ಸ್ಮಾರಕದ ಬೀಡಾಗದ ಕಲಬುರಗಿ ಕೋಟೆ

Date: 04-02-2020

Location: ಕಲಬುರಗಿ


ಐತಿಹಾಸಿಕ ಮತ್ತು ವಾಸ್ತುಶಿಲ್ಪದ ಕಾರಣಗಳಿಂದ ವಿಶೇಷ ಮಹತ್ವ ಪಡೆದಿರುವ ಕಲಬುರಗಿ ಕೋಟೆಯ ಈಗಿನ ದುಸ್ಥಿತಿಯನ್ನು ಕುರಿತು ಹಿರಿಯ ಪತ್ರಕರ್ತ ವೆಂಕಟೇಶ ಮಾನು ಅವರು ಲೇಖನದಲ್ಲಿ ವಿವರಿಸಿದ್ದಾರೆ

 

ಕರ್ನಾಟಕ ಮುಸ್ಲಿಂ ವಾಸ್ತುಶಿಲ್ಪ ಕಲೆಯ ಪೈಕಿ 1347ರಲ್ಲಿ ನಿರ್ಮಿಸಲಾದ ಅತ್ಯಂತ ಸುಂದರ ನಿರ್ಮಾಣವೇ -ಕಲಬುರಗಿ ಕೋಟೆ. ಮೊದಲು ರಾಜಾ ಗುಲಚಂದ್ ಎಂಬಾತ ಇದನ್ನು ನಿರ್ಮಿಸಿದ್ದು, ಬಹಮನಿ ಅರಸರು ದೆಹಲಿ ಸುಲ್ತಾನರೊಂದಿಗಿನ ಸಂಬಂಧವನ್ನು ಕಳಚಿಕೊಂಡ ನಂತರ ಈ ಕೋಟೆಯ ವಾಸ್ತುಶಿಲ್ಪವನ್ನು ನವೀಕರಿಸಿದರು ಹಾಗೂ ಕೋಟೆಯನ್ನು ಭದ್ರಪಡಿಸಿದರು ಎಂಬುದು ಇತಿಹಾಸ. 

ಇದಕ್ಕೂ ಮುಂಚೆ, ರಾಷ್ಟ್ರಕೂಟರು ನಂತರ, ಚಾಲುಕ್ಯರು ಆಳ್ವಿಕೆ ತದನಂತರ ಹೊಯ್ಸಳರ ಆಳ್ವಿಕೆಯ ಕೊನೆ ಘಟ್ಟದಲ್ಲಿ ಅಂದರೆ 14ನೇ ಶತಮಾನದಲ್ಲಿ(ಅಂದು ಗುಲಬರ್ಗಾವನ್ನು ಹಸನಬಾದ್ ಎಂದು ಕರೆಯಲಾಗುತ್ತಿತ್ತು.)  ಮೊಹಮ್ಮದ್ ಬಿನ್ ತುಘಲಕ್ ದಕ್ಷಿಣ ಭಾಗವನ್ನು ಅತಿಕ್ರಮಿಸಿದ. ದೆಹಜಲಿ ಸುಲ್ತಾನರ ವಿರುದ್ಧ ಮುಸ್ಲಿಂ ಅಧಿಕಾರಿಗಳು ಬಂಡೆದ್ದ ನಂತರ ಹಸನ-ಹಂಗು ಬಹಮನಿ ಅರಸರು ರಾಜ್ಯ ಸ್ಥಾಪಿಸಿ, 16ನೇ ಶತಮಾನದ ಆರಂಭದವರೆಗೂ ಆಳಿದರು. ಈ ಅವಧಿಯಲ್ಲಿ ಇಡೀ ರಾಜ್ಯವು ಐದು ಪ್ರಮುಖ ವಿಭಾಗಗಳಾಗಿ ವಿಭಜನೆಗೊಂಡಿತ್ತು.

ಕೋಟೆ ಪ್ರವೇಶಕ್ಕೆ ಒಂದೇ ಒಂದು ದ್ವಾರವಿದೆ. ಕೋಟೆಯ ಸುತ್ತಲೂ ಭದ್ರತೆಗಾಗಿ ನೀರಿನ ಕಂದಕ ವಿದೆ. ಕೋಟೆಯ ಗೋಡೆ ತಲುಪಬೇಕಾದರೆ ಮೊದಲು ವೈರಿಗಳು ನೀರಿನಲ್ಲೇ ಇಳಿದು ಈಜಿ ತಲುಪುವ ಸಾಹಸ ಮಾಡಬೇಕಿತ್ತು.ಹೀಗಾಗಿ, ಕೋಟೆ ಪ್ರವೇಶ ಸುಲಭದ ಮಾತಾಗಿರಲಿಲ್ಲ. 

ಕೋಟೆಯಲ್ಲಿ ಎತ್ತರದ 15 ಕಾವಲು ಗೋಪುಗಳಿವೆ. ಭದ್ರತಾ ದೃಷ್ಟಿಯಿಂದ ಅವುಗಳ ನಿರ್ಮಾಣವೂ ಇಂದಿಗೂ ಅಧ್ಯಯನ ಯೋಗ್ಯವಾಗಿವೆ. ವಿವಿಧೆಡೆ ಎತ್ತದರ ಸ್ಥಳದಲ್ಲಿ ಇಟ್ಟ ಸುಮಾರು 26 ತೋಪುಗಳಿವೆ. ಆ ಪೈಕಿ, ಒಂದು ತೋಪು 8 ಮೀಟರ್‌ ಉದ್ದವಿದ್ದು, ಪ್ರವಾಸಿಗರ ಅಷ್ಟೇಕೆ, ಅಧ್ಯಯದ ದೃಷ್ಟಿಯಿಂದ ಇತಿಹಾಸ ತಜ್ಞರ ಗಮನ ಸೆಳೆಯುತ್ತಿದೆ. 

ಭಾರತೀಯ ಪ್ರಾಚ್ಯವಸ್ತು ಇಲಾಖೆ ವ್ಯಾಪ್ತಿಯಲ್ಲಿದ್ದರೂ ಕೋಟೆಯು ತೀರಾ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ಸ್ಮಾರಕವಾಗಿದ್ದರೂ ಈ ಕೋಟೆ ಒಳಗೆ ಅನಧಿಕೃತ ವಾಸ ಮುಂದುವರಿದಿದೆ. ಹೀಗಾಗಿ, ಕೋಟೆಯು ರಾಜಕೀಯ ಕಾರಣಗಳಿಗಾಗಿ ಜನವಸತಿ ಪ್ರದೇಶವಾಗಿದೆ ವಿನಃ ಅದೊಂದು ಆಡಳಿತಾತ್ಮಕ-ಐತಿಹಾಸಿಕ ಹಾಗೂ ಭಾವನಾತ್ಮಕ ನೆಲೆಯ ಬೀಡಾಗದೇ ಇರುವುದು ದುರಂತ.

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...