‘ಸನ್ಮಾನಗಳು ಜವಾಬ್ದಾರಿಯನ್ನು ಹೆಚ್ಚಿಸುತ್ತವೆ’ : ಕವಿತಾ ಅಡೂರು

Date: 30-01-2023

Location: ಬೆಂಗಳೂರು


"ಸನ್ಮಾನಗಳು ಜವಾಬ್ದಾರಿಯನ್ನು ಹೆಚ್ಚಿಸುತ್ತವೆ’ ಎಂದು ಕವಯತ್ರಿ ಕವಿತಾ ಅಡೂರು ಅಭಿಪ್ರಾಯಪಟ್ಟರು.

ಪುತ್ತೂರಿನ ವಾಹಿನಿ ಕಲಾ ಸಂಘ, ‘ವಾಹಿನಿ ಸಾಹಿತ್ಯ ಸಂಭ್ರಮ 2023’ ಕಾರ್ಯಕ್ರಮವನ್ನು ಪುತ್ತೂರಿನಲ್ಲಿ ಹಮ್ಮಿಕೊಂಡಿತ್ತು.

ಕಾಸರಗೋಡಿನ ಹಿರಿಯ ಸಾಹಿತಿ ಕೃಷ್ಣಯ್ಯ ಅನಂತಪುರ ಅಧ್ಯಕ್ಷತೆಯಲ್ಲಿ, ಮಧುರಗಣಪನ ಮುಕ್ತಕಗಳು, ಬೆಳ್ಳಿರಥದ ಭಾವಯಾನ, ನಂದಿಗೇಶನ ಮುಕ್ತಕಗಳು ಹಾಗೂ ಭಾವ ಮೇಘಮಾಲೆ ಕೃತಿಗಳ ಬಿಡುಗಡೆ, ಸಾಧಕರಿಗೆ ಸನ್ಮಾನ ಹಾಗೂ ಹಾಸ್ಯ ಸಿಂಚನ ಕಾರ್ಯಕ್ರಮವನ್ನು ವಿಜಯಾ ಶಶಿಕಾಂತ್ ಅವರು ಉದ್ಘಾಟಿಸಿದರು.

ವಾಹಿನಿ ಕಲಾ ಸಂಫದ ಅಧ್ಯಕ್ಷ ಮಧುರಕಾನನ ಗಣಪತಿ ಭಟ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಾಲ ಮಧುರಕಾನನ ಅವರು ಶುಭಾಶಂಸನೆಗೈದರು. ವಿ.ಬಿ. ಆರ್ತಿಕಜೆಯವರ ಉಪಸ್ಥಿತಿಯಲ್ಲಿ ಮಧುರಕಾನನ ಗಣಪತಿ ಭಟ್, ಸಾನು ಉಬರಡ್ಕ, ಮತ್ತು ಗೋಪಾಲಕೃಷ್ಣ ಭಟ್ ಮನವಳಿಕೆ ರವರ ಕೃತಿಗಳನ್ನು ಹರಿನರಸಿಂಹ ಉಪಾಧ್ಯಾಯ, ಸುರೇಶ ನೆಗಳಗುಳಿ ಮತ್ತು ಅನುರಾಧ ಶಿವಪ್ರಕಾಶ್ ಪರಿಚಯ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ತಾಲೂಕು ಕ.ಸಾ.ಪ ಅಧ್ಯಕ್ಷ ಉಮೇಶ್ ನಾಯಕ್ ಶುಭ ಹಾರೈಸಿದರು. ಪಿ.ಎನ್. ಮೂಡಿತ್ತಾಯರಿಂದ ಹಾಸ್ಯ ಸಿಂಚನ ಮೂಡಿಬಂತು. ಆಶಾ ಮಯ್ಯ, ಸುಮಾ ಕಿರಣ್ ಸಾನು ಉಬರಡ್ಕ, ಭಾರತಿ ಕೊಲ್ಲರಮಜಲು ನಿರೂಪಣೆ ಮಾಡಿದರು.

ಅಪರಾಹ್ನದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಎಸ್. ಕೆ. ಗೋಪಾಲಕೃಷ್ಣ ಭಟ್ ವಹಿಸಿದ್ದು, ಕವಿತಾ ಅಡೂರು ರವರು ಕವಿಗೋಷ್ಠಿಗೆ ಚಾಲನೆ ನೀಡಿದರು. ಪ್ರೇಮಾ ಉದಯ್ ಸ್ವಾಗತಿಸಿದರು. ಅಶೋಕ ಎನ್. ಕಡೆಶಿವಾಲಯ , ಉದಯರವಿ ಕೆ, ವಿಜಯಕಾನ ಮತ್ತು ಶಂಕರಿ ಶರ್ಮ ಉಪಸ್ಥಿತರಿದ್ದರು. ವಿವಿಧ ಭಾಗಗಳಿಂದ ಆಗಮಿಸಿದ ಕವಿಗಳು ತಮ್ಮ ಸ್ವರಚಿತ ಕವನ ವಾಚಿಸಿದರು. ವಿಶ್ವನಾಥ ಕುಲಾಲ್ ಹಾಗೂ ಗೋಪಾಲಕೃಷ್ಣ ಶಾಸ್ತ್ರಿ ವಂದನಾರ್ಪಣೆ ಸಲ್ಲಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು..

ಕಾರ್ಯಕ್ರಮದ ಫೋಟೋ ಗ್ಯಾಲರಿ:

 

 

 

 

 

 

 

 

 

MORE NEWS

ಪ್ರಕಾಶ ಖಾಡೆ ‘ಬಾಳುಕುನ ಪುರಾಣ’ ಕೃತಿಗೆ ಕಸಾಪ ಅರಕೇರಿ ದತ್ತಿ ಪ್ರಶಸ್ತಿ

29-03-2024 ಬೆಂಗಳೂರು

ಬಾಗಲಕೋಟೆ: ಸಾಹಿತಿ ಡಾ.ಪ್ರಕಾಶ ಗ.ಖಾಡೆ ಅವರ ‘ಬಾಳುಕುನ ಪುರಾಣ’ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್...

2024ನೇ ಸಾಲಿನ ಬುಕ್‌ ಬ್ರಹ್ಮ ಕಥಾ ಸ್ಪರ್ಧೆ - ಕಾದಂಬರಿ ಪುರಸ್ಕಾರಕ್ಕೆ ಆಹ್ವಾನ

29-03-2024 ಬೆಂಗಳೂರು

ʻಬುಕ್‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2024 ಮತ್ತು ಕಾದಂಬರಿ ಪುರಸ್ಕಾರ 2024ʼ ರೂ. 2 ಲಕ್ಷ 69 ಸ...

25 ಮಂದಿಗೆ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್ತಿ

28-03-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಪ್ರಸಕ್ತ ಸಾಲಿನ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್...