ಸಿಂಗಾಪುರದ ಲೇಖಕರಾದ ಸಿಮ್, ಮೀಹಾನ್ ಮಧ್ಯೆ ಎಪಿಗ್ರಾಮ್ ಬುಕ್ ಪ್ರಶಸ್ತಿ ಸಮಾನ ಹಂಚಿಕೆ

Date: 20-01-2021

Location: ಬೆಂಗಳೂರು


ಪ್ರಕಟಣಾಪೂರ್ವ ಆಂಗ್ಲ ಭಾಷೆಯ ಕಾಲ್ಪನಿಕ ಕಾದಂಬರಿಗಳಿಗೆ ನೀಡಲಾಗುವ ‘ಎಪಿಗ್ರಾಮ್ ಬುಕ್ಸ್ ಪ್ರಶಸ್ತಿ’ಯನ್ನು ಸಿಂಗಾಪುರ ಮೂಲದ ಲೇಖಕ ಸೆಬಾಸ್ಟಿಯನ್ ಸಿಮ್ ಹಾಗೂ ಲೇಖಕಿ ಬೊಯೆ ಮೀಹಾನ್ ಅವರಿಗೆ ಇದೇ ಮೊದಲ ಬಾರಿಗೆ ಸಮಾನವಾಗಿ ಹಂಚಲಾಗಿದೆ.

ಪ್ರಶಸ್ತಿಯು 10.50 ಲಕ್ಷ ರೂ.ಗಳನ್ನು  ($ 15,000) ಒಳಗೊಂಡಿದ್ದು, ಈ ಗೌರವಧನವನ್ನು ಪ್ರಶಸ್ತಿ ಪುರಸ್ಕೃತರು ಸಮಾನವಾಗಿ ಪಡೆಯಲಿದ್ದಾರೆ. 2015ರಲ್ಲಿ ಸ್ಥಾಪಿತ ಪ್ರಶಸ್ತಿಯನ್ನು ಸಿಂಗಾರಪುರ ಮೂಲದ ಬರಹಗಾರರಿಗೆ ನೀಡುವ ಉದ್ದೇಶವನ್ನು  2018ರಲ್ಲಿ, ಏಷ್ಯಾ ದೇಶಗಳ ಬರಹಗಾರರಿಗೂ ವಿಸ್ತರಿಸಲಾಗಿದೆ. ಈವರೆಗೆ ಐದು ಬಾರಿ ಪ್ರಶಸ್ತಿ ಘೋಷಿಸಿದ್ದು, ಇದೇ ಮೊದಲ ಬಾರಿಗೆ ಪ್ರಶಸ್ತಿಯನ್ನು ಇಬ್ಬರು ಲೇಖಕರಲ್ಲಿ ಸಮಾನವಾಗಿ ವಿಭಾಗಿಸಲಾಗಿದೆ. 

ಪಾಶ್ಚಾತ್ಯ ಹಾಗೂ ಪೌರ್ವಾತ್ಯ ದೇಶಗಳ ಸಂಸ್ಕೃತಿಯನ್ನು ಸುಲಭವಾಗಿ ಬೆಸೆದುಕೊಂಡಿರುವ ಸಿಂಗಾಪುರ ನಗರದ ಸಂಸ್ಕೃತಿಯನ್ನು ಪ್ರಧಾನವಾಗಿ ಕೇಂದ್ರೀಕರಿಸಿ ಪ್ರಕಟಣಾಪೂರ್ವ  ಕಾಲ್ಪನಿಕ ಕಾದಂಬರಿಗಳಲ್ಲಿ ಬಿಂಬಿಸಿದ್ದು, ಲೇಖಕ ಸೆಬಾಸ್ಟಿಯನ್ ಸಿಮ್ ಹಾಗೂ ಲೇಖಕಿ ಬೊಯೆ ಮೀಹಾನ್ ಅವರ ಕೃತಿಗಳ ಹೆಚ್ಚುಗಾರಿಕೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಅಭಿಪ್ರಾಯಪಟ್ಟಿದೆ.

ಲೇಖಕ ಸೆಬಾಸ್ಟಿಯನ್ ಸಿಮ್ ಅವರು 2015 ಹಾಗೂ 2017 ರಲ್ಲಿ -ಹೀಗೆ ಎರಡು ಬಾರಿ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.ಒಂದೇ ಪ್ರಶಸ್ತಿಯನ್ನು ಎರೆಡೆರಡು ಬಾರಿ ಸ್ವೀಕರಿಸುತ್ತಿರುವುದು ತಮಗೆ ಅಚ್ಚರಿ ಹಾಗೂ ಸಂತಸ ತಂದಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.   

MORE NEWS

25 ಮಂದಿಗೆ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್ತಿ

28-03-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಪ್ರಸಕ್ತ ಸಾಲಿನ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್...

ಖ್ಯಾತ ರಂಗ ನಿರ್ದೇಶಕ ಶ್ರೀ ಪಾದ ಭಟ್ ಗೆ 'ರಂಗ ಭೂಪತಿ' ಪ್ರಶಸ್ತಿ

28-03-2024 ಬೆಂಗಳೂರು

ಬೆಂಗಳೂರು: ಪ್ರಸಿದ್ಧ ನಾಟಕಕಾರರಾದ ದಿ.ಗೋಪಾಲ ವಾಜಪೇಯಿ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ 'ರಂಗ ಭೂಪತಿ' ಪ್ರ...

ದಾವಣಗೆರೆಯ ಎಲ್ಲಾ ಭಾಷಾರಸಸ್ವಾದಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟ ಕೃತಿಯಿದು; ಎಂ. ವಿ. ರೇವಣಸಿದ್ದಯ್ಯ

28-03-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅನಿವಾಸಿ ಲೇಖಕ ಶಿಕಾಗೋದ ರವಿ ಹಂಜ್ ಅವರ ಇಂಗ್ಲಿಷ್ ಕೃತಿ ...