ಸ್ಮರಣ ಸಂಚಿಕೆಗೆ ಲೇಖನಗಳ ಆಹ್ವಾನ

Date: 28-06-2022

Location: ಬೆಂಗಳೂರು.


ಕೀನ್ಯಾದ ನೈರೋಬಿಯ ಸಂಸ್ಥೆಯು ತನ್ನ 6ನೇ ನಾವಿಕೋತ್ಸವ 2022ರ ಪ್ರಯುಕ್ತ ಸ್ಮರಣ ಸಂಚಿಕೆಗೆ ಲೇಖನ, ಸಣ್ಣಕತೆ, ಪ್ರಬಂಧ, ನಗೆಹನಿ, ಹಾಸ್ಯ ಲೇಖನಗಳು ಮತ್ತು ವ್ಯಂಗ್ಯಚಿತ್ರಗಳನ್ನು ಆಹ್ವಾನಿಸಿದೆ. ಸಮ್ಮೇಳನದ ವಿಚಾರವಾಗಿ ʼವಿನೋದ- ವಿಹಾರ- ವಿನಿಮಯʼ ಎಂಬ ವಿಷಯವನ್ನು ಆಯ್ಕೆಮಾಡಲಾಗಿದೆ.

ಸ್ಪರ್ಧೆಯ ನಿಯಮಗಳು: ಲೇಖನಗಳು ವಿನೋದ-ವಿಹಾರ-ವಿನಿಮಯ ಎಂಬ ವಿಚಾರದ ವ್ಯಾಪ್ತಿಯಲ್ಲಿದ್ದರೆ ಹೆಚ್ಚು ಪ್ರಸ್ತುತ. ಲೇಖನಗಳು ನಿಮ್ಮ ಸ್ವಂತವಾಗಿದ್ದು ಬೇರೆ ಯಾವುದೇ ಪತ್ರಿಕೆ, ಸಂಚಿಕೆ, ಪುಸ್ತಕ ಮತ್ತು ಅಂತರ್ಜಾಲ ತಾಣಗಳಲ್ಲಿ ಪ್ರಕಟವಾಗಿರಬಾರದು. ಲೇಖನಗಳನ್ನು ಬರಹ ಅಥವಾ ನುಡಿ ತಂತ್ರಾಂಶದಲ್ಲಿ ಮುದ್ರಿಸಿದ್ದು ಪದಗಳ ಗಾತ್ರ 12 ರಲ್ಲಿದ್ದು, ಪದಗಳಮಿತಿ 2000 ಮೀರಬಾರದು.

ಪಿಡಿಎಫ್ ಅಥವಾ ಫೋಟೊ ಮಾದರಿಯಲ್ಲಿ ಇರುವ ಲೇಖನಗಳನ್ನು ಸ್ವೀಕರಿಸುವುದಿಲ್ಲ. ಕಡ್ಡಾಯವಾಗಿ ಡಾಕ್ಯುಮೆಂಟ್ ಫಾರ್ಮ್ಯಾಟ್‌ನಲ್ಲಿ ಕಳುಹಿಸತಕ್ಕದ್ದು. ಲೇಖನದ ಜೊತೆಗೆ ಹೆಸರು, ಊರು, ಇಮೇಲ್‌ ಐಡಿ, ವೈಯಕ್ತಿಕ ಭಾವಚಿತ್ರ (High Resolution, 1200 1200 pixels), ಮೊಬೈಲ್ ನಂ. ಮತ್ತು ಸಂಕ್ಷಿಪ್ತ ಪರಿಚಯವನ್ನು ಕಡ್ಡಾಯವಾಗಿ ಕಳುಹಿಸತಕ್ಕದ್ದು.

ಮಕ್ಕಳ ಮತ್ತು ಕಾಲೇಜು ವಿದ್ಯಾರ್ಥಿಗಳ ಬರಹಗಳಿಗೂ ಸ್ವಾಗತವಿದೆ. ಈ ವಿಭಾಗದಲ್ಲಿ ಇಂಗ್ಲೀಷ್ ಲೇಖನಗಳನ್ನು ಸಹ ಸ್ವೀಕರಿಸಲಾಗುತ್ತದೆ. ಲೇಖನಗಳನ್ನು ಪ್ರಕಟಿಸುವಲ್ಲಿ ಸಂಪಾದಕ ಮಂಡಳಿಯ ನಿರ್ಧಾರವೇ ಅಂತಿಮವಾಗಿರುತ್ತದೆ ಹಾಗೂ ಲೇಖನಗಳು ಸ್ವೀಕೃತಿಯಾದಲ್ಲಿ ಇಮೇಲ್ ಮೂಲಕ ತಿಳಿಸಲಾಗುವುದು.

ನಿಯಮಗಳ ಬಗ್ಗೆ ಏನೇ ಸಂದೇಹಗಳಿದ್ದಲ್ಲಿ ಮೇಲಿನ ವಿಳಾಸಕ್ಕೆ ಇಮೇಲ್ ಹಾಕಿ ಪರಿಹರಿಸಿಕೊಳ್ಳಬಹುದು. ಬರಹಗಳ ಸ್ವೀಕಾರದ ಷರತ್ತುಗಳನ್ನು ಬದಲಾಯಿಸುವ ಅಧಿಕಾರ, ಸಂಪಾದಕ ಮಂಡಳಿಗಿದೆ. ಆಸಕ್ತರು ತಮ್ಮ ಲೇಖನಗಳನ್ನು ಜುಲೈ 15ರ ಒಳಗೆ NVKS.22.Souvenir@gmail.com ಗೆ ಕಳುಹಿಸಿ ಕೊಡಬೇಕು.

MORE NEWS

ಪುಸ್ತಕ ಸಂಸ್ಕೃತಿ ಬೆಳೆಸುವುದು ಸಾಮಾಜಿಕ ನ್ಯಾಯದ ಭಾಗ ಅಂತ ಸರ್ಕಾರಗಳು ಭಾವಿಸಬೇಕು: ಬರಗೂರು

23-04-2024 ಬೆಂಗಳೂರು

ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...

ಪ್ರಕಾಶನ ಸಂಸ್ಥೆಯನ್ನು ತೆರೆದಿರುವ ಪ್ರಕಾಶಕರೆಲ್ಲರೂ ಹುಚ್ಚರೇ; ಕೆ.ಎನ್. ಗಣೇಶಯ್ಯ

23-04-2024 ಬೆಂಗಳೂರು

ಪುಸ್ತಕಗಳನ್ನು ಕೊಂಡುಕೊಂಡು ಓದುವವರ ಪ್ರಮಾಣ ಕಡಿಮೆಯೂ ಆಗಿಲ್ಲ ಹೆಚ್ಚು ಕೂಡ ಆಗಿಲ್ಲ. ಬಹುಶಃ ಪುಸ್ತಕವನ್ನು ಓದಬೇಕು ಅನ್...

‘ಕಠಾರಿ ಅಂಚಿನ ನಡಿಗೆ’ ಸಮಕಾಲೀನ ವಿಡಂಬನೆಗಳ ಪುಸ್ತಕ: ಶಿವಸುಂದರ್

22-04-2024 ಬೆಂಗಳೂರು

ಬೆಂಗಳೂರು: ಚಂದ್ರಪ್ರಭ ಕಠಾರಿಯವರು ವಿಡಂಬನೆಗಳನ್ನು ಬರೆದಿದ್ದಾರೆ. ವಿಡಂಬನೆ, ಲೇವಡಿ ಮಾಡುವುದಕ್ಕೆ ಇಂದು ಬಹಳ ಧೈರ್ಯ ಬ...