ಸೃಜನಶೀಲ ಬರಹಗಾರರಿಗಾಗಿ ಸಂಕ್ರಾಂತಿ ಕವಿತೆ - ಕಥಾ ಸ್ಪರ್ಧೆ

Date: 03-12-2021

Location: ಬೆಂಗಳೂರು


ಕನ್ನಡ ಪ್ರಾದೇಶಿಕ ಪತ್ರಿಕೆಯಾದ ‘ಜನಮಿತ್ರ’, ಸೃಜನಶೀಲ ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2022ನೇ ಸಾಲಿನ ರಾಜ್ಯಮಟ್ಟದ ಕವಿತೆ ಮತ್ತು ಕಥಾ ಸ್ಪರ್ಧೆಯನ್ನು ಆಯೋಜಿಸಿದೆ. ಸಂಕ್ರಾತಿ ಹಬ್ಬದ ಪ್ರಯುಕ್ತ ಆಯೋಜಿಸಲಾದ ಕವಿತೆ ಹಾಗೂ ಕಥಾ ಸ್ಪರ್ಧೆಯ ಮೊದಲ ಬಹುಮಾನ 5000 ರೂಪಾಯಿ, ಎರಡನೇ ಬಹುಮಾನ 3000 ರೂಪಾಯಿ ಹಾಗೂ ಮೂರನೇ ಬಹುಮಾನವಾಗಿ 2000 ರೂಪಾಯಿ ನಿಗದಿಪಡಿಸಲಾಗಿದೆ.

ನಿಯಮಗಳು: ಕಥೆ ಸಾವಿರ ಪದಗಳನ್ನು ಮೀರುವಂತಿರಬಾರದು.ಕವಿತೆಗಳು ಸ್ವರಚಿತವಾಗಿದ್ದು, ಸ್ಪರ್ಧೆಗೆ ತಮ್ಮ ಒಂದು ಪದ್ಯವನ್ನು ಮಾತ್ರ ಕಳುಹಿಸಬೇಕು. ಬರಹಗಳು ಹೊಸತನದಿಂದ ಕೂಡಿದ್ದು ಬೇರೆಲ್ಲೂ ಪ್ರಕಟವಾಗಿರಬಾರದು. ಸ್ಪರ್ಧಿಗಳು ತಮ್ಮ ಹೆಸರು, ವಿಳಾಸ ಮತ್ತಿತರ ವಿವರಗಳನ್ನು ಕಥೆ-ಕವಿತೆಯ ಜೊತೆಗೆ ಬರೆಯದೇ, ಪ್ರತ್ಯೇಕ ಹಾಳೆಯಲ್ಲಿ ಬರೆಯಬೇಕು. ಹಸ್ತಪ್ರತಿ ಕಳುಹಿಸುವವರು ತಮ್ಮ ಬರಹವನ್ನು ಹಾಳೆಯ ಒಂದು ಮಗ್ಗುಲಲ್ಲಿ ಅಚ್ಚುಕಟ್ಟಾಗಿ ಡಿ.ಟಿ.ಪಿ ಮಾಡಿಸಿ ಕಳುಹಿಸಬೇಕು. ಇ-ಮೇಲ್ ಮೂಖಾಂತರ ಕಳುಹಿಸುವವರು ನುಡಿ ತಂತ್ರಾಂಶದಲ್ಲಿ ಮಾತ್ರ ಕಳುಹಿಸಬೇಕು. ಅಲ್ಲದೆ ಸ್ಪರ್ಧೆಗೆ ಸಂಬಂಧಿಸಿದಂತೆ ಪತ್ರ- ಫೋನ್ ವ್ಯವಹಾರಕ್ಕೆ ಆಸ್ಪದವಿರುವುದಿಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮ ಎಂಬುದಾಗಿ ಜನಮಿತ್ರ ತಂಡ ಪ್ರಕಟನೆಯಲ್ಲಿ ತಿಳಿಸಿದೆ.

ಪ್ರವೇಶಗಳು ತಲುಪಲು ಕಡೆಯ ದಿನಾಂಕ ಡಿಸೆಂಬರ್ 5, 2021

ಪ್ರವೇಶಗಳನ್ನು ಕಳುಹಿಸಬೇಕಾದ ವಿಳಾಸ: ಜನಮಿತ್ರ, ಸುದೈವ ಬಿಲ್ಡಿಂಗ್, ಆರ್. ಸಿ ರಸ್ತೆ, ಹಾಸನ- 573201

ಇ-ಮೇಲ್ : janamitracontest@gmail.com

MORE NEWS

ಹೊಸ ಸೃಷ್ಠಿಗೆ ಕಾರಣವಾಗುವ ಬರವಣಿಗೆ...

18-01-2022 ಬೆಂಗಳೂರು

ಹೊಸ ಸೃಷ್ಠಿಗೆ ಕಾರಣವಾಗುವಂತಹ ಬರವಣಿಗೆಗಳು ಸಮಾಜವನ್ನು ಮುನ್ನಡೆಸುತ್ತವೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡ...

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ...

18-01-2022 ಬೆಂಗಳೂರು

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರ ಪತ್ನಿ ಸತ್ಯಭಾಮ ಕಂಬಾರ ಅವರು ಜನವರಿ 18 ಮಂಗಳವಾರದಂದು ಹೃದಯ ಸಂಬಂಧ...

ಗಿರೀಶ್ ಕಾಸರವಳ್ಳಿ ಅವರಿಗೆ 'ವಿಶ್ವ...

17-01-2022 ಬೆಂಗಳೂರು

ಕನ್ನಡ, ನಾಡು-ನುಡಿ, ಸಂಸ್ಕೃತಿಗೆ ಅನನ್ಯ ಸೇವೆ ಸಲ್ಲಿಸಿರುವ ಕಲಾವಿದರಿಗೆ, ಉಡುಪಿ ವಿಶ್ವನಾಥ ಶೆಣಿೈ ಹಾಗೂ ಪ್ರಭಾವತಿ ವಿ...