ಶ್ರೀ ಸಿದ್ದಣ್ಣ ಉತ್ನಾಳ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ

Date: 29-06-2022

Location: ಯರನಾಳ ಶ್ರೀ ಜಗದ್ಗುರು ಪಂಪಾಪತ, ಬಸವನ ಬಾಗೇವಾಡಿ


ತಂತ್ರಜ್ಞಾನ ಭರಾಟೆಯಲ್ಲಿ ಪುಸ್ತಕ ರಚನೆ ಮತ್ತು ಓದುಗರು ಇಲ್ಲವೆನ್ನುವುದು ಒಪ್ಪಲಾಗದು. ಉತ್ತಮ ಪುಸ್ತಕಗಳನ್ನು ಓದುವ ಓದುಗರು ಯಾವ ಕಾಲದಲ್ಲೂ ಇರುತ್ತಾರೆ ಎಂಬುದು ಇಂಥ ಕಾರ್ಯಕ್ರಮಗಳು ನಿರೂಪಿಸುತ್ತವೆ ಎಂದು ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಶ್ರೀ ಹಾಶಿಂಪೀರ್ ವಾಲಿಕಾರ ಅವರು ನುಡಿದರು.

ವಿಜಯಪುರ ಜಿಲ್ಲಾ ಪುಸ್ತಕ ಪರಿಷತ್ತು ಮತ್ತು ಡಾ ಸಿದ್ದಣ್ಣ ಉತ್ನಾಳ ಸಾಹಿತ್ಯ ಪ್ರತಿಷ್ಠಾನ ವಿಜಯಪುರ ಅವರ ಸಹಯೋಗದಲ್ಲಿ ಶ್ರೀ ಸಿದ್ದಣ್ಣ ಉತ್ನಾಳ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಬಸವನ ಬಾಗೇವಾಡಿ ತಾಲ್ಲೂಕಿನ ಯರನಾಳ ಶ್ರೀ ಜಗದ್ಗುರು ಪಂಪಾಪತಿ ಶಿವಯೋಗೇಶ್ವರ ವಿದ್ಯಾವರ್ಧಕ ಸಂಘದಲ್ಲಿ ನಡೆದಿದ್ದು, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು

ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದ ಪ್ರಾಧ್ಯಾಪಕರು ಡಾ ಎಸ್ ಎಸ್ ಅಂಗಡಿ, ಪ್ರೊ ಎಚ್ ಟಿ ಪೋತೆ, ಶ್ರೀ ಸೋಮಶೇಖರಯ್ಯ ಗಣಾಚಾರಿ ಅವರುಗಳು ಪ್ರಶಸ್ತಿ ಸ್ವೀಕರಿಸಿದರು. ಡಾ ಎಸ್ ಎಸ್ ಅಂಗಡಿ ಅವರು ಮಾತನಾಡಿ, ಪ್ರಶಸ್ತಿ ಲೇಖಕನ ಸಾಮಾಜಿಕ ಜವಾಬ್ದಾರಿ ಹೆಚ್ಚಿಸುತ್ತದೆ ಎಂಬುದಾಗಿ ನುಡಿದರು.

ಶ್ರೀ ಜಗದ್ಗುರು ಪಂಪಾಪತಿ ಶಿವಯೋಗ ಯರನಾಳ ಮಠ ಅವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು . ಪುಸ್ತಕಗಳನ್ನು ನೀವು ಪ್ರೀತಿಸಿದರೆ ಜಗತ್ತು ನಿಮ್ಮನ್ನು ಪ್ರೀತಿಸುತ್ತದೆ. ವ್ಯಕ್ತಿತ್ವ ವಿಕಸನಕ್ಕೆ ಪುಸ್ತಕಗಳ ಓದುಬೇಕು ಎಂದು ಅವರು ನುಡಿದರು.

ನಾಡಿನ ಬಹುಶ್ರುತ ವಿದ್ವಾಂಸರು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ಪ್ರೊ ಮಲ್ಲೇಪುರಂ ಜಿ ವೆಂಕಟೇಶ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಸಾಹಿತಿ ಶಂಕರ ಬೈಚಬಾಳ ಅವರು ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತಿಸಿ ಪ್ರತಿಷ್ಠಾನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಕುರಿತು ಪ್ರಾಸ್ತಾವಿಕ ಮಾತನಾಡಿದರು.

ಕಾರ್ಯಕ್ರಮದ ಫೋಟೋಗಳು:

 

 

 

 

 

 

 

 

 

 

 

 

 

 

 

 

 

 

 

 

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...