ತಾಯ್ಮಾತಿನ ಶಿಕ್ಶಣ: ಕೆಲವು ಸವಾಲುಗಳು-ಮುಂದುವರೆದುದು

Date: 06-03-2025

Location: ಬೆಂಗಳೂರು


"ಈ ಎಲ್ಲ ಸಮಸ್ಯೆಗಳನ್ನು ಎದುರಿಗೆ ಇಟ್ಟುಕೊಂಡು ಕೆಲಸಗಳನ್ನು ಮಾಡಬೇಕಿದೆ. ಪ್ರತಿ ಸಮಸ್ಯೆಯೂ ಒಂದು ಬಿನ್ನ ಸಮಸ್ಯೆಯೆ ಆಗಿರುತ್ತದೆ. ಹಲವು ಸ್ತೂಲ ನೆಲೆಯ ಯೋಚನೆಗಳು ಎಲ್ಲ ಬಾಶೆಗಳಿಗೂ ಅನ್ವಯವಾಗುವಂತವು ಇರುತ್ತವೆ. ಅವುಗಳ ಆಚೆಗೆ ಎಲ್ಲ ಸಂರ‍್ಬಗಳಿಗೂ ಒಂದು ಸಾಮಾನ್ಯ ಸಮಾದಾನವನ್ನು ಪಡೆದುಕೊಳ್ಳುವುದಕ್ಕೆ ಸಾದ್ಯವಿಲ್ಲ," ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ತಾಯ್ಮಾತಿನ ಶಿಕ್ಶಣ: ಕೆಲವು ಸವಾಲುಗಳು-ಮುಂದುವರೆದುದು’ ಕುರಿತು ಬರೆದಿದ್ದಾರೆ.

ಈ ಹಿಂದಿನ ಮಾತುಗಳಲ್ಲಿ ನೋಡಿದ ವಿಚಾರಗಳ ಆಚೆಗೆ ಇನ್ನು ಕೆಲ ಸಮಸ್ಯೆಗಳೆಂದರೆ ಒಳಬಿನ್ನತೆಗಳನ್ನು ಹೊಂದಿರುವ ಕೆಲವು ಸಾಮಾಜಿಕ ಗುಂಪುಗಳು ಇಲ್ಲವೆ ಒಳಗುಂಪುಗಳು ತಮ್ಮ ಸಾಮಾಜಿಕ ಇಲ್ಲವೆ ರಾಜಕೀಯ ಕಾರಣಕ್ಕಾಗಿ ಒಂದು ಗುಂಪು ಆಗಿ ಉಳಿಯಬೇಕೆಂಬ ಆಸೆಯನ್ನು ತಮ್ಮೊಳಗೆ ಹೊಂದಿರಬಹುದು ಇಲ್ಲವೆ ಸಾಮಾಜಿಕ ಪ್ರತಿಶ್ಟೆಯ, ಪಾರಂಪರಿಕ ತರತಮದ ಕಾರಣಕ್ಕಾಗಿ ಇತರರಿಂದ ಬಿನ್ನವಾಗಿ ನಿಲ್ಲಲು ಬಯಸುವ ಸ್ತಿತಿಯೂ ಇರಬಹುದು. ಈ ಎರಡೂ ಸವಾಲನ್ನು ತರುತ್ತವೆ. ಒಂದು ಬಾಶೆ, ಒಂದು ತಾಯ್ಮಾತು ಬಿನ್ನ ರಾಜ್ಯಗಳಲ್ಲಿ ಮಾತ್ರವಲ್ಲದೆ ಒಂದೆ ರಾಜ್ಯದಲ್ಲಿ ಬಿನ್ನ ಪ್ರದೇಶದಲ್ಲಿ ಹರಡಿಕೊಂಡಿರುವಾಗ ಬಿನ್ನ ಗುರ‍್ತಿಕೆಗಳನ್ನು ಕಟ್ಟಿಕೊಂಡಿರುತ್ತವೆ. ಇವು ಸಾಮಾಜಿಕ, ರಾಜಕೀಯ, ದಾರ‍್ಮಿಕ ಮಾತ್ರವಲ್ಲದೆ ಇನ್ನೂ ಬಿನ್ನವಾಗಿರುವ ಮತ್ತು ಇವೆಲ್ಲವೂ ಆಗಿರುವ ಸ್ತಿತಿಗಳನ್ನು ಕಾಣಬಹುದು. ಇಂತಾ ಸಂದರ‍್ಬಗಳಲ್ಲಿ ಸಮಸ್ಯೆಯ ಸ್ವರೂಪವೆ ಬೇರೆಯಾಗಿರುತ್ತದೆ.

