ಶೈವಾಗಮಗಳಲ್ಲಿ ವಿಭೂತಿ

Date: 28-11-2022

Location: ಬೆಂಗಳೂರು


“ಅರಿಶಿಣ-ಕುಂಕುಮ ಮಾಂತ್ರಿಕ ದೇವತೆಗಳ ಆರಾಧನೆಯ ಪರಿಕರಗಳಾಗಿರುವುದರಿಂದ ಶರಣರು ಅವುಗಳನ್ನು ಧರಿಸದೆ, ವಿಭೂತಿಯನ್ನು ಧರಿಸಬೇಕೆಂದು ಹೇಳಿದ್ದಾರೆ. ಶರಣರು ಮಾಟ-ಮಂತ್ರಗಳನ್ನು ನಂಬುವವರಲ್ಲ, ಅಷ್ಟಾವರಣಗಳಲ್ಲಿ ಅವರು ಹೇಳಿದ ಮಂತ್ರದ ವ್ಯಾಖ್ಯೆ ವಿನೂತನವಾಗಿದೆ” ಎನ್ನುತ್ತಾರೆ ಬಸವರಾಜ ಸಬರದ. ಅವರು ತಮ್ಮ ಶರಣರ ಧಾರ್ಮಿಕ ಸಿದ್ಧಾಂತಗಳು ಅಂಕಣದಲ್ಲಿ ‘ವಿಭೂತಿ’ಯ ಪರಿಕಲ್ಪನೆಯನ್ನು ಚರ್ಚಿಸಿದ್ದಾರೆ.

ಶೈವಾಗಮಗಳಲ್ಲಿ ವಿಭೂತಿ-ರುದ್ರಾಕ್ಷಿ-ಮಂತ್ರಗಳ ಪ್ರಸ್ತಾಪವಿದೆ. ಆದರೆ ಈ ವಿಷಯದಲ್ಲಿ ಆಗಮಗಳಲ್ಲಿ ಹೇಳಿದ ವಿಚಾರಗಳಿಗೂ, ಶರಣರು ಹೇಳಿದ ವಿಚಾರಗಳಿಗೂ ತುಂಬ ವ್ಯತ್ಯಾಸವಿದೆ. “ವಿಭೂತಿ” ಪದಕ್ಕೆ ಸಂಬಂಧಿಸಿದಂತೆ ಅನೇಕ ವ್ಯಾಖ್ಯೆಗಳಿವೆ. ವಿಭೂತಿಯೆಂದರೆ ಭಸ್ಮವೆಂದು ಎಲ್ಲರೂ ಹೇಳುತ್ತಾರೆ. ಆಕಳ ಸೆಗಣ ಯ ಕುಳ್ಳನ್ನು ಸುಟ್ಟು ಭಸ್ಮ ಮಾಡುತ್ತಾರೆ. ಸುಡುವ, ಶುದ್ಧೀಕರಿಸುವ ಕ್ರಿಯೆ ಇಲ್ಲಿ ಮುಖ್ಯವಾಗುತ್ತದೆ.

ಭೂತಿಯೆಂದರೆ ಹುಟ್ಟು-ಜನನ ಎಂದರ್ಥವಿದೆ. ಹುಟ್ಟಿದ ಮನುಷ್ಯ ಕಾಮ-ಕ್ರೋಧ ಮೊದಲಾದ ಷಡ್‍ವೈರಿಗಳೊಂದಿಗೆ ಬೆಳೆಯುತ್ತಾನೆ. ಇಂತಹ ಭೂತಿಯ ವಿಕಾರಗಳನ್ನು ಸುಟ್ಟು ಆತನನ್ನು ವಿಶೇಷವಾಗಿ ಬೆಳೆಸುವುದೇ ವಿಭೂತಿಯ ವೈಶಿಷ್ಟ್ಯತೆಯಾಗಿದೆ. ಇಂತಹ ಪುರುಷನಿಗೆ ವಿಭೂತಿ ಪುರುಷನೆಂದು ಕರೆಯುತ್ತಾರೆ. ವಿಭೂತಿ ಪುರುಷನೆಂದರೆ ಮಹಾಪುರುಷ ಎಂಬರ್ಥವಿದೆ. ಹೀಗೆ ವಿಭೂತಿ ಹಣೆಗೆ ಧರಿಸುವ ಭಸ್ಮವಾಗುವದರ ಜತೆಗೆ ಸಾಮಾನ್ಯ ವ್ಯಕ್ತಿಯನ್ನು ಮಹಾಪುರುಷನನ್ನಾಗಿ ಮಾಡುವ ಸಾಧನವಾಗಿದೆ. ಭವಪಾಶವನ್ನು ಹರಿಯುವದೇ ವಿಭೂತಿಯ ಉದ್ದೇಶವಾಗಿದೆ.

