ಸಿಜಿಕೆ ನೆನಪಿನ ರಂಗ ಉತ್ಸವ: ರಂಗಭೂಮಿ ಕಲಾವಿದರ ಕಲೆ ಅನಾವರಣ

Date: 10-10-2019

Location: ಬೆಂಗಳೂರು


ಕನ್ನಡ ರಂಗಭೂಮಿಗೆ ನವಚೈತನ್ಯ ನೀಡಿ ಹೊಸ ಹೊಳಹುಗಳನ್ನು ತೋರಿದವರು ಸಿಜಿಕೆ. ವಿಶ್ವವಿದ್ಯಾಲಯದ ನಡುವೆಯೂ ಅಪಾರ ರಂಗಪ್ರೀತಿ ಬೆಳೆಸಿಕೊಂಡಿದ್ದ ಸಿಜಿಕೆ ಅದಕ್ಕಾಗಿಯೇ ಜೀವನವನ್ನು ಮುಡಿಪಿಟ್ಟವರು. ಜಹತ್ತಿನ ಆಗುಹೋಗುಗಳನ್ನು ತಮ್ಮದೇ ಶೈಲಿಯಲ್ಲಿ ವಿಶ್ಲೇಷಿಸುತ್ತಿದ್ದ ಅವರ ಮಾತುಗಳಲ್ಲಿ ಬದುಕಿನ ಬಗ್ಗೆ ಅಕ್ಕರಾಸ್ಥೆ, ಒಲವು, ತಮ್ಮದೇ ಧೋರಣೆಗಳು ಮಿಳಿತವಾಗಿರುತ್ತಿದ್ದವು. ರಂಗಭೂಮಿ ನಿಂತ ನೀರಾಗಬಾರದು ಅದು ಸದಾ ಹರಿವ ನದಿಯಂತೆ ಚಲನಶೀಲವಾಗಿರಬೇಕು ಎಂಬ ಹಂಬಲದಿಂದ ಸಿಜಿಕೆ ಹುಟ್ಟುಹಾಕಿದ್ದ ’ರಂಗನಿರಂತರ’ಇಂದಿಗೂ ತನ್ನ ಮೂಲ ಉದ್ದೇಶವನ್ನು ಉಳಿಸಿಕೊಂಡಿದೆ. ಅಲ್ಲದೆ ಸಿ. ಜಿ. ಕೆ. ರಂಗವು ರಾಷ್ಟ್ರೀಯ ರಂಗೋತ್ಸವ ವರುಷ ವರುಷಕೂ ವಿಭಿನ್ನವಾಗಿ ಸಮತೂಕವಾಗಿ ಸಮತೋಲನವಾಗಿ ಬೆಳೆಯುತ್ತಿದ್ದು ಪ್ರತಿ ಬಾರಿಯೂ ಪ್ರಚಲಿತ ಸಾಮಾಜಿಕ ಕಾಳಜಿಯನ್ನುಳ್ಳ ವಿಷಯಗಳನ್ನು ಆಯ್ದು ರಂಗದ ಮೇಲೆ ಯಶಸ್ವಿಯಾಗಿ ಪ್ರದರ್ಶನ ನೀಡುತ್ತಿದ್ದಾರೆ.

ಒಂದು ರಂಗ ಸಾಮಾಜಿಕ ಕಳಕಳಿಯನ್ನು ಗಮನವಿಟ್ಟು ಏನನ್ನು ಜನರಿಗೆ ತಲುಪಿಸಬೇಕು? ಯಾವುದನ್ನು ಎಷ್ಟು ಹೇಳಬೇಕು? ಏನನ್ನು ಬೆಳೆಸಿ ಉಳಿಸಬೇಕು? ಎಂಬುದಕ್ಕೆ ಮಾದರಿಯಾಗಿ ಈ ವರ್ಷವೂ ತನ್ನ ಉತ್ಸವದ ಪ್ರೀತಿಯ ಪತಾಕೆಯನ್ನು 2019 ರಲ್ಲೂ ಹಾರಿಸಿದೆ. ಸಿ.ಜಿ.ಕೆ. ರಾಷ್ಟ್ರೀಯ ರಂಗೋತ್ಸವ - 2019 ರ ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಕ್ಟೋಬರ್ 13 ರಿಂದ 17ರವರೆಗೆ ನಡೆದಿದ್ದು 5 ಕಿರು ಚಿತ್ರ ಪ್ರದರ್ಶನ, 150  ಕಲಾವಿದರ 11ನಾಟಕಗಳ ಉತ್ಸವದ ದಿನ ಪ್ರದರ್ಶನಗೊಂಡವು. ರಂಗೋತ್ಸವದಲ್ಲಿ ಭಾರತೀಯ ರಂಗಭೂಮಿ ಬೇರೆ ಭಾಷೆಗಳ ವಿಶಿಷ್ಟ ನಾಟಕಗಳನ್ನು ಆಯ್ಕೆ ಮಾಡಿ ಆಹ್ವಾನಿಸಿ, ಕನ್ನಡ ರಂಗಭೂಮಿಗೆ ಪರಿಚಯಿಸುತ್ತದೆ. 

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...