಗಳಿಂದ ಮಾಡಿದ ಮಾಲೆಗಳನ್ನು ತಮ್ಮ ವಾಹನಗಳಿಗೆ ಸಿಕ್ಕಿಸಿಕೊಳ್ಳುವುದು – ಈ ವೈರುಧ್ಯಗಳನ್ನು ಅವರು ಸುಮಾರು 4000ಮೀಟರ್ ತಲೆಕೂದಲ ಮಾಲೆ ಮಾಡಿ ಅದನ್ನು ಸುಮಾರು 20 ಕಾರು ಬಂಪರ್‌ಗಳಿಗೆ ಸಿಕ್ಕಿಸಿಟ್ಟು ಪ್ರಸ್ತುತಪಡಿಸುತ್ತಾರೆ. (Behold - 2009) ಇದು ವೆನೀಸ್ ಬಯೆನಾಲ್ (2009)ನಲ್ಲಿ ಪ್ರದರ್ಶನಗೊಂಡಿತ್ತು.

ಈ ಎಲ್ಲ ಕಲಾಕೃತಿಗಳೂ “ಸೈಟ್ ಸ್ಪೆಸಿಫಿಕ್” ಆಗಿದ್ದು, ಪ್ರತಿಯೊಂದೂ ಸ್ಥಳದಲ್ಲಿ ಪ್ರದರ್ಶನಗೊಳ್ಳುವಾಗ ಆ ಸ್ಥಳ-ಅವಕಾಶ-ಅಲ್ಲಿನ ವೀಕ್ಷಕರ ಒಂದು ಸಮಗ್ರ ದೃಷ್ಟಿಕೋನವನ್ನು ಪರಿಗಣಿಸಿಕೊಂಡು ಮರುಸ್ಥಾಪನೆಗೊಳ್ಳುವುದು ವಿಶಿಷ್ಠ. ಅವರ Darkroom (2006) ಕಲಾಕೃತಿಯಲ್ಲಿ, ಡಾಮರು ಡ್ರಂಗಳನ್ನು ಕತ್ತರಿಸಿ, ಮನೆಗಳಂತೆ ಮರುಜೋಡಿಸಿಡಲಾಗಿದೆ. ಸಾಮಾನ್ಯವಾಗಿ ಮನೆ ಎಂಬುದು ದೇಹದ ಆರಾಮಕ್ಕೆ ತಕ್ಕಂತೆ ನಿರ್ಧಾರ ಆಗಬೇಕು. ಆದರೆ, ಇಲ್ಲಿ ಆ ಮನೆಯ ನಿರ್ಮಾಣಕ್ಕೆ ಸುಲಭ ಲಭ್ಯವಾಗಿದ್ದ ಡಾಮರು ಡ್ರಂಗಳು ವ್ಯಕ್ತಿಯ ಆರಾಮವನ್ನು ವ್ಯಾಖ್ಯಾನಿಸುತ್ತವೆ. ರಸ್ತೆ ಕಾರ್ಮಿಕರ ಡಾಮರು ಡ್ರಂ ಗುಡಿಸಲುಗಳನ್ನು ಕಂಡು, ಅದರಿಂದ ಪ್ರೇರಿತಗೊಂಡ ಅವರ ಕಲಾಕೃತಿ ಇದು.

ಅವರ Tell Him of My Pain (1998) ಕಲಾಕೃತಿಯಲ್ಲಿ, ಕುಂಕುಮದಲ್ಲಿ ಅದ್ದಿದ ರಕ್ತಸಿಕ್ತ 750 ಅಡಿ ಉದ್ದದ 120 ದಾರಗಳ ಉದ್ದಕ್ಕೂ ಸೂಜಿಗಳನ್ನು ಜೋಡಿಸಿ ಅದನ್ನು ಗ್ಯಾಲರಿಯಲ್ಲಿ ಪ್ರದರ್ಶಿಸಲಾಗಿತ್ತು. ಅವರ Of All People (2011) ಕಲಾಕೃತಿಯಲ್ಲಿ ರಕ್ತಚಂದನದ ಬೊಂಬೆಗಳನ್ನು , ವಿರೂಪಗೊಂಡ ಬಾಗಿಲು ದಾರಂದಗಳನ್ನು ಬಳಸಲಾಗಿತ್ತು ಬೆಂಗಳೂರು, ಮುಂಬಯಿ, ದಿಲ್ಲಿ ಅಲ್ಲದೆ ಲಂಡನ್, ನ್ಯೂಯಾರ್ಕ್, ಜರ್ಮನಿ, ನೆದರ್ಲ್ಯಾಂಡ್, ಇಟಲಿ ಸೇರಿದಂತೆ ಜಗತ್ತಿನ ಹಲವೆಡೆ ಪ್ರಮುಖ ಕಲಾ ಪ್ರದರ್ಶನಗಳಲ್ಲಿ ಅವರ ಕಲಾಕೃತಿಗಳು ಪ್ರದರ್ಶನಗೊಂಡಿವೆ.

ಶೀಲಾಗೌಡ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಸಿಂಗಾಪುರದ NTU ಸೆಂಟರ್ ಫಾರ್ ಕಂಟೆಂಪೊರರಿ ಆರ್ಟ್‌ನಲ್ಲಿ ಶೀಲಾ ಗೌಡ ಮಾತುಗಳು:

ಶೀಲಾ ಗೌಡ ಅವರ ಜೊತೆ ನೂರಿಯಾ ಎಂಗ್ವಿಟಾ ಮತ್ತು ಲೂಸಿಯಾ ಆಸ್ಪೇಸಿ ಮಾತುಕತೆ:

ಚಿತ್ರ ಶೀರ್ಷಿಕೆಗಳು:

ಶೀಲಾ ಗೌಡ ಅವರ And Tell Him of My Pain (1998-2001)

ಶೀಲಾ ಗೌಡ ಅವರ Behold (2009)

ಶೀಲಾ ಗೌಡ ಅವರ Blanket and the Sky, (2004)

ಶೀಲಾ ಗೌಡ ಅವರ Collateral (2011), Documenta 12, Kassel, at the Therein and Besides exhibition, Iniva, London

ಶೀಲಾ ಗೌಡ ಅವರ Collateral 2011 (installation view) Photo- Thierry Bal

ಶೀಲಾ ಗೌಡ ಅವರ Cut Flowers, (2011)

ಶೀಲಾ ಗೌಡ ಅವರ Gallant Hearts, (1996)

ಶೀಲಾ ಗೌಡ ಅವರ Loss (2008)

ಶೀಲಾ ಗೌಡ ಅವರ Manhole, (2015)

ಶೀಲಾ ಗೌಡ ಅವರ Of All People (2011) part of Therein and Besides exhibition at Iniva, London.

ಶೀಲಾ ಗೌಡ ಅವರ Remains (2019)

 

ಶೀಲಾ ಗೌಡ ಅವರ This, deathless, (2014)