ಬಸವಾದಿ ಶರಣರು ವಿಭೂತಿಯ ಬಗೆಗೆ ಎರಡು ರೀತಿಯ ವ್ಯಾಖ್ಯೆಗಳನ್ನು ಮಾಡಿದ್ದಾರೆ. ಹಣೆಗೆ ಧರಿಸುವ ವಿಭೂತಿ ಒಂದಾದರೆ ಪುರುಷ-ವಿಭೂತಿಪುರುಷನಾಗಿ ಬೆಳೆಯುವುದು ಮತ್ತೊಂದಾಗಿದೆ. ಹೊರಗೆ ಕಾಣುವ ನೊಸಲ ವಿಭೂತಿಯ ಜತೆಗೆ, ಒಳಗಿನ ಕಾಮ-ಕ್ರೋಧ ವಿಕಾರಗಳನ್ನು ಸುಟ್ಟು ಹಾಕುವುದು ನಿಜವಾದ ವಿಭೂತಿಯಾಗಿದೆ. ಈ ಎರಡು ರೀತಿಯ ವಿಭೂತಿಗಳ ಬಗೆಗೆ ಶರಣರು ತಿಳಿಸಿದ್ದಾರೆ. ಅರಿಶಿಣ-ಕುಂಕುಮ ಮಾಂತ್ರಿಕ ದೇವತೆಗಳ ಆರಾಧನೆಯ ಪರಿಕರಗಳಾಗಿರುವುದರಿಂದ ಶರಣರು ಅವುಗಳನ್ನು ಧರಿಸದೆ, ವಿಭೂತಿಯನ್ನು ಧರಿಸಬೇಕೆಂದು ಹೇಳಿದ್ದಾರೆ. ಶರಣರು ಮಾಟ-ಮಂತ್ರಗಳನ್ನು ನಂಬುವವರಲ್ಲ, ಅಷ್ಟಾವರಣಗಳಲ್ಲಿ ಅವರು ಹೇಳಿದ ಮಂತ್ರದ ವ್ಯಾಖ್ಯೆ ವಿನೂತನವಾಗಿದೆ.

“ನೀರಿಂಗೆ ನೈದಿಲೆಯೆ ಶೃಂಗಾರ, ಸಮುದ್ರಕ್ಕೆ ತೆರೆಯೆ ಶೃಂಗಾರ
ನಾರಿಗೆ ಗುಣವೆ ಶೃಂಗಾರ, ಗಗನಕ್ಕೆ ಚಂದ್ರಮನೆ ಶೃಂಗಾರ
ನಮ್ಮ ಕೂಡಲಸಂಗನ ಶರಣರಿಗೆ ನೊಸಲ ವಿಭೂತಿಯೆ ಶೃಂಗಾರ.”

-ಬಸವಣ್ಣ (ಸ.ವ.ಸಂ.1, ವ:74)

2) “ಶ್ರೀ ವಿಭೂತಿಯ ಹೂಸದವರ, ಶ್ರೀ ರುದ್ರಾಕ್ಷಿಯ ಧರಿಸದವರ
ನಿತ್ಯ ಲಿಂಗಾರ್ಚನೆಯ ಮಾಡದವರ, ಜಂಗಮವೇ ಲಿಂಗವೆಂದರಿಯದವರ
ತೋರದಿರು ಕೂಡಲಸಂಗಮದೇವಾ, ಸೆರಗೊಡ್ಡಿ ಬೇಡುವೆನು.