ಹೀಗೆ ಬಿನ್ನ ಪ್ರದೇಶ, ಪರಿಸರ, ಸಮಾಜಗಳಲ್ಲಿ ಹರಡಿಕೊಂಡಿರುವ ಬಿನ್ನ ಸಂಬಂದಗಳನ್ನು ಹೊಂದಿರುವ ಗುಂಪುಗಳು ತಮ್ಮದೆ ಕಾರಣಕ್ಕೆ ಆಯಾ ಪ್ರದೇಶ, ಪರಿಸರದೊಂದಿಗೆ ಹೆಚ್ಚು ಸಂಬಂದವನ್ನು ಬೆಳೆಸಿಕೊಂಡಿರುತ್ತವೆ. ಆ ಕಾರಣಕ್ಕಾಗಿ ಪಟ್ಯ ತಯಾರಿಸುವಾಗ, ಲಿಪಿ ಹೊಂದಿಸುವಾಗ ಈ ಎಲ್ಲವೂ ಸಮಸ್ಯೆಗಳಾಗಿ ಬರುತ್ತವೆ. ಯಾವ ಗುಂಪಿನ, ಯಾವ ಒಳಗುಂಪಿನ ಹಿನ್ನೆಲೆಯನ್ನು ಮುನ್ನೆಲೆಗೆ ತರಬೇಕು ಎಂಬ ಸಮಸ್ಯೆ ಬರುತ್ತದೆ. ಸಹಜವಾಗಿಯೆ ಪಟ್ಯತಯಾರಿ, ಲಿಪಿ ತಯಾರಿ, ವ್ಯಾಕರಣ, ನಿಗಂಟು ಮೊದಲಾದ ಈ ಕೆಲಸಗಳು ಶಿಶ್ಟತೆಯ ಕಡೆಗಿನ ದಾರಿಯಾಗುತ್ತವೆ. ಈ ಶಿಶ್ಟತೆ ಸಾಮಾಜಿಕ, ರಾಜಕೀಯ ಪ್ರತಿಶ್ಟೆ ಪಡೆದುಕೊಳ್ಳುವುದರಿಂದ ಸಹಜವಾಗಿಯೆ ಇಲ್ಲಿ ಸಮಸ್ಯೆಗಳು ಬರುತ್ತವೆ. ಈ ಎಲ್ಲ ಸಮಸ್ಯೆಗಳನ್ನು ತಾಯ್ಮಾತಿನ ಶಿಕ್ಶಣವನ್ನು ಜಾರಿಗೆ ತರುವ ಮೊದಲು ಗಮನಿಸಬೇಕಾಗುತ್ತದೆ. ಆದರೆ ಸವಾಲುಗಳು, ಸಮಸ್ಯೆಗಳು ಇವೆ ಎಂಬ ಕಾರಣಕ್ಕೆ ಇದನ್ನು ಕಯ್ಬಿಡಬೇಕಾದ ಅವಶ್ಯಕತೆ ಇಲ್ಲ. ಇವುಗಳಿಗೆ ಸೂಕ್ತ ಸಮಾದಾನಗಳನ್ನು ಕಂಡುಕೊಳ್ಳಬೇಕಿದೆ. ಮತ್ತು ಮುಂದುವರೆಯಬೇಕಿದೆ.

ಈ ಎಲ್ಲ ಸಮಸ್ಯೆಗಳನ್ನು ಎದುರಿಗೆ ಇಟ್ಟುಕೊಂಡು ಕೆಲಸಗಳನ್ನು ಮಾಡಬೇಕಿದೆ. ಪ್ರತಿ ಸಮಸ್ಯೆಯೂ ಒಂದು ಬಿನ್ನ ಸಮಸ್ಯೆಯೆ ಆಗಿರುತ್ತದೆ. ಹಲವು ಸ್ತೂಲ ನೆಲೆಯ ಯೋಚನೆಗಳು ಎಲ್ಲ ಬಾಶೆಗಳಿಗೂ ಅನ್ವಯವಾಗುವಂತವು ಇರುತ್ತವೆ. ಅವುಗಳ ಆಚೆಗೆ ಎಲ್ಲ ಸಂದರ‍್ಬಗಳಿಗೂ ಒಂದು ಸಾಮಾನ್ಯ ಸಮಾದಾನವನ್ನು ಪಡೆದುಕೊಳ್ಳುವುದಕ್ಕೆ ಸಾದ್ಯವಿಲ್ಲ. ಇದು ಬಾರತೀಯ ಸಾಮಾಜಿಕ ಪರಿಸರದಲ್ಲಿ ಅಸಾದ್ಯ. ದೊಡ್ಡ ಸಂಕೆಯ ಬಾಶೆಗಳು, ಪ್ರತಿ ಬಾಶೆ ಹೊಂದಿರುವ ಪ್ರಾದೇಶಿಕ, ಸಾಮಾಜಿಕ ಮೊದಲಾದ ಬಿನ್ನ ಹಿನ್ನೆಲೆಗಳು, ಬಿನ್ನ ರಾಜ್ಯಗಳಲ್ಲಿನ ಬಿನ್ನ ಸ್ತಿತಿಗತಿಗಳು ಮೊದಲಾದವು ಇರುವುದರಿಂದ ಪ್ರತಿಯೊಂದು ಬಾಶೆಯ ಸಮಸ್ಯೆ-ಸವಾಲುಗಳಿಗೆ ಆಯಾ ಬಾಶೆಯ ಹಂತದಲ್ಲಿಯೆ ಸಮಾದಾನ ಕಂಡುಕೊಳ್ಳಬೇಕಾಗಿರುತ್ತದೆ.

ಜನಗಣತಿ ವರದಿಸುವ ಹತ್ತು ಸಾವಿರಕ್ಕಿಂತ ಹೆಚ್ಚಿಗೆ ಮಾತುಗರು ಇರುವ ಬಾಶೆಗಳಲ್ಲಿಯೂ ಹಲವು ಬಾಶೆಗಳಿಗೆ ಇಂತದೆ ಸಮಸ್ಯೆಗಳು ಇವೆ. ಹಲವಾರು ಬಾಶೆಗಳಿಗೆ ಜನಗಣತಿ ಬಿನ್ನ ಒಳನುಡಿಗಳನ್ನು ಪಟ್ಟಿಸುತ್ತದೆ. ಹಿಂದಿಗೆ ಇಂತಾ ಬಹುದೊಡ್ಡ ಪಟ್ಟಿಯನ್ನು ಕೊಡುತ್ತದೆ. ಆದರೆ, ಸಾಮಾಜಿಕವಾಗಿ ಈ ಒಳನುಡಿಗಳನ್ನು ಬಾಶೆಗಳೆಂದು, ಬಿನ್ನ ಬಾಶೆಗಳೆಂದು ಪರಗಣಿಸುವ ಸ್ತಿತಿಯೂ ಇದೆ. ಹೀಗೆ ಇವುಗಳನ್ನು ಬಾಶೆಗಳೆಂದು ಪರಿಗಣಿಸಿ ಈ ಬಿನ್ನ ಒಳನುಡಿಗಳ ಮೇಲೆ ಹಲವಾರು ಅದ್ಯಯನಗಳು, ಪ್ರಕಟಣೆಗಳೂ ಬಂದಿವೆ. ಹಲವಾರು ಪ್ರಕಟಣೆಗಳನ್ನು ಸರಕಾರವೆ ಮಾಡಿದೆ. ಆದರೆ ಜನಗಣತಿಯಲ್ಲಿ ಅವುಗಳನ್ನು ಒಳನುಡಿಗಳು ಎಂದು ನಮೂದಿಸಲಾಗಿದೆ. ಈ ಕಾರಣದಿಂದ ಬಾರತೀಯ ಜನಗಣತಿ ಹೆಚ್ಚು ಉಪಯೋಗಕ್ಕೆ ಬಾರದ ಸ್ತಿತಿಯಲ್ಲಿ ಉಳಿದುಕೊಂಡುಬಿಡುತ್ತದೆ.

ಈ ಒಳನುಡಿಗಳ ಬಿನ್ನತೆಯನ್ನು ಬಾಶಾವಿಗ್ನಾನಿಗಳು ಹಲವು ಸಂರ‍್ಬಗಳಲ್ಲಿ ಎತ್ತಿ ಹೇಳುತ್ತಾರೆ. ಕುತೂಹಲವೆಂದರೆ ಹಲವು ಒಳನುಡಿಗಳ ವಿಶಯದಲ್ಲಿ ಆ ಒಳನುಡಿ ಮಾತುಗರೆ ತಾವು ಬಿನ್ನ ಎಂದು ನಂಬಿದ್ದಾರೆ ಮತ್ತು ತಾವು ಬಿನ್ನವಾಗಿರಬೇಕು ಎಂದು ಬಯಸುತ್ತಾರೆ. ಹಿಂದಿ ಎಂಬ ಹೆಸರಿನಲ್ಲಿ ತಾಯ್ಮಾತಿನಲ್ಲಿ ಶಿಕ್ಶಣ ಕೊಡಲಾಗುತ್ತದೆ ಎಂಬುದೆ ಒಂದು ಸುಳ್ಳು. ಹಿಂದಿಯ ಒಳಗೆ ಇರುವ ನೂರಾರು ಒಳನುಡಿಗಳಲ್ಲಿ ಯಾವ ಯಾವ ಒಳನುಡಿಗಳಲ್ಲಿ ತಾಯ್ಮಾತಿನ ಶಿಕ್ಶಣ ಕೊಡಲಾಗುತ್ತಿದೆ ಎಂಬುದು ಇಲ್ಲಿ ಮುಕ್ಯವಾಗುತ್ತದೆ. ಸದ್ಯ ಶಿಶ್ಟ ಹಿಂದಿಯಲ್ಲಿ ಶಿಕ್ಶಣ ಕೊಡುತ್ತಿರುವುದು ಬಹುತೇಕ ಹಿಂದಿಯರಿಗೆ ಪೆರಮಾತಿನಲ್ಲಿ ಶಿಕ್ಶಣ ಕೊಡುವಂತದೆ ಪರಿಸ್ತಿತಿಯಲ್ಲಿ ಇರುತ್ತದೆ.

