ಸಂಕಥನ-4 ಮಾಧ್ಯಮ ಮತ್ತು ಸಾಹಿತ್ಯ

Date: 21-10-2019

Location: ರವೀಂದ್ರ ಕಲಾ ಕ್ಷೇತ್ರ


ಸಾಹಿತ್ಯಾಸಕ್ತ ಗೆಳೆಯರು ಕಳೆದ ಐದು ವರ್ಷಗಳ ಹಿಂದೆ ಆರಂಭಿಸಿದ ಸಂಕಥನ ಈವರೆಗೆ ಸಾಹಿತ್ಯದ ಜೊತೆ-ಜೊತೆಗೆ ಹಲವಾರು ವಿಷಯಗಳ ಕುರಿತು ಚರ್ಚೆಸುತ್ತಾ, ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಅದರಂತೆ ಈ ಬಾರಿಯ ಸಂಕಥನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆರ್ಟ್ ಗ್ಯಾಲರಿಯಲ್ಲಿ ನಡೆಯಿತು. ಸಂಕಥನ -4 ರ ಭಾಗವಾಗಿ ‘ಮಾಧ್ಯಮ ಮತ್ತು ಸಾಹಿತ್ಯ’ ಎಂಬ ವಿಚಾರವನ್ನು ಚರ್ಚಿಸಲಾಯುತು. ಕಾರ್ಯಕ್ರಮದಲ್ಲಿ ಮಾಧ್ಯಮ ಕ್ಷೇತ್ರದ ಟೀನಾ ಶಶಿಕಾಂತ್, ಶೃತಿ ಹೊ.ಮ, ಮಂಜುಳಾ ಹುಲಿಕುಂಟೆ, ಸ್ನೇಹ ಕಾರಂತ್ ಭಾಗಿಯಾಗಿದ್ದರು ಜೊತೆಗೆ ಹಿರಿಯ ಪತ್ರಕರ್ತೆ ಹಾಗೂ ಅಂಕಣಕಾರ್ತಿ ಸಿ.ಜಿ. ಮಂಜುಳಾ ಮತ್ತು ಹಿರಿಯ ಛಾಯಾಗ್ರಾಹಕ ಮತ್ತು ಸಾಕ್ಷ್ಯ ಚಿತ್ರ ನಿರ್ದೇಶಕ ಪರಮೇಶ್ವರ ಗುರುಸ್ವಾಮಿ ಸೇರಿದಂತೆ ಹಲವು ಲೇಖಕ, ಲೇಖಕಿಯರು, ಮಾಧ್ಯಮ ಕ್ಷೇತ್ರದ ಹಿರಿ-ಕಿರಿಯರು ಭಾಗಿಯಾಗಿದ್ದರು. ಕಾರ್ಯಕ್ರಮದ ಆಯೋಜಕರಾದ ರಾಜೇಂದ್ರ ಪ್ರಸಾದ್ ಅವರು ಚರ್ಚಾ ಕಾರ್ಯಕ್ರಮದ ನಿರೂಪಣೆ ಮಾಡಿದರು.  ಈ ಕಾರ್ಯಕ್ರಮದಲ್ಲಿ ಮಾಧ್ಯಮದ ಸ್ಥಿತಿ-ಗತಿ, ಮಾಧ್ಯಮ ಕ್ಷೇತ್ರದ ಅನುಭವ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಸಾಹಿತ್ಯದ ಕುರಿತು ಚರ್ಚಿಸಲಾಯ್ತು. 

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...