ತಾಯ್ಮಾತು-ತಾಯಿ ಮಾತು-ಗುರ‍್ತಿಕೆ  

Date: 28-09-2024

Location: ಬೆಂಗಳೂರು


"ತಾಯ್ಮಾತು ಎಂಬುದು ಸಹಜವಾಗಿಯೆ ತಾಯಿ ಪದವನ್ನು ಒಳಗೊಂಡಿರುವುದರಿAದ ತಾಯಿಯೊಂದಿಗೆ ನಂಟನ್ನು ತೋರಿಸುತ್ತದೆ. ಈ ಪದದ ಇತಿಹಾಸಿಕ ಬೆಳವಣಿಗೆ ಇಲ್ಲಿ ಪ್ರಸ್ತುತವಲ್ಲ. ಇಂಗ್ಲೀಶಿನ ‘ಮದರ್ ಟಂಗ್’ ಎಂಬ ಪದವನ್ನು ಕನ್ನಡದಲ್ಲಿ ಸಾಮಾನ್ಯವಾಗಿ ‘ಮಾತ್ರುಬಾಶೆ’ ಎಂದು ಕರೆಯಲಾಗುತ್ತದೆ," ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ತಾಯ್ಮಾತು-ತಾಯಿ ಮಾತು-ಗುರ‍್ತಿಕೆ’ ಕುರಿತು ಬರೆದಿರುವ ಲೇಖನ.

ಇಲ್ಲಿ ತಾಯ್ಮಾತು ಎಂಬ ಪರಿಕಲ್ಪನೆಯನ್ನು ತುಸು ಚರ‍್ಚೆಗೆ ತೆಗೆದುಕೊಳ್ಳಬಹುದು. ತಾಯ್ಮಾತು ಎಂಬುದು ಸಹಜವಾಗಿಯೆ ತಾಯಿ ಪದವನ್ನು ಒಳಗೊಂಡಿರುವುದರಿಂದ ತಾಯಿಯೊಂದಿಗೆ ನಂಟನ್ನು ತೋರಿಸುತ್ತದೆ. ಈ ಪದದ ಇತಿಹಾಸಿಕ ಬೆಳವಣಿಗೆ ಇಲ್ಲಿ ಪ್ರಸ್ತುತವಲ್ಲ. ಇಂಗ್ಲೀಶಿನ ‘ಮದರ್ ಟಂಗ್’ ಎಂಬ ಪದವನ್ನು ಕನ್ನಡದಲ್ಲಿ ಸಾಮಾನ್ಯವಾಗಿ ‘ಮಾತ್ರುಬಾಶೆ’ ಎಂದು ಕರೆಯಲಾಗುತ್ತದೆ. ಬಾಶೆ ಎಂಬುದು ಸಾಮಾನ್ಯವಾಗಿ ಒಂದು ಸಂವಹನ ವ್ಯವಸ್ತೆಗೆ ಬಳಸಬಹುದಾದ ಪದ. ಬಾಶೆಯಲ್ಲಿ ಅನಂತ ರಚನೆಯ ಮತ್ತು ಅನಂತ ಅಬಿವ್ಯಕ್ತಿಯ ಸಾದ್ಯತೆ ಇರುತ್ತದೆ.

