ರಾಜ್ಯಾದಂತ ’ಶ್ರೀ ರಾಮಾಯಣ ದರ್ಶನಂ’ ವಾಚನಾಭಿನಯ ಅಭಿಯಾನ

Date: 08-11-2019

Location: .


ಕುವೆಂಪು ಅವರ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಆಶಯ ಹೊತ್ತ ’ಶ್ರೀ ರಾಮಾಯಣ ದರ್ಶನಂ’ ವಾಚನಾಭಿನಯ ಅಭಿಯಾನ ಜನವರಿಯಲ್ಲಿ ರಾಜ್ಯಾದಂತ ಮತ್ತೆ ಸಂಚಾಲನೆ ಪಡೆಯಲಿದೆ.

ಕವಯತ್ರಿ ಎಚ್‌. ಆರ್‌. ಸುಜಾತರವರ ಪರಿಕಲ್ಪನೆ ಮತ್ತು ನಿರ್ವಹಣೆಯ ಈ ವಾಚಕಾಭಿನಯ ಹಲವಾರು ಕಾಲೇಜುಗಳಲ್ಲಿ ಒಂದು ಹಂತ ಪೂರೈಸಿ 42 ಕಾಲೇಜಿನಲ್ಲಿ ಪ್ರದರ್ಶನಗೊಂಡು ವಿದ್ಯಾರ್ಥಿ, ಅಧ್ಯಾಪಕ ವೃಂದದಲ್ಲಿ ಮೆಚ್ಚುಗೆ ಪಡೆದಿದೆ. ನಿನಾಸಂ ರಂಗಕರ್ಮಿ ಎಂ. ಗಣೇಶನ್‌ಅವರು ’ಶ್ರೀ ರಾಮಾಯಣ ದರ್ಶನಂ’ ಕೃತಿಯನ್ನು ಓದಿನೊಂದಿಗೆ ಆಂಗಿಕಾಭಿನಯವನ್ನ ಮಾಡುವುದರಿಂದ ವಿಶೇಷವಾಗಿ ಮತ್ತು ಅಷ್ಟೇ ವೇಗವಾಗಿ ಯುವಜನತೆಯ ಮನ ಮುಟ್ಟುತ್ತದೆ. 

’ಶ್ರೀ ರಾಮಾಯಣ ದರ್ಶನಂ’ ವಾಚನಾಭಿನಯಕ್ಕೆ ಉತ್ತಮ ಪ್ರತಿಕ್ರಿಯೆ

“’ಶ್ರೀರಾಮಾಯಣ ದರ್ಶನಂ’ ಕಥೆಗೆ ಕಾಲಮಾನದ ಸೀಮಾರೇಖೆ ಇಲ್ಲ. ಉದಾಹರಣೆಗೆ ’ಅಂದು ಮಹಿಳೆಯರನ್ನು ರಾಜಕುಮಾರ ಹೊತ್ತೊಯ್ಯುತ್ತಿದ್ದ. ಇಂದು ಅತ್ಯಾಚಾರಿಗಳು ಒತ್ತೊಯ್ಯುತ್ತಿದ್ದಾರೆ. ವಿಧಾನಗಳು ಬದಲಾಗಿದ್ದರು ಸ್ವರೂಪ ಮೂಲದಂತೆಯೆ ಇದೆ. ಈವರೆಗೆ 41 ಕಾಲೇಜುಗಳಲ್ಲಿ ವಾಚಕಾಭಿನಯ ನಿರ್ವಹಿಸಿದ್ದು, 41 ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಂದ ಉತ್ತಮ ಪ್ರತಿಕ್ರಿಯೆ, ಅಭಿಪ್ರಾಯಗಳು ವ್ಯಕ್ತವಾಗಿವೆ. ಕುವೆಂಪು ಅವರ ವಿಚಾರಗಳು ವಿದ್ಯಾರ್ಥಿಗಳಿಗೆ ತಲುಪಲಿ ಎನ್ನುವ ಉದ್ದೇಶದಿಂದ ಆರಂಭಿಸಿದ ವಾಚನಾಭಿನಯ ಇಂದು ತನ್ನದೇ ಆಯಾಮದ ಓದುಗರನ್ನು ಸೃಷ್ಟಿಸಿಕೊಂಡಿದೆ. ಕಾರಣ ಕುವೆಂಪು ತಿಳುವಳಿಕೆ, ಜ್ಞಾನ ಎಂದೆಂದಿಗೂ ಪ್ರಸ್ತುತ” ಎಂದು ಹರ್ಷ ವ್ಯಕ್ತಪಡಿಸುತ್ತಾರೆ ಕವಯತ್ರಿ ಎಚ್. ಆರ್‌. ಸುಜಾತ.

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...