ಸಂಗಾತದಿಂದ ಚಿ.ಶ್ರೀನಿವಾಸರಾಜು ಕಾವ್ಯ ಸ್ಪರ್ಧೆಗೆ ಹಸ್ತಪ್ರತಿ ಆಹ್ವಾನ

Date: 08-07-2020

Location: ಧಾರವಾಡ


‘ಸಂಗಾತ’ ತ್ರೈಮಾಸಿಕ ಸಾಹಿತ್ಯ ಪತ್ರಿಕೆಯು ‘ಚಿ. ಶ್ರೀನಿವಾಸರಾಜು ಕಾವ್ಯ ಸ್ಪರ್ಧೆ - 2020’ ಆಯೋಜಿಸಿದ್ದು, ಹಸ್ತಪ್ರತಿಯನ್ನು ಆಹ್ವಾನಿಸಿದೆ. ತೀರ್ಪುಗಾರರಿಂದ ಆಯ್ಕೆಯಾದ ಕವನ ಸಂಕಲನವನ್ನು ‘ಸಂಗಾತ ಪುಸ್ತಕ’ವು ಚಿ.ಶ್ರೀನಿವಾಸರಾಜು ಅವರು ಗೆಳೆಯರೊಂದಿಗೆ ಆರಂಭಿಸಿದ್ದ ಪಿ.ಪಿ.ಗೆಳೆಯರ ಬಳಗದ ಸಹಯೋಗದಲ್ಲಿ ಪ್ರಕಟಿಸಲಿದೆ.  ಜಿ.ಪಿ.ರಾಜರತ್ನಂ ಜನ್ಮದಿನವಾದ ಡಿಸೆಂಬರ್ 5ರಂದು ಕೃತಿ ಲೋಕಾರ್ಪಣೆ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು. 

ಸ್ಪರ್ಧೆಯ ನಿಯಮಗಳು:

  • 40 ವರ್ಷದೊಳಗಿನ ಕವಿಗಳು ಡಿಟಿಪಿ ಮಾಡಿದ ಹಸ್ತಪ್ರತಿ ಕಳುಹಿಸಬಹುದು. 
  • ಹೆಸರು ಮತ್ತು ವಿಳಾಸ ಪ್ರತ್ಯೇಕ ಪುಟದಲ್ಲಿರಲಿ. 
  • ಹಸ್ತಪ್ರತಿ ಕಳಿಸಲು ಆಗಸ್ಟ್ 25 ಕೊನೆಯ ದಿನಾಂಕ. 

ಹಸ್ತಪ್ರತಿ ಕಳುಹಿಸುವ ವಿಳಾಸ: ಟಿ.ಎಸ್.ಗೊರವರ, ಸಂಪಾದಕರು, ಸಂಗಾತ ಪತ್ರಿಕೆ, ಕೆಯುಡಿ ರಸ್ತೆ, ಜಯನಗರ ಕ್ರಾಸ್, ಸಪ್ತಾಪುರ, ಧಾರವಾಡ – 580001, 

ಸಂಪರ್ಕ ಸಂಖ್ಯೆ: 9341757653 

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...