ಮಗುವಿನ ಎಳವೆಯಲ್ಲಿ ತಾಯಿ ಮಗುವಿನ ಇಡಿಯ ಜಗತ್ತು ಆಗಿರುತ್ತಾಳೆ. ಮಗು ಬಾಶೆ ಮೊದಲಾದವನ್ನು ಪಡೆದುಕೊಳ್ಳುವುದಕ್ಕಿಂತ ಮೊದಲು ಪಡೆದುಕೊಳ್ಳುವ ಸ್ಪರ್‍ಯ, ಅನುಬವ ಒಟ್ಟಾರೆ ಈ ಜಗತ್ತಿನ ಅನುಬವ ಮಗುವಿಗೆ ಒದಗುವುದೆ ತಾಯಿಯಿಂದ. ಹಾಗಾಗಿ ಮಗುವಿನ ಬಾಶೆಯನ್ನು ತಾಯ್ಮಾತು ಎಂದು ಕರೆಯುವುದು ಸೂಕ್ತ ಎಂದು ಬಗೆಯಬಹುದು. ಮಗುವಿನ ಬಾಶಾ ಜಗತ್ತು ಬೆಳೆಯುವಲ್ಲಿ, ವಿಸ್ತರಿಸುವಲ್ಲಿ ತಾಯಿ ಮಾತ್ರ ಹೀಗೆ ಈ ಪಾತ್ರ ವಹಿಸುತ್ತಾಳೆ ಎಂದು ಬಗೆಯಬೇಕಿಲ್ಲ. ತಾಯಿಯ ಜೊತೆಗೆ, ತಂದೆ, ಮನೆಯ ಇತರರೆಲ್ಲರು, ಹಾಗೆಯೆ ಮಗುವಿನ ವಯಸ್ಸಿನ ಇತರ ಮನೆಯ ಮತ್ತು ಸುತ್ತಲಿನ ಮಕ್ಕಳು ಮೊದಲಾದವರೂ ಹೆಚ್ಚು ಕೊಡುಗೆ ಕೊಡುತ್ತಾರೆ. ಮಗುವಿಗೆ ಎಳವೆಯಲ್ಲಿ ಕಡಿಮೆ ಪ್ರಮಾಣದ ಬಾಶೆಯನ್ನು ಕೊಡಲಾಗುತ್ತದೆ. ಕೆಲವೆ ಕೆಲವು ಪದಗಳು, ಕಡಿಮೆ ವ್ಯಾಕರಣ ರಚನೆಗಳು ಇರುತ್ತವೆ. ಮಗುವಿನ ಕ್ರಮೇಣ ಬೆಳವಣಿಗೆಯ ಜೊತೆಜೊತೆಗೆ ಬಾಶೆಯ ಪ್ರಮಾಣ, ರಚನೆ ಇವೆಲ್ಲ ಬೆಳೆಯುತ್ತಾ ಹೋಗುತ್ತವೆ. ಹೀಗೆ ಮಗುವಿನ ಎಳವೆಯಲ್ಲಿ ತಾಯಿ ಮತ್ತು ಇತರರು ಮಗುವಿಗೆ ಬಳಸುವ ಬಾಶೆಯನ್ನು ‘ತಾಯೀಯ’ (Motheries) ಎಂದು ಕರೆಯುತ್ತಾರೆ.

ತಾಯ್ಮಾತು ಎಂದರೆ ಮಗುವಿನ ಮೊದಲ ಮಾತು, ಮಗು ಮೊದಲಿಗೆ ಕಲಿಯುವ ಮಾತು, ಮಗು ಯೋಚಿಸುವ, ಕನಸುವ ಮತ್ತು ಎಣಿಸುವ ಮಾತು. ಸಮುದಾಯದ, ಸಮುದಾಯದ ಸಂಸ್ಕೃತಿಯ ನಂಟಸ್ತಿಕೆ ಕೊಡುವ ಮಾತು. ಕೆಲವೆಡೆ ಸಮುದಾಯದ ಸದಸ್ಯತ್ವವನ್ನು ಗುರುತಿಸುವುದಕ್ಕೂ ಆ ಸಮುದಾಯದ ಮಾತನ್ನು ಎಲ್ಲ ಸದಸ್ಯರ ತಾಯ್ಮಾತು ಎಂದು ಹೇಳಲಾಗುತ್ತದೆ. ಕೆಲವೆಡೆ ಆ ಸಮುದಾಯದ ಸದಸ್ಯತ್ವವನ್ನು ಹೊಂದುವುದಕ್ಕಾಗಿ ಆ ಮಾತನ್ನು ಕಲಿಯದೆ ಇದ್ದರೂ ಅದನ್ನು ತಮ್ಮ ತಾಯ್ಮಾತು ಎಂದು ಹೇಳಿಕೊಳ್ಳುತ್ತಾರೆ. ಯುನೆಸ್ಕೊ (2013) ತಾಯ್ಮಾತನ್ನು ಹೀಗೆ ವ್ಯಾಕ್ಯಾನಿಸುತ್ತದೆ; ವ್ಯಕ್ತಿಯೊಬ್ಬ ಜೀವನದಲ್ಲಿ ಮೊದಮೊದಲಿಗೆ ಬಳಸುವ, ಆನಂತರದಲ್ಲಿ ದಿನಜೀವನದ ವ್ಯವಹಾರಕ್ಕೆ ಹೆಚ್ಚಾಗಿ ಬಳಸುವ, ಹೆಚ್ಚು ಪಳಗಿರುವ, ಆ ನಿರ‍್ದಿಶ್ಟ ಸಮುದಾಯದ ಗುರ‍್ತಿಕೆಯನ್ನು (Identity) ಕೊಡುವ ಇನ್ನೂ ಮುಂದುವರೆದು ವ್ಯಕ್ತಿಯೊಬ್ಬರ ಸಹಜ ಗರ‍್ತಿಕೆಯನ್ನು ಕೊಡುವ ಬಾಶೆ ತಾಯ್ಮಾತು.