-ಬಸವಣ್ಣ (ಸ.ವ.ಸಂ.1, ವ:455)

ಈ ಎರಡು ವಚನಗಳಲ್ಲಿ ಬವಸಣ್ಣ ಹೊರಗಿನ ವಿಭೂತಿಯ ಬಗ್ಗೆ ಹೇಳಿದ್ದಾರೆ. ಮೊದಲಿನ ವಚನದಲ್ಲಿ ಅಲಂಕಾರಿಕ ಉದಾಹರಣೆಗಳಿವೆ. ನೀರಿಗೆ-ನೈದಿಲೆ, ಸಮುದ್ರಕ್ಕೆ-ತೆರೆ, ನಾರಿಗೆ-ಗುಣ, ಗಗನಕ್ಕೆ-ಚಂದ್ರಮ ಶೃಂಗಾರವಾಗಿರುವಂತೆ ಶರಣರಿಗೆ-ನೊಸಲ ವಿಭೂತಿಯೇ ಶೃಂಗಾರವಾಗಿದೆಯೆಂದು ಹೇಳಲಾಗಿದೆ. ಎರಡನೇ ವಚನದಲ್ಲಿ ವಿಭೂತಿಧರಿಸದವರ ಮುಖವ ನೋಡಲಾಗದು, ಅಂತವರನ್ನು ತೋರದಿರೆಂದು ಕೂಡಲಸಂಗಯ್ಯನಲ್ಲಿ ಬೇಡಿಕೊಂಡಿದ್ದಾರೆ.

“ಸಕಲಕ್ರಿಯೆಗಳಿಗಿದು ಕವಚ, ಸಕಲವಶ್ಯಕ್ಕಿದು ಶುಭ ತಿಲಕ” ವೆಂದು ಮತ್ತೊಂದು ವಚನದಲ್ಲಿ ಹೇಳಿದ್ದಾರೆ.
“ವಿಭೂತಿ, ಆವ ಭೂಷಣದೊಳಗು?
ಪುಲಿಯ ಚರ್ಮ ಆವ ವಸ್ತ್ರದೊಳಗು?
ಖಟ್ಟಾಂಗ ಆವ ಆಯುಧದೊಳಗು?...”
-ಅಲ್ಲಮಪ್ರಭು (ಸ.ವ.ಸಂ.2, ವ:1532)

2) “ವಿಭೂತಿ ವಿಭೂತಿಯೆಂಬ ಮಾತಿಗಂಜಲೇಕೊ,
ಅದು ವಿಭೂತಿ ಅಹುದೊ, ಅಲ್ಲೊ ಎಂಬ ಕ್ರಮವನರಿಯಬೇಕಲ್ಲದೆ?
ಶ್ರೇಷ್ಠಾಚಾರವಿಡಿದು ಆಚರಿಸುವುದು ವಿಭೂತಿ......”
-ಚೆನ್ನಬಸವಣ್ಣ (ಸ.ವ.ಸಂ.3, ವ:1625)

3) “ಕೊಂಬನೂದುವ ಹೊಲೆಯಂಗೆ
ಕುಂಕುಮ ಹಣೆಯಲ್ಲಲ್ಲದೆ ಶ್ರೀವಿಭೂತಿ ಒಪ್ಪುವುದೆ?....”
-ಮಡಿವಾಳ ಮಾಚಿದೇವಿ (ಸ.ವ.ಸಂ.8, ವ:573)

ಈ ಮೂರು ವಚನಗಳಲ್ಲಿ ನೊಸಲ ಮೇಲೆ ಧರಿಸುವ ಹೊರಗಿನ ವಿಭೂತಿ ಬಗೆಗೆ ಹೇಳಲಾಗಿದೆ. ಮೊದಲಿನ ವಚನದಲ್ಲಿ ಅಲ್ಲಮಪ್ರಭು ಮೂರು ಪ್ರಶ್ನೆಗಳನ್ನು ಕೇಳುತ್ತಲೇ, ನಂತರದ ಸಾಲುಗಳಲ್ಲಿ ವಿಭೂತಿಯ ಮಹತ್ವವನ್ನು ತಿಳಿಸಿದ್ದಾರೆ. ವಸ್ತ್ರಗಳಲ್ಲಿ ಹುಲಿಯಚರ್ಮ, ಆಯುಧಗಳಲ್ಲಿ ಖಟ್ಟಾಂಗ (ಗದೆ) ಶ್ರೇಷ್ಠವಾಗಿರುವಂತೆ, ಭೂಷಣಗಳಲ್ಲಿ ವಿಭೂತಿಯೇ ಶ್ರೇಷ್ಠವಾಗಿದೆಯೆಂದು ಹೇಳಲಾಗಿದೆ. ಚೆನ್ನಬಸವಣ್ಣ ಹೊರಗಿನ ವಿಭೂತಿಯ ಪ್ರಸ್ತಾಪ ಮಾಡುತ್ತಲೇ ಒಳಗಿನ ವಿಭೂತಿಯನ್ನು ಹೇಳುತ್ತಾರೆ. ಶರಣತತ್ವಗಳ ಆಚರಣೆಯೇ ವಿಭೂತಿಯೆಂದು ವಿವರಿಸುತ್ತಾರೆ. ಮಡಿವಾಳ ಮಾಚಿದೇವರು ಹಣೆಗೆ ವಿಭೂತಿ ಭೂಷಣವೇ ಹೊರತು ಕುಂಕುಮವಲ್ಲವೆಂದು ತಿಳಿಸಿದ್ದಾರೆ. ಒಮ್ಮೆ ಶರಣಧರ್ಮ ಸ್ವೀಕರಿಸಿ ಹಣೆಗೆ ವಿಭೂತಿ ಧರಿಸಿದ ನಂತರ, ಗುರುನಿಂದಕನಾಗಿ ಹಣೆಯಲ್ಲಿ ಕುಂಕುಮ ಹಚ್ಚಿಕೊಂಡರೆ ಕೊಂಬಿನ ಹೊಲೆಯನಿಗಿಂತಲೂ ಕನಿಷ್ಠವೆಂದು ಹೇಳಿದ್ದಾರೆ.

“ಲಿಂಗ ಹೊರತೆಯಾಗಿ, ವಿಭೂತಿ ರುದ್ರಾಕ್ಷಿಯ ಕೊಟ್ಟು
ಗುರುವಾಗಬಹುದೆ ಅಯ್ಯಾ?
ಬೀಜವಿಲ್ಲದೆ ಅಂಕುರವಾಗಬಲ್ಲುದೆ?
-ಅರಿವಿನ ಮಾರತಂದೆ (ಸ.ವ.ಸಂ.6, ವ:387)

ಅರಿವಿನ ಮಾರಿತಂದೆ ಈ ವಚನದಲ್ಲಿ ಒಳಗೆ ಧರಿಸಿಬೇಕಾದ ವಿಭೂತಿಯ ಬಗೆಗೆ ಹೇಳಿದ್ದಾರೆ. ಹೊರತೆಯೆಂದರೆ ಬಾಹ್ಯ ಎಂದರ್ಥವಿದೆ. ಹೊರಗೆ ಲಿಂಗಕಟ್ಟಿ ವಿಭೂತಿ ರುದ್ರಾಕ್ಷಿ ಧರಿಸಿದಾಕ್ಷಣ ಗುರುವೆನಬಹುದೆ? ಎಂದು ಇಲ್ಲಿ ಪ್ರಶ್ನಿಸಲಾಗಿದೆ. ಬೀಜವಿಲ್ಲದೆ ಸಸಿ ಹುಟ್ಟುವುದಿಲ್ಲ. ಒಳಗಡೆ ಅರಿವು-ಆಚಾರ-ಆನುಭಾವ ಜಾಗ್ರತವಾದರೆ ಮಾತ್ರ ಸಾಧ್ಯವೆಂದು ಈ ವಚನಕಾರ ತಿಳಿಸಿದ್ದಾನೆ. ಹೀಗೆ ಇನ್ನೂ ಅನೇಕ ವಚನಕಾರರು ವಿಭೂತಿಯ ಮಹತ್ವವನ್ನು ಕುರಿತು ತಮ್ಮ ವಚನಗಳಲ್ಲಿ ವಿವರಿಸಿದ್ದಾರೆ. ವಿಭೂತಿ ಕೇವಲ ಹೊರಗೆ ಕಾಣ ಸುವುದಾಗಿರದೆ, ಒಳಗಿನ ಕಾಮಾದಿಗುಣಗಳನ್ನು ಕಳೆದುಕೊಂಡಿರಬೇಕೆಂದು ಇಲ್ಲಿ ತಿಳಿಸಲಾಗಿದೆ.

ಈ ಅಂಕಣದ ಹಿಂದಿನ ಬರಹಗಳು:
ಶರಣರ ಪರಿಕಲ್ಪನೆಯಲ್ಲಿ ಪ್ರಸಾದ
ಅಷ್ಟಾವರಣಗಳಲ್ಲಿ ಜಂಗಮ
ಅಷ್ಟಾವರಣಗಳಲ್ಲಿನ ಇಷ್ಟಲಿಂಗ ವಿಚಾರ
ಅಷ್ಟಾವರಣಗಳಲ್ಲಿ ಗುರು ಮತ್ತು ಲಿಂಗ
ಹೊಸ ದೃಷ್ಟಿಯುಳ್ಳ ಶರಣರ ತಾತ್ವಿಕ ನೆಲೆಗಳು
ಮಹಿಳೆಯರ ಬದುಕಿಗೆ ಹೊಸ ಆಯಾಮ ನೀಡಿದ ವಚನ ಚಳವಳಿ
ಹೆಣ್ಣು ಮಾಯೆಯಲ್ಲ… ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ
ಹೆಣ್ಣಿನ ಸಮಾನತೆಗೆ ಮಿಡಿದ ವಚನ ಚಳವಳಿ
ಶರಣರ ಸಮಾನತೆ ಹಾದಿಯಲ್ಲಿ ಶ್ರಮಜೀವಿಗಳ ಸಮೂಹವೇ ಹಾಲಹಳ್ಳ
ಶರಣರ ಅಂತಃಕರಣದಲ್ಲಿ ಸಮ ಸಮಾಜದ ಕನಸು
ವಚನಕಾರರು ಮತ್ತು ಜಾತಿ ವಿರೋಧಿ ಹೋರಾಟ
ವರ್ಣವ್ಯವಸ್ಥೆಯ ವಿರುದ್ಧ ಶರಣರ ದನಿ
ಅಸಮಾನತೆಯ ವಿರುದ್ಧದ ಚಳವಳಿಯಾದ ಬಸವಧರ್ಮ
ಶರಣರ ದಾಸೋಹ ತತ್ವ - ಹಲವು ಆಯಾಮಗಳು
ಆಚಾರವೇ ಲಿಂಗವಾಗುವ,, ಅನುಭಾವವೇ ಜಂಗಮವಾಗುವ ನಿಜ ದಾಸೋಹ
ಶರಣರ ಪಾಲಿಗೆ ಕಡ್ಡಾಯ ಮಾತ್ರವಾಗಿರದೆ, ಕೈಲಾಸವೂ ಆಗಿದ್ದ ಕಾಯಕ
ಕಾಯಕವೇ ನಿಜ ವ್ರತವೆಂದು ನಂಬಿದ್ದ ಶರಣರು
ಶರಣರ ಕಾಲದ ಮನರಂಜನೆಯ ಕಾಯಕಗಳು
ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮ

ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು

 

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...