ಶಿವಮೊಗ್ಗ ಕರ್ನಾಟಕ ಸಂಘ, 12 ಲೇಖಕರಿಗೆ ಪುಸ್ತಕ ಬಹುಮಾನ

Date: 30-10-2025

Location: ಶಿವಮೊಗ್ಗ


ಶಿವಮೊಗ್ಗ: ಶಿವಮೊಗ್ಗಕರ್ನಾಟಕ ಸಂಘದ 2024ನೇ ಸಾಲಿನ ಪುಸ್ತಕ ಬಹುಮಾನಗಳನ್ನು 12 ಮಂದಿ ಲೇಖಕರಿಗೆ ನೀಡಲಾಗಿದೆ. ವಿಜೇತರಿಗೆ ತಲಾ ₹10,000 ನಗದು ಪುರಸ್ಕಾರ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.

ಬಹುಮಾನ ವಿತರಣೆ ಸಮಾರಂಭ 2024ರ ಸಮಾರಂಭವನ್ನು ದಿನಾಂಕ 22-11-2025ರ ಶನಿವಾರದಂದು ಕರ್ನಾಟಕ ಸಂಘದ ಹಸೂಡಿ ವೆಂಕಟ ಶಾಸ್ತ್ರಿ ಸಾಹಿತ್ಯ ಭವನದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಶಸ್ತಿ ಪುರಸ್ಕೃತರ ವಿವರ: ಬಹುಮಾನ - ಲೇಖಕ - ಪುಸ್ತಕ

1. ಕುವೆಂಪು ಕಾದಂಬರಿ ಬಹುಮಾನ- ಸಿರಿ ಮೂರ್ತಿ ಕಾಸರವಳ್ಳಿ -ಶಾಂತಿಧಾಮ
2. ಪ್ರೊ.ಎಸ್.ವಿ.ಪರಮೇಶ್ವರಭಟ್ಟ ಅನುವಾದ ಸಾಹಿತ್ಯ- ನಟರಾಜ್ ಹೊನ್ನವಳ್ಳಿ- ಆ ಲಯ ಈ ಲಯ
3. ಎಂ.ಕೆ.ಇಂದಿರಾ ಮಹಿಳಾ ಸಾಹಿತ್ಯ- ಶ್ರೀಮತಿ ಪ್ರತಿಭಾ ರಾವ್ - ಜೀವನ್ಮುಖಿ
4. ಪಿ.ಲಂಕೇಶ್ ಮುಸ್ಲಿಂ ಬರಹಗಾರರು- ಸಂತೇಬೆನ್ನೂರ್ ಫೈಬ್ರಾಜ್ -ಹೊಸ್ತಿಲು ದಾಟಿ ಬಂದ ಬಿಕ್ಕು
5. ಜಿ.ಎಸ್.ಶಿವರುದ್ರಪ್ಪ ಕವನ ಸಂಕಲನ- ಭವ್ಯ ಕಬ್ಬಳಿ - ದೇವರ ತೇರಿಗೂ ಗಾಲಿಗಳು ಬೇಕು
6. ಡಾ. ಹಾ. ಮಾ. ನಾಯಕ ಅಂಕಣ ಬರಹಗಾರರು - ಪ್ರೊ. ಎ.ಎಸ್. ಬಾಲಸುಬ್ರಹ್ಮಣ್ಯ -ಪತ್ರಿಕೋದ್ಯಮದ ಪಲ್ಲಟಗಳು
7. ಡಾ. ಯು. ಆರ್. ಅನಂತಮೂರ್ತಿ (ಸಣ್ಣ ಕಥಾ ಸಂಕಲನ)-ಮಹಾಂತೇಶ್ ನವಲಕಲ್- ಬುದ್ಧ ಗಂಟೆಯ ಸದ್ದು
8. ಡಾ. ಕೆ. ವಿ. ಸುಬ್ಬಣ್ಣ (ನಾಟಕ)- ಕೆ.ವೈ. ನಾರಾಯಣಸ್ವಾಮಿ - ನೀವು ಕಾಣಿರೇ ಮತ್ತು ಮಲ್ಲಿಗೆ
9. ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ (ಪ್ರವಾಸ ಸಾಹಿತ್ಯ) - ಡಾ. ಶೈಲೇಶ್ ಕುಮಾರ್ ಎಸ್- ಸುಪ್ತ ಸಾಗರದಾಚೆ
10. ಹಸೂಡಿ ವೆಂಕಟಶಾಸ್ತ್ರಿ (ವಿಜ್ಞಾನ ಸಾಹಿತ್ಯ) - ಬಿ.ಎಸ್. ಜೈಪ್ರಕಾಶ್ , ಪ್ರೊ. ಆರ್. ವೇಣುಗೋಪಾಲ್- ಪಂಚಭೂತಗಳ ರಾಸಾಯನಿಕ ವೈವಿಧ್ಯ
11. ನಾ. ಡಿಸೋಜ (ಮಕ್ಕಳ ಸಾಹಿತ್ಯ) -ಸತೀಶ್ ಕೆ.ಎಸ್ -ಭೈರ
12. ಹೆಚ್. ಡಿ. ಚಂದ್ರಪ್ಪಗೌಡ (ವೈದ್ಯ ಸಾಹಿತ್ಯ)- ಕರವೀರಪ್ರಭು ಕ್ಯಾಲಕೊಂಡ- ಮಿಸ್ಲಿಂಗ್ ವುಮೆನ್

MORE NEWS

`Growing Up karantha' ಕೃತಿಯನ್ನ ನಾನು ಹಠದಿಂದಲೇ ಬರೆದಿದ್ದೇನೆ; ಉಲ್ಲಾಸ್‌ ಕಾರಂತ್

07-12-2025 ಬೆಂಗಳೂರು

ಬೆಂಗಳೂರು: ಮನುಷ್ಯ ಸಂಸ್ಕೃತಿಯ ಬಹುದೊಡ್ಡ ಕೊಡುಗೆಯಾಗಿ ವಿಭಿನ್ನ ಭಾಷೆಯ ಬರವಣಿಗೆ ಸಮಾಜದ ಪ್ರತಿಬಿಂಬವಾಗಿವೆ. ಓರ್ವ ಉತ್...

ವಿಭಿನ್ನ ಸಾಹಿತ್ಯಗಳ ವಿಚಾರಧಾರೆಗಳ ಸಮ್ಮಿಲನ 'BLF'

07-12-2025 ಬೆಂಗಳೂರು

ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿಯು ಡಿ.6 ಮತ್ತು 7ರಂದು ನಗರದ ಸ್ವಾತಂತ್ಯ್ರ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗ...

ಓದುಗರು ಹೊಸತನದ ಕೃತಿಗಳನ್ನು ಓದಬೇಕು: ಶ್ರೀನಿವಾಸ ಪ್ರಭು

07-12-2025 ಬೆಂಗಳೂರು

ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನದ ವತಿಯಿಂದ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರ 'ಜನ ಭಾರತ', ಉಷಾ ನರಸ...