ಸುದ್ದಿಯ ಒತ್ತಡದ ನಡುವೆಯೂ ಸಾಹಿತ್ಯದ ಬರವಣಿಗೆ -ಬಿ.ಎಲ್.ವೇಣು

Date: 20-09-2021

Location: ಐಶ್ವರ್ಯಾ ಫೋರ್ಟ್ ಸಭಾಂಗಣ, ಚಿತ್ರದುರ್ಗ


ಕತೆ, ಕಾದಂಬರಿಗಳನ್ನು ಬರೆದು ಕೃತಿ ರೂಪಕ್ಕೆ ತಂದು ಸಾಹಿತ್ಯ ಲೋಕದಲ್ಲೂ ಹೆಸರು ಮಾಡುವ ಪತ್ರಕರ್ತರು ತುಂಬಾ ವಿರಳ. ಅದರ ನಡುವೆಯೇ ಪತ್ರಕರ್ತ ತಿಪ್ಪೇರುದ್ರಪ್ಪ ಅವರು 83ರ ವಯಸ್ಸಿನಲ್ಲೂ ಕೃತಿಯನ್ನು ರಚಿಸಿ, ಮುದ್ರಿಸಿ, ಬಿಡುಗಡೆಗೊಳಿಸುತ್ತಿರುವುದು ಮೆಚ್ಚುವ ವಿಚಾರ ಎಂಬುದಾಗಿ ಸಾಹಿತಿ ಬಿ.ಎಲ್.ವೇಣು ಮೆಚ್ಚುಗೆ ವ್ಯಕ್ತಪಡಿಸಿದರು.

ಚಿತ್ರದುರ್ಗದ ಐಶ್ವರ್ಯಾ ಫೋರ್ಟ್ ಸಭಾಂಗಣದಲ್ಲಿ ಹಿರಿಯ ಪತ್ರಕರ್ತ ಚಂದ್ರವಳ್ಳಿ ಪತ್ರಿಕೆಯ ವಿಶ್ರಾಂತ ಸಂಪಾದಕ ಹೆಚ್.ಎನ್ ತಿಪ್ಪೇರುದ್ರ ಸ್ವಾಮಿ ಅವರ ‘ಹುಚ್ಚು ಹಿಡಿಯಿತು ಮತ್ತು ಕೆಲ ಕಥೆಗಳು’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪತ್ರಿಕೋದ್ಯಮವನ್ನೇ ಉದ್ಯೋಗವಾಗಿಸಿಕೊಂಡವರಿಗೆ ಸುದ್ದಿ,ವರದಿಯಂತಹ ಬರವಣಿಗೆಗೆ ಮಾತ್ರವೇ ಸಮಯ ಸಿಗಲಿದ್ದು, ಸಾಹಿತ್ಯಿಕ ಬರವಣಿಗೆಗೆ ಕೆಲಸದ ಒತ್ತಡದ ಅನುವು ಮಾಡಿಕೊಡುವುದಿಲ್ಲ.ಆದರೆ ಲಂಕೇಶ್ ತಮ್ಮ ಬದುಕನ್ನೇ ಪತ್ರಿಕಾ ಕ್ಷೇತ್ರಕ್ಕೆ ಮೀಸಲಿಟ್ಟರೂ ಸಾಹಿತ್ಯ ಕ್ಷೇತ್ರದಲ್ಲೂ ಹೆಸರು ಮಾಡಿದರು. ಅಗ್ನಿ ಶ್ರೀಧರ್, ರವಿ ಬೆಳಗೆರೆ, ಜೋಗಿ ಸೇರಿದಂತೆ ಅನೇಕ ಪತ್ರಕರ್ತರು ಸಾಹಿತಿಗಲೂ ಆಗಿದ್ದಾರೆ. ಅಂಥವರ ಸಾಲಿಗೆ ಹೆಚ್.ಎನ್ ತಿಪ್ಪೇರುದ್ರ ಸ್ವಾಮಿಯವರು ಸೇರ್ಪಡೆಗೊಂಡಿರುವುದು ಖುಷಿಯ ವಿಚಾರ ಎಂದರು.

ಬೆಂಗಳೂರು ವಿವಿ ವಿಶ್ರಾಂತ ಕುಲಸಚಿವ ಡಾ.ಬಿ.ಕೆ.ರವಿ ಮಾತನಾಡಿ, ಪ್ರಸ್ತುತ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಮಾಧ್ಯಮ ಕ್ಷೇತ್ರ, ಸಮಾಜಮುಖಿ ಕಾರ್ಯಗಳಲ್ಲಿ ಹೆಚ್ಚಿಗೆ ತೊಡಗಿಸಿಕೊಳ್ಳಬೇಕು. ಸಮಾಜಮುಖಿ ಸುದ್ದಿಗಳತ್ತ ಹೆಚ್ಚಿಗೆ ಗಮನಹರಿಸಿದರೆ ಮಾಧ್ಯಮ ಕ್ಷೇತ್ರ ಹಾಗೂ ಮಾಧ್ಯಮ ರಂಗದಲ್ಲಿ ಕಾರ್ಯನಿರ್ವಹಿಸುವ ಮಂದಿಗೆ ಗೌರವ ಸಿಗುತ್ತದೆ ಎಂದರು.

ತುಮಕೂರು ವಿಶ್ವ ವಿದ್ಯಾಲಯದ ಪ್ರೊ.ಹೊನ್ನಗಾನಹಳ್ಳಿ ಕರಿಯಣ್ಣ ಮಾತನಾಡಿ, ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸಾಮಾಜಿಕ ವಿಚಾರಗಳಲ್ಲಿ ತಿಪ್ಪೇರುದ್ರ ಸ್ವಾಮಿ ಅವರ ಆಸಕ್ತಿ, ಶ್ರದ್ಧೆ ಮೆಚ್ಚುವಂಥದ್ದು, ಇಳಿಯ ವಯಸ್ಸಿನಲ್ಲೂ ಚಿರಯುವಕಂತೆ ಕಾರ್ಯನಿರ್ವಹಿಸುವ ಅವರ ಹುಮ್ಮಸ್ಸು ಇಂದಿನ ಯುವ ಪೀಳಿಗೆಗೆ ಮಾದರಿ ಎಂದರು.

ರಾಜ್ಯ ಹೋಮಿಯೋ ಮಂಡಳಿ ಅಧ್ಯಕ್ಷ ಡಾ.ಬಿ.ಟಿ.ರುದ್ರೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ನಿರ್ಮಲ ಸ್ವಾಗತಿಸಿದರು. ಕೆಪಿಎಂ ಗಣೇಶಯ್ಯ ನಿರೂಪಿಸಿದರು.

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...