ಇದು ಕೇವಲ ಹಿಂದಿಯ ಸಮಸ್ಯೆಯೇನೂ ಅಲ್ಲ. ಬದಲಿಗೆ ಎಲ್ಲ ಪ್ರದಾನ ಬಾಶೆಗಳ ಸಮಸ್ಯೆಯೂ ಆಗಿದೆ. ಕನ್ನಡದಲ್ಲಿಯೂ ಇಂತಾ ಹಲವಾರು ಸಮಸ್ಯೆಗಳು ಇವೆ. ಇಲ್ಲೆಲ್ಲ ಸಾಮಾನ್ಯವಾಗಿ ಪ್ರಾದೇಶಿಕ, ಸಾಮಾಜಿಕ ಮೊದಲಾದ ಹಿನ್ನೆಲೆಯ ಒಳನುಡಿಗಳನ್ನು ಕಾಣಬಹುದು. ಸಾಮಾಜಿಕ ಹಿನ್ನೆಲೆಯ ಒಳನುಡಿಗಳು ತುಂಬಾ ಸಹಜವಾಗಿ ಬಿನ್ನತೆಯನ್ನು, ಸ್ವತಂತ್ರವನ್ನು ಬಯಸುತ್ತವೆ ಮತ್ತು ಇಂತಾ ಗುಂಪುಗಳನ್ನು ಸ್ವತಂತ್ರ ಎಂದು ಗುರುತಿಸುವುದು ಬಹು ಸುಲಬ. ಆದರೆ, ಇವುಗಳ ಆಚೆಗೆ ಪ್ರಾದೇಶಿಕ ಒಳನುಡಿಗಳು ಕೂಡ ಅಶ್ಟೆ ಪ್ರಮಾಣದ ಇಲ್ಲವೆ ಕೆಲ ಸಂರ‍್ಬಗಳಲ್ಲಿ ಅದಕ್ಕಿಂತ ಹೆಚ್ಚಿನ ಪ್ರಮಾಣದ ಬಿನ್ನತೆಗಳನ್ನು ತೋರಿಸುತ್ತಿರುತ್ತವೆ. ಉದಾಹರಣೆಗೆ ಕಲಬರ‍್ಗಿ ಕನ್ನಡ ಮತ್ತು ಮಸ್ಕಿ ಕನ್ನಡ ಸಮೀಪದ ಬೂಗೋಳಿಕ ಪರಿಸರದಲ್ಲಿ ಬಳಕೆಯಲ್ಲಿರುವ ಕನ್ನಡದ ಎರಡು ಒಳನುಡಿಗಳು ಆದರೆ ಪರಿಗಣಿಸುವಶ್ಟು ವ್ಯತ್ಯಾಸಗಳನ್ನು ಬಾಶೆಯ ಎಲ್ಲ ಹಂತಗಳಲ್ಲಿ ತೋರಿಸುತ್ತವೆ. ಹಾಗೆಯೆ ಈ ಸಮಸ್ಯೆಯನ್ನು ಪ್ರಾದೇಶಿಕವಾಗಿ ತುಸು ದೂರದಲ್ಲಿ ಇರುವ ಕಲಬುರಗಿ ಕನ್ನಡ-ಕಾರವಾರ ಕನ್ನಡಗಳ ನಡುವೆಯೂ ನೋಡಬಹುದು. ಇನ್ನೂ ದೂರದಲ್ಲಿ ಇರುವ ಕಲಬುರಗಿ ಕನ್ನಡ-ಚಾಮರಾಜನಗರ ಕನ್ನಡ ಇವುಗಳ ನಡುವೆಯೂ ಕಾಣಬಹುದು. ಈ ಬಿನ್ನತೆಗಳ ಪ್ರಮಾಣವೂ ವ್ಯಾಪಕವಾಗಿ ಕಂಡುಬರುತ್ತದೆ.

ಇಂತಾ ಸಂದರ‍್ಬದಲ್ಲಿ ಕನ್ನಡದಲ್ಲಿ ಶಿಕ್ಶಣ ಕೊಡಲಾಗುತ್ತಿದೆ ಎಂಬುದು ತಾಯ್ಮಾತಿನಲ್ಲಿ ಶಿಕ್ಶಣ ಎಂಬ ವಾಸ್ತವಕ್ಕಿಂತ ಸುಳ್ಳಾಗುತ್ತದೆ. ಇದು ಇನ್ನೂ ಗಂಬೀರವಾದ ಸಮಸ್ಯೆ. ಬುಡಕಟ್ಟುಗಳ ಇಲ್ಲವೆ ಸಣ್ಣ ಸಣ್ಣ ಬಾಶೆಗಳ ವಿಶಯದಲ್ಲಿ ಶಿಕ್ಶಣವನ್ನು ಇನ್ನೂ ಕೊಡಲಾಗುತ್ತಿಲ್ಲ ಮತ್ತು ಈಗಾಗಲೆ ಈ ಬಿನ್ನತೆಗಳನ್ನು ಗುರುತಿಸಲಾಗಿದೆ. ಆದರೆ, ಕನ್ನಡದಂತಾ ಪ್ರದಾನ ಬಾಶೆಗಳ ವಿಶಯದಲ್ಲಿ ಈಗಾಗಲೆ ಶಿಕ್ಶಣವನ್ನು ಕೊಡಲಾಗುತ್ತಿದೆ ಮತ್ತು ಈ ಗುಂಪುಗಳನ್ನು ಈಗ ಗುರುತಿಸಲಾಗುತ್ತಿದೆ.

ಅಲ್ಲದೆ ಈ ಬಿನ್ನತೆಗಳ ನಡುವೆಯೂ ರಾಜಕೀಯ ಮೊದಲಾದ ಕಾರಣಗಳಿಂದ ಅವು ಒಂದಾಗಿ ಇರಬೇಕೆಂಬ ಆಪೇಕ್ಶೆಯೂ ಸಮಾಜದಲ್ಲಿದೆ. ಇಂತಾ ಸಂರ‍್ಬದಲ್ಲಿ ಸಮಸ್ಯೆ ದೊಡ್ಡದಾಗುತ್ತದೆ. ವಾಸ್ತವದಲ್ಲಿ ಹಲವು ಬಿನ್ನ ಒಳಗುಂಪುಗಳನ್ನು ಹೊಂದಿರುವ ಸಣ್ಣ ಸಣ್ಣ ಇಲ್ಲವೆ ಬುಡಕಟ್ಟು ಬಾಶೆಗಳ ವಿಚಾರದಲ್ಲಿ ಕಂಡುಬರುವ ಸಮಸ್ಯೆಗಿಂತ ಕನ್ನಡದಂತಾ ಪ್ರದಾನ ಬಾಶೆಗಳ ವಿಚಾರದಲ್ಲಿ ಕಂಡುಬರುವ ಸಮಸ್ಯೆ ಬಿನ್ನವಾಗೇನೂ ಇಲ್ಲ. ಕನ್ನಡದ ಸಂದರ‍್ಬವನ್ನು ಇಟ್ಟುಕೊಂಡು ಮಾತನಾಡುವುದಾದರೆ, ಬಿನ್ನ ಒಳನುಡಿಯ ಮಕ್ಕಳು ಶಿಶ್ಟಕನ್ನಡವನ್ನು ಕಲಿಯಲು, ಶಿಶ್ಟಕನ್ನಡದ ಮೂಲಕ ಶಿಕ್ಶಣವನ್ನು ಪಡೆಯಲು ತೊಂದರೆ ಅನುಬವಿಸುತ್ತಾರೆ. ತಮ್ಮದಲ್ಲದ ಬಾಶೆಯಲ್ಲಿ ಶಿಕ್ಶಣ ಪಡೆಯುವ ಮಕ್ಕಳಂತೆಯೆ ಇವರು ಕೂಡ ಸಮಸ್ಯೆಗಳನ್ನು ಎದುರಿಸುತ್ತಾರೆ. ಅದಕ್ಕಾಗಿಯೆ ಕನ್ನಡ ಮಾದ್ಯಮದಲ್ಲಿ ಓದುವ ಮಕ್ಕಳೂ ಶಾಲೆ ಬಿಟ್ಟು ಹೊರಗುಳಿಯುವ ಸ್ತಿತಿ ಇದೆ. ಹಾಗಾದರೆ ಇಡಿಯ ಬಾರತದ ಬಾಶಿಕ ಸ್ತಿತಿ ತಾಯ್ಮಾತಿನ ಶಿಕ್ಶಣಕ್ಕೆ ಬಹುದೊಡ್ಡ ಸವಾಲು.

ಈ ಅಂಕಣದ ಹಿಂದಿನ ಬರಹಗಳು:
ತಾಯ್ಮಾತಿನ ಶಿಕ್ಶಣ: ಕೆಲವು ಸವಾಲುಗಳು
ತಾಯ್ಮಾತಿನ ಶಿಕ್ಶಣ-ಕೆಲವು ಮಾದರಿಗಳು
ಪೆರಮಾತಿನ ಶಿಕ್ಶಣ: ಕೆಲ ಸಮಸ್ಯೆಗಳು-ಬದುಕಿನಲ್ಲಿ ಸೋಲು
ಪೆರಮಾತಿನ ಶಿಕ್ಶಣ: ಕೆಲ ಸಮಸ್ಯೆಗಳು-ಶಿಕ್ಶಣದಲ್ಲಿ ಸೋಲು
ಪೆರಮಾತಿನ ಶಿಕ್ಶಣ: ಕೆಲ ಸಮಸ್ಯೆಗಳು-ವಿಶಯದಲ್ಲಿ ಸೋಲು
ಆರ‍್ತಿಕ ಅಬಿರುದ್ದಿ ಮತ್ತು ತಾಯ್ಮಾತಿನ ಶಿಕ್ಶಣ (ಮುಂದುವರೆದುದು)
ಆರ‍್ತಿಕ ಅಬಿರುದ್ದಿ ಮತ್ತು ತಾಯ್ಮಾತಿನ ಶಿಕ್ಶಣ
ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ
ಬಹುತ್ವ, ಬಹುಬಾಶಿಕತೆ ಮತ್ತು ತಾಯ್ಮಾತಿನ ಶಿಕ್ಶಣ

ಸಮಾನತೆಯ ವಿಚಾರ ಮತ್ತು ತಾಯ್ಮಾತಿನ ಶಿಕ್ಶಣ
ತಾಯ್ಮಾತಿನ ಶಿಕ್ಶಣ ಯಾಕೆ?
ತಾಯ್ಮಾತಿನ ಶಿಕ್ಶಣ: ಎಲ್ಲಿತನಕ
ಮಗುವಿನ ಮನೋವಿಕಾಸ, ಸಾಮಾಜಿಕತೆ ಮತ್ತು ಕಲಿಕೆ
ಮಗು ಮತ್ತು ಬಾಶಾಗಳಿಕೆ
ತಾಯ್ಮಾತು-ತಾಯಿ ಮಾತು-ಗುರ‍್ತಿಕೆ
ಮನುಶ್ಯ ದೇಹರಚನೆ ಮತ್ತು ಬಾಶಾ ಗಳಿಕೆ
ಬಾಶೆ ಮತ್ತು ಮಾತು
ಲಂಬಾಣಿ ಮತ್ತು ಇತರ ಉತ್ತರ ಬಾರತದ ಬಾಶೆಗಳ ಸಹಸಂಬಂದ
ಮಲಯಾಳಂ, ಕೊಡವ ಮತ್ತು ಇತರ ದ್ರಾವಿಡ ಬಾಶೆಗಳೊಂದಿಗನ ಸಹಸಂಬಂದ
ಮರಾಟಿ, ಉರ‍್ದು ಮತ್ತು ಇತರ ದಕ್ಶಿಣದ ಬಾಶೆಗಳೊಡನೆಯ ಸಹಸಂಬಂದ
ಕನ್ನಡ ಮತ್ತು ತಮಿಳು ಸಹಸಂಬಂದ
ತುಳುವಿನೊಡನೆ ಸಹಸಂಬಂದ
ಕನ್ನಡ ಮತ್ತು ತೆಲುಗು ಸಹಸಂಬಂದ
ಬಾರತೀಯ ಇಂಗ್ಲೀಶು
ಇಂಗ್ಲೀಶು ಕನ್ನಡ ಬದುಕಿನೊಳಗೆ
ಇಂಗ್ಲೀಶೆಂಬ ಜಗತ್ತು ಕನ್ನಡ ಜಗತ್ತಿನೊಳಗೆ
ಪರ‍್ಶಿಯನ್ ನಡೆ-ಉರ‍್ದು ಬೆಳವಣಿಗೆ
ಅರಾಬಿಕ್-ಪರ‍್ಶಿಯನ್ ಕನ್ನಡ ಜಗತ್ತಿನೊಳಗೆ
ಸಕ್ಕದದ ಉಬ್ಬರವಿಳಿತ
ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ
ಕನ್ನಡಮುಂ ಸಕ್ಕದಮುಂ
ಕನ್ನಡಮುಂ ಪಾಗದಮುಂ
ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?
ಬೇರೆ ಬಾಶೆಗಳ ನಂಟಿಲ್ಲದೆ ಬದುಕಬಹುದೆ?
ಎರಡು ಬಾಶೆಗಳ ನಡುವೆ ನಂಟು ಹೇಗೆ ಸಾಮಾಜಿಕ ಚಲನೆಯನ್ನು ಪಡೆದುಕೊಳ್ಳುತ್ತದೆ?
ವಿಶ್ವ ತಾಯ್ಮಾತಿನ ದಿವಸ
ಬಾಶೆಗಳ ನಡುವಿನ ನಂಟನ್ನು ಪರಿಬಾವಿಸುವುದು
ಕಲ್ಲು ಕಲ್ಲು ಹೇಗಾಯಿತು, ಯಾಕಾಯಿತು, ಇನ್ನೇನಾಯಿತು?
ಪ್ರತಿ ಪದಕೂ ಒಂದು ಚರಿತೆ ಇದೆ, ಮನುಶ್ಯರಿಗೆ ಮಾತ್ರವಲ್ಲ
ಹೊಲದಲ್ಲಿ ಕನ್ನಡ ಮತ್ತು ಇತಿಹಾಸದ ಅರಿವು
ಅಡುಗೆಮನೆಯ ಬಾಶಿಕ ಜಗತ್ತು ಇಲ್ಲವೆ ಅಡುಗೆಮನೆ ಕನ್ನಡ
ಮನೆಯೊಳಗೆ ಬಾಶಿಕ ಅನುಸಂದಾನ
ಪದಕೋಶದ ಬದುಕು
ಕನ್ನಡ ಪದಕೋಶ ಎಶ್ಟು ದೊಡ್ಡದು?
ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?
ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ವಿವಿದ ಬಗೆಯ ವಾಕ್ಯಗಳು
ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ
ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಬಹು-ವಚನ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಲಿಂಗವೆಂದರೆ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಸಾಮಾಜಿಕ ಬೆಳವಣಿಗೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದ ರಚನೆಯ ಗಟಕಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ಕನ್ನಡದಾಗ ಗ್ ಜ್ ಡ್ ದ್ ಬ್ ದ್ವನಿಗಳು - ಇತ್ತೀಚಿನ ಬೆಳವಣಿಗೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಅಪರೂಪದ ವರ‍್ತ್ಸ-ತಾಲವ್ಯ ದ್ವನಿಗಳು : ‘ಚ್’ ಮತ್ತು ‘ಜ್’
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಬಾಶೆಯ ಬೆಳವಣಿಗೆ-ಬದಲಾವಣೆ
ಮೂಲಕನ್ನಡ
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಕನ್ನಡದಾಗ ದ್ವನಿವಿಗ್ನಾನ
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು

 

MORE NEWS

ತಾಯ್ಮಾತಿನ ಶಿಕ್ಶಣ-ಸಾದ್ಯತೆಗಳು

16-03-2025 ಬೆಂಗಳೂರು

"ಬಾರತದ ಜನಗಣತಿ ಮಾಹಿತಿ ಪ್ರಕಾರ ಅನುಸೂಚಿತ ಬಾಶೆಗಳನ್ನು ಆಡುವವರ ಸಂಕೆ ಸುಮಾರು 1,17,11,03,853 ಮಂದಿ ಅಂದರೆ ಬಾ...

ಹಂಗಿನರಮನೆಯ ಹೊರಗೆ ಕಥೆಯಲ್ಲಿ ಪ್ರೇಮ ವೈಫಲ್ಯದ ವೈರುಧ್ಯದ ಮುಖಗಳು

13-03-2025 ಬೆಂಗಳೂರು

"ಪ್ರಶಸ್ತಿ ಪುರಸ್ಕಾರಗಳಿಂದ ದೂರವಿದ್ದ ಇವರು ಸರಳ ಸಜ್ಜನಿಕೆಯ ವ್ಯಕ್ತಿತ್ವ ಇವರ ಹಂಗಿನರಮನೆಯ ಹೊರಗೆ ಕಥೆಯು &ldqu...

ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯಿತ್ತಿರುವ ರಂಗಮೌಲ್ಯಗಳು

09-03-2025 ಬೆಂಗಳೂರು

"ರಂಗಭೂಮಿ ಎಂದರೆ ಕೇವಲ ನಾಟಕಗಳ ಪ್ರದರ್ಶನ ಮಾತ್ರವಲ್ಲ. ಅದೊಂದು ಬಹುತ್ವ ಆಯಾಮಗಳ ಜೀವನ ಪ್ರೀತಿ ಹುಟ್ಟಿಸುವ ಜನಸಂಸ...