ಶ್ರೀಹರಿ ಧೂಪದ ಮತ್ತು ಪುನರ್ವಸು ಅವರ ಪುಸ್ತಕ ಬಿಡುಗಡೆ ಸಮಾರಂಭ

Date: 21-10-2019

Location: ಬಾಗಲಕೋಟೆ


ನೆನ್ನೆ ಬಾಗಲಕೋಟೆಯಲ್ಲಿ ನವನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಕಾವ್ಯ ಪ್ರಕಾಶ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಪುಸ್ತಕ ಬಿಡುಗಡೆ ಚಿತ್ರಪ್ರದರ್ಶನ ಮತ್ತು ಪುಸ್ತಕ ಮಾರಾಟ ಕಾರ್ಯಕ್ರಮದಲ್ಲಿ ಶ್ರೀಹರಿ ಧೂಪದ ಅವರ ನವಿಲೂರ ದಾರಿಯಲ್ಲಿ ಕಥಾ ಸಂಕಲನ ಹಾಗೂ ಪುನರ್ವಸು ಪ್ರಶಾಂತ ಅವರ ತೊರೆದು ಜೀವಿಸಬಹುದೇ ಲೇಖನ ಪುಸ್ತಕಗಳನ್ನು ಲೋಕಾರ್ಪಣೆ ಗೊಂಡವು. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಬಾಳಾಸಾಹೇಬ ಲೋಕಾಪುರ ಮಾತನಾಡಿ "ಪಾತ್ರಗಳ ಮೂಲಕ ಜಗತ್ತನ್ನು ನೋಡುವ ದೃಷ್ಟಿಕೋನ ಕಥೆಗಾರರಿಗೆ ಇರಬೇಕು" ಎಂದು ಹೇಳಿದರು. ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ 250ಕ್ಕೂ ಹೆಚ್ಚು ಜನ ಸಾಹಿತ್ಯಾಸಕ್ತರು ಭಾಗವಹಿಸಿದ್ದರು. ಸಾಹಿತ್ಯ ಅಕಾಡೆಮಿ ಸದಸ್ಯ ಬಾಳಾಸಾಹೇಬ ಲೋಕಾಪುರ ಅವರು ಮಾತನಾಡಿ ಪಾತ್ರಗಳ ಮೂಲಕ ಜಗತ್ತನ್ನು ನೋಡುವ ದೃಷ್ಟಿಕೋನ ಕಥೆಗಾರರಿಗೆ ಇರಬೇಕು ಎಂದು ಹೇಳಿದರು. ಉತ್ತರ ಕರ್ನಾಟಕದ ದೂರದೂರುಗಳಿಂದಲೂ ಸಾಹಿತ್ಯಾಸಕ್ತರು ಬಂದದ್ದು ಕಾರ್ಯಕ್ರಮ ಆಯೋಜಕರಿಗೆ ಮತ್ತಷ್ಟು ಹುಮ್ಮಸ್ಸು ನೀಡಿತು. ಕಥೆಗಾರ ಹನುಮಂತ ಹಾಲಿಗೇರಿ, ಲೇಖಕರಾದ ಶ್ರೀಹರಿ ಧೂಪದ, ಪುನರ್ವಸು ಪ್ರಶಾಂತ, ಪದ್ಮಜಾ ಜೋಯಿಸ್, ಕಿರಣ ಬಾಳಾಗೋಳ, ಅಬ್ಬಾಸ್ ಮೇಲಿನಮನಿ, ಶ್ರೇಯಾಂಶ, ಮುತ್ತು ಬಳ್ಳಾ, ಬಸವರಾಜ ಗೌಡರು ಉಪಸ್ಥಿತರಿದ್ದರು.

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...