ತಪ್ಪು ಸರಿ ಎನ್ನುವುದು ಕಾಲಘಟ್ಟ ಮತ್ತು ಮನಸ್ಥಿತಿಯನ್ನು ಅವಲಂಭಿಸಿರುತ್ತದೆ 


“ಸುಧಾ ಅಡುಕಳ ಅವರ ಅಂಕಣ ಬರಹಗಳನ್ನು ಆಗೊಮ್ಮೆ ಈಗೊಮ್ಮೆ ಓದಿದ್ದು ಬಿಟ್ಟರೆ ಕತೆಗಳನ್ನು ಓದಿದ್ದೇ ಇಲ್ಲ. ಆ ತಪ್ಪನ್ನು ಸರಿಪಡಿಸಿಕೊಳ್ಳೆಲೆಂದೇ ನೀಲಿ ಮತ್ತು ಸೇಬು ಕಥಾಸಂಕಲನವನ್ನು ಕೈಗೆತ್ತಿಕೊಂಡಿದ್ದು, ಎನ್ನುತ್ತಾರೆ ಸುಶ್ಮಿತಾ ನೇರಳಕಟ್ಟೆ. ಅವರು ಸುಧಾ ಆಡುಕಳ ಅವರ "ನೀಲಿ ಮತ್ತು ಸೇಬು" ಕೃತಿ ಕುರಿತು ಬರೆದ ವಿಮರ್ಶೆ.

ಬಸ್ಸಿನ ಕಿಟಕಿ ಬದಿಯ ಸೀಟಿನಲ್ಲಿ ಕುಳಿತು ತಂಗಾಳಿಗೆ ಮುಖವೊಡ್ಡಿ ಪ್ರಯಾಣ ಮಾಡುವಂತೆ ಇಲ್ಲಿನ ಕತೆಗಳ ಓದಿನ ಹಿತ. ಇಲ್ಲಿ ಒಟ್ಟು 12 ಕತೆಗಳಿದ್ದೂ, ಒಂದೇ ಗುಕ್ಕಿಗೆ ಓದಬಹುದಾದರೂ, ಅಲ್ಲಲ್ಲಿ ಹೃದಯ ಭಾರವಾಗಿ ಪುಸ್ತಕ ಕ್ಷಣಕಾಲ ಬದಿಗಿಟ್ಟು ಸುಧಾರಿಸಿಕೊಂಡು ಮುಂದುವರಿಯುವಂತೆ ಮಾಡುತ್ತದೆ. ಅಪ್ಪತ್ತೆ ಕತೆಯ ಅಪ್ಪತ್ತೆ ಅಂದಿನ ಪೀಳಿಗೆಯವರಿಗೆ ಗಂಡುಬೀರಿಯಂತೆ ಕಂಡುಬಂದರೇ ಇಂದಿನ ಪೀಳಿಗೆಯವರಿಗೆ ತನ್ನದೇ ಆದ ಗಟ್ಟಿ ವ್ಯಕ್ತಿತ್ವವುಳ್ಳ ಆದರ್ಶ ಮಹಿಳೆಯಾಗಿ ಕಂಡುಬಂದಿದ್ದಾಳೆ. ತಪ್ಪು ಸರಿ ಎನ್ನುವುದು ಕಾಲಘಟ್ಟ ಮತ್ತು ಮನಸ್ಥಿತಿಯನ್ನು ಅವಲಂಭಿಸಿರುತ್ತದೆ ಎನ್ನುವುದು ಇಲ್ಲಿ ಸೂಚ್ಯವಾಗಿ ಹೇಳಲ್ಪಟ್ಟಿದೆ. ರೇಶನ್ ಸೀರೆ ಕತೆಯ ಅಂತ್ಯ ಮೊದಲೇ ಸುಲಭವಾಗಿ ಊಹಿಸುವಂತಿದ್ದರೂ, ಕಣ್ಣಂಚು ತೇವಗೊಳಿಸುವಲ್ಲಿ ಯಶಸ್ವಿಯಾಗಿರುವುದು ಕತೆಗಾರ್ತಿಯ ಹೆಚ್ಚುಗಾರಿಕೆ. ನೀಲಿ ಮತ್ತು ಸೇಬು ಕತೆ ನನ್ನದೇ ಬದುಕಿನ ಕತೆ ಅನ್ನಿಸಿತು. ಆದರೆ ಅಲ್ಲಿ ಸೇಬು ಇರಲಿಲ್ಲ, ಅದರ ಜಾಗದಲ್ಲಿ ನನ್ನಿಷ್ಟದ ವಸ್ತು ಇತ್ತು. ಪ್ರತಿಯೊಬ್ಬರಿಗೂ ಬಾಲ್ಯದಲ್ಲಿ ದೊರೆಯದ ವಸ್ತುವನ್ನು ದೊಡ್ಡವಳಾದ ಮೇಲೆ ನಾನೇ ಸಂಪಾದಿಸಿಕೊಳ್ಳುತ್ತೀನಿ ಎನ್ನುವ ಕನಸಿರುತ್ತದೆ. ಆದರೆ ಸಂಪಾದಿಸುವ ಸಮಯಕ್ಕೆ ಅದಕ್ಕಿಂತ ಮುಖ್ಯವಾದವು ಕಣ್ಣ ಮುಂದೆ ಬಂದು ಉಳಿದದ್ದು ಹಿಂದಕ್ಕೆ ಸರಿಯುತ್ತವೆ.

ಇದಿಷ್ಟು ಕೆಲ ಉದಾಹರಣೆಗಳಷ್ಟೇ. ಇನ್ನುಳಿದ ಕತೆಗಳು ಕೂಡ ಒಂದಕ್ಕಿಂತ ಒಂದು ಭಿನ್ನವಾಗಿವೆ. ಸ್ತ್ರೀ ಕೇಂದ್ರಿತ ಕತೆಗಳಾದರೂ, ಗಂಡಿನ ಉಪಸ್ಥಿತಿಯನ್ನು ಅವರು ಗೌಣವಾಗಿಸಿಲ್ಲ. ಕತೆಕಟ್ಟುವ ತಂತ್ರಗಾರಿಕೆ, ಕಥಾ ವಸ್ತುವಿನ ಆಯ್ಕೆ, ನಿರೂಪಣ ಶೈಲಿ, ಅಲ್ಲಲ್ಲಿ ಬರುವ ಹಳ್ಳಿಯ ಚಿತ್ರಣ ಇತ್ಯಾದಿ ಎಲ್ಲವೂ ಇದು ನಮ್ಮ ನಡುವಿನ ಕತೆ ಎನ್ನುವಷ್ಟು ಆಪ್ತವಾಗಿಸಿವೆ.

 

MORE FEATURES

ಉತ್ತರ ಕರ್ನಾಟಕದ ಅಮಾಯಕ ಹೆಣ್ಮಕ್ಕಳನ್ನು ಪ್ರತಿನಿಧಿಸುತ್ತಾ ನಿಲ್ಲುತ್ತವೆ

16-03-2025 ಬೆಂಗಳೂರು

"ಬದುಕಿನಲ್ಲಿ ಲೇಖಕರಿಗೆ ಸೂಕ್ಷ್ಮತೆ ಬೇಕು ಅಂತಿದ್ರು ಲೇಖಕರೊಬ್ರು. ಇದನ್ನು ನೋಡಿದಾಗಲೂ ಹಾಗೇ ಅನಿಸಿತು ನನಗೆ. ಒಂ...

ಭಾಷಾಸಮೃದ್ಧಿ ಆಶಾ ಅವರ ಕಥನಕಲೆಯ ವೈಶಿಷ್ಟ್ಯಗಳು

16-03-2025 ಬೆಂಗಳೂರು

"ಸಶಕ್ತ ಬರವಣಿಗೆ, ಭಾಷಾಸಮೃದ್ಧಿ ಆಶಾ ಅವರ ಕಥನಕಲೆಯ ವೈಶಿಷ್ಟ್ಯಗಳು. 'ಕೆಂಪು ದಾಸವಾಳ' ಕಥಾಸಂಕಲನದ ಕಥೆಗ...

ಕೌಟುಂಬಿಕ ಕಥಾ ವಸ್ತುಗಳ ಮೇಲೆ ರಚಿತವಾದಂಥ ಕಥೆಗಳಿವು

16-03-2025 ಬೆಂಗಳೂರು

"ಸದಾ ಅಕ್ಷೇಪದ ದನಿಯೆತ್ತುತ್ತ ಗೊಣಗಾಡುವ, ಲಕ್ವಾ ಹೊಡೆದು ಹಾಸಿಗೆ ಹಿಡಿದ ಚಿಕ್ಕಮಾವನ ಚಾಕರಿ ಮಾಡಿ ಬೇಸತ್ತ ಭಾಗಮ್...