ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ

Date: 12-08-2022

Location: bangalore


ಪ್ರಸಿದ್ಧ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರು ಹೃದಯಘಾತದಿಂದ ನಿಧನರಾಗಿದ್ದಾರೆ.

ಗುರುವಾರ ರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಜಯದೇವ ಹೃದ್ರೋಗ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು.

ಅವರು ಮಕ್ಕಳಾದ ಶ್ರೀರಂಗ, ಬಾಗೇಶ್ರೀ ಅವರನ್ನು ಅಗಲಿದ್ದಾರೆ.

ಶಿವಮೊಗ್ಗದ ನಗರ ಎಂಬ ಊರಿನಲ್ಲಿ ೧೯೩೮ರಲ್ಲಿ ಶಿವಮೊಗ್ಗ ಸುಬ್ಬಣ್ಣ ಜನಿಸಿದ್ದರು. ಬಿ.ಕಾಂ.,ಎಲ್.ಎಲ್.ಬಿ. ಪದವೀಧರರಾಗಿದ್ದರು. ಕುವೆಂಪು, ಬೇಂದ್ರೆ ಮೊದಲಾದ ನಾಡಿನ ಪ್ರಖ್ಯಾತ ಕವಿಗಳ ಭಾವಗೀತೆಗಳನ್ನು ಹಾಡುವ ಮೂಲಕ ಅವರು ನಾಡಿನಲ್ಲಿ ಖ್ಯಾತರಾಗಿದ್ದರು.

ಸುಬ್ಬಣ್ನ ಅವರು ಅಖಾಶವಾಣಿ ಮತ್ತು ದೂರದರ್ಶನದ ’ಎ’ ಟಾಪ್ ಶ್ರೇಣಿಯ ಗಾಯಕರಾಗಿದ್ದರು. ’ಕಾಡುಕುದುರೆ’ ಚಿತ್ರಕ್ಕಾಗಿ 1979ರಲ್ಲಿ ಅವರು ಹಾಡಿದ್ದ ’ಕಾಡುಕುದುರೆ ಓಡಿಬಂದಿತ್ತ’ ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ ರಜತ ಕಮಲ ರಾಷ್ಟ್ರಪ್ರಶಸ್ತಿ ಬಂದಿತ್ತು. ಈ ಪ್ರಶಸ್ತಿಗೆ ಪಾತ್ರರಾದ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆ ಸುಬ್ಬಣ್ಣ ಅವರದಾಗಿತ್ತು.

1985ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 1988ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪುರಸ್ಕಾರ, 1999ರಲ್ಲಿ ಸಂತ ಶಿಶುನಾಳ ಷರಿಫ ಪ್ರಶಸ್ತಿ, 2008ರಲ್ಲಿ ಕುವೆಂಪು ವಿವಿ ಗೌರವ ಡಾಕ್ಟರೇಟ್ ಮೊದಲಾದ ಗೌರವಗಳಿಗೆ ಅವರು ಪಾತ್ರರಾಗಿದ್ದರು.

MORE NEWS

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...

ಸಾಧನೆಯ ಹಾದಿಯಲ್ಲಿ ಎಲ್ಲರೂ ಏಕಾಂಗಿ - ಬಿ. ಪುರಂದರ ಭಟ್

16-04-2024 ಬೆಂಗಳೂರು

ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಸಾಹಿತ್ಯ ಬಳಗದ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಅಂಬ...

'ಮಕ್ಕಳ ಕತೆಗಳ ಅನನ್ಯ ಪ್ರೀತಿ ರಾಮೇಂದ್ರ ಕುಮಾರ' ಕುರಿತು ವಿಚಾರಣ ಸಂಕಿರಣ 

15-04-2024 ಬೆಂಗಳೂರು

ಬೆಂಗಳೂರು: ಜೀವನಾನುಭವವನ್ನು ವಿಸ್ತರಿಸುವ, ಮಕ್ಕಳ ಭವಿಷ್ಯವನ್ನು ಉಜ್ವಲವಾಗಿ ರೂಪಿಸುವ ಕೆಲಸವನ್ನು ಹಿಂದೆ‌ ಅಜ್ಜಿ...