ಈ ಅಂಕಣದ ಹಿಂದಿನ ಬರೆಹಗಳು:
ಅಕ್ಷರಗಳನ್ನು ಅಮೂರ್ತಗೊಳಿಸುವ ಗ್ಲೆನ್ ಲೈಗನ್
ಕಲೆಯ ಪ್ರಜಾತಾಂತ್ರೀಕರಣ – ಡೊನಾಲ್ಡ್ ಜಡ್
ಕಲೆಯ ಅತಿರೇಕದ ಮಿತಿಗಳನ್ನು ವಿಸ್ತರಿಸಿದ ಕ್ರಿಸ್ ಬರ್ಡನ್:
"ದಾ ಷಾನ್ ಝಿ” ಯ “ಕ್ಸಿಂಗ್‌ವೇಯಿ ಈಷು” ಮುಂಗೋಳಿ - ಝಾಂಗ್ ಹುವಾನ್
ಕಟ್ಟಕಡೆಯ ಸರ್ರಿಯಲಿಸ್ಟ್ – ಲಿಯೊನೊರಾ ಕೇರಿಂಗ್ಟನ್
ಸ್ಟ್ರೀಟ್ ಟು ಗ್ಯಾಲರಿ – ಕೀತ್ ಹೆರಿಂಗ್:
ನಾನು ಮ್ಯಾಟರಿಸ್ಟ್: ಕಾರ್ಲ್ ಆಂದ್ರೆ:
ಫೊಟೋಗ್ರಫಿಯನ್ನು ಸಮಕಾಲೀನ ಆರ್ಟ್ ಮಾಡಿದ ವಿಕ್ ಮ್ಯೂನಿಸ್
ನನ್ನದೇ ಸಂಗತಿಗಳಿವು: ಆದರೆ ಕೇವಲ ನನ್ನವಲ್ಲ– ಶಿರಿನ್ ನೆಹಶಾತ್
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
ಸದಭಿರುಚಿ ಎಂಬುದು ಆಧುನಿಕ ಬದುಕಿನ ಶಾಪ – ಗಿಲ್ಬರ್ಟ್ ಮತ್ತು ಜಾರ್ಜ್
ಆನೆಲದ್ದಿ ಮತ್ತು ಕ್ರಿಸ್ ಒಫಿಲಿ
ನಿಸರ್ಗ ನನ್ನ ಸಹಶಿಲ್ಪಿ – ಆಂಡಿ ಗೋಲ್ಡ್ಸ್‌ವರ್ದಿ
ಫಿಗರೇಟಿವ್ ಚಿತ್ರಗಳು ಕೂಡಾ ಇಂದು ಪ್ರಸ್ತುತ – ಪೀಟರ್ ಡಾಯ್
ಕಾನ್ಸೆಪ್ಚುವಲ್ ಆರ್ಟ್‌ನ ಜನಕ – ಸೊಲ್ ಲೆವಿಟ್
ಮನುಷ್ಯ ಆಗಿರೋದು ಅಂದ್ರೆ ಏನು?- ವಿಲಿಯಂ ಕೆಂಟ್ರಿಜ್
“ಸೂಪರ್ ಫ್ಲ್ಯಾಟ್” ಐ ಕ್ಯಾಂಡಿಗಳ ತಕಾಷಿ ಮುರಾಕಾಮಿ
ಅಲ್ಲಿರುವುದು ನನ್ನಮನೆ – ದೊ ಹೊ ಸುಹ್
ದಿ ಲೈಫ್ ಆಫ್ CB: ಅರ್ಥಾತ್, ಕ್ರಿಷ್ಚಿಯನ್ ಬೋಲ್ತನಸ್ಕಿ
ಅಸೆಂಬ್ಲಿಗಳಲ್ಲಿ “ಬಾಕತನ” ತೋರಿಸಿದ ಅರ್ಮಾನ್
ಪ್ರಾಮಾಣಿಕತೆಯೇ ಸೌಂದರ್ಯ- ಜೊರ್ಗ್ ಇಮ್ಮೆಂದ್ರಾಫ್
ನಾಗರೀಕತೆಯ ಒಡಕಿಗೆ ಕನ್ನಡಿ ಹಿಡಿದ ಡೊರಿಸ್ ಸಾಲ್ಸೆದೊ
ಕಾನ್ಸೆಪ್ಚುವಲ್ ಆರ್ಟ್‌ಗೆ ತಳಪಾಯ –ರಾಬರ್ಟ್ ರಾಷನ್‌ಬರ್ಗ್
ಡಿಜಿಟಲ್ ಜಗತ್ತಿನಲ್ಲಿ ಒರಿಜಿನಲ್‌ನ ಹುಡುಕಾಟ – ಥಾಮಸ್ ರಫ್
ಕಲೆ ಜಗತ್ತನ್ನು ಬದಲಾಯಿಸಲೇ ಬೇಕೆಂದಿಲ್ಲ- ಫಿಯೊನಾ ಹಾಲ್
ಜಾಗತೀಕರಣದ ಆಟಗಳ ಬೆನ್ನಟ್ಟಿರುವ ಇಂಕಾ ಶೋನಿಬೇರ್
ಅರ್ಥವಂತಿಕೆಗಾಗಿ ಅರ್ಥ ಕಳೆದುಕೊಳ್ಳಬೇಕೆಂಬ- ಗು ವೆಂಡಾ
ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್
ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್
‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್
ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್
ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್
ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್
ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್
“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್
ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಒಳಗಣ ಅನಂತ ಮತ್ತು ಹೊರಗಣ ಅನಂತ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

 

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...