ಮಗು ಈ ಜಗತ್ತನ್ನು ಅರಿತುಕೊಳ್ಳುವುದಕ್ಕೆ ಶುರು ಮಾಡಿದಾಗ ಈ ಅರಿವಿನ ಪ್ರಕ್ರಿಯೆಗೆ ಪೂರಕವಾಗಿ ಇರುವಂತದ್ದು ತಾಯ್ಮಾತು. ತಾಯಿ-ತಂದೆಯರನ್ನು, ಮನೆಯವರನ್ನು, ಸಂಬಂದ, ಪ್ರೀತಿ, ನಂಬಿಕೆ ಈ ಮೊದಲಾದ ಎಲ್ಲವನ್ನೂ ಮಗು ತನ್ನ ಎಳವೆಯಲ್ಲಿ ಕಲಿಯುತ್ತದೆ. ಈ ಎಲ್ಲವನ್ನೂ ಮಗು ತನ್ನ ತಾಯ್ಮಾತಿನಲ್ಲಿಯೆ ಕಲಿಯುತ್ತದೆ. ಮಗು ಈ ಜಗತ್ತನ್ನು ಮನೆಯ ಪರಿಸರದ ಮೂಲಕ, ಮನೆ ಮತ್ತು ಮಗುವಿನ ಪರಿಸರದಲ್ಲಿ ಸಹಜವಾಗಿ ಬಳಕೆಯಾಗುವ ಮಾತಿನಲ್ಲಿ ಕಲಿಯುತ್ತದೆ. ಆದ್ದರಿಂದಲೆ ಬಾಶಾವಿಗ್ನಾನಿಗಳು ಬಾಶೆಯ ರಚನೆ ಮಗುವಿನ ಮನೋರಚನೆಯನ್ನು ಕಟ್ಟುತ್ತದೆ ಇಲ್ಲವೆ ಪ್ರಬಾವಿಸುತ್ತದೆ ಎಂದು ಹೇಳುವುದು. ಒಂದು ಬಾಶೆಯಲ್ಲಿ ಮೂರು ಲಿಂಗಗಳು ಇದ್ದರೆ ಮಗು ಈ ಜಗತ್ತಿನಲ್ಲಿ ಮೂರು ಲಿಂಗಗಳನ್ನು ಅರ‍್ತ ಮಾಡಿಕೊಳ್ಳುತ್ತದೆ. ಎರಡು ಲಿಂಗಗಳು ಇರುವ ಮಾತಿನ ರಚನೆಯನ್ನು ಸಹಜವಾಗಿಯೆ ಮಗು ಪರಿಬಾವಿಸಿಕೊಳ್ಳಲಾರದು. ಹೀಗೆ ಮಗು ಆಲೋಚಿಸುವುದು, ಚಿಂತಿಸುವುದು, ಪರಿಬಾವಿಸಿಕೊಳ್ಳುವುದು ಎಲ್ಲವೂ ಮಗುವಿನ ತಾಯ್ಮಾತಿನಲ್ಲಿ. ಅಂದರೆ ಈ ಜಗತ್ತಿನ ಪ್ರತಿಯೊಂದನ್ನು ಮಗು ತನ್ನ ತಾಯ್ಮಾತಿನಲ್ಲಿ ಅರಿವಾಗಿಸಿಕೊಳ್ಳುತ್ತದೆ.

ಮಗು ತನ್ನ ಎಳವೆಯಲ್ಲಿ ಈ ಜಗತ್ತನ್ನು ಯಾವ ಮಾತಿನಲ್ಲಿ ಪರಿಬಾವಿಸಿಕೊಳ್ಳುತ್ತದೆಯೊ ಅದು ಆ ಮಗುವಿನ ತಾಯ್ಮಾತು. ಮಗು ಈ ಜಗತ್ತಿಗೆ ಬಂದ ಮೇಲೆ ಬಣ್ಣ, ಶಬ್ದ, ಅಳತೆ, ದೂರ ಮೊದಲಾದವನ್ನು ತಾನು ಇರುವ ಪರಿಸರದಲ್ಲಿ ಮತ್ತು ತನ್ನ ಪರಿಸರದೊಂದಿಗೆ ಗ್ರಹಿಸಿಕೊಳ್ಳುತ್ತದೆ. ಅದರೊಂದಿಗೆ ಮನುಶ್ಯರನ್ನು, ಮನುಶ್ಯ ಸಂಬಂದಗಳನ್ನು ಮತ್ತು ನಮಸ್ಕರಿಸುವುದನ್ನು ಒಳಗೊಂಡು ಇಡಿಯಾಗಿ ಸಂಸ್ಕೃತಿಯನ್ನು ಪಡೆದುಕೊಳ್ಳುತ್ತದೆ. ಈ ಎಲ್ಲವನ್ನೂ ಮಗು ತನ್ನ ತಾಯ್ಮಾತಿನಲ್ಲಿ ಪಡೆದುಕೊಳ್ಳುತ್ತದೆ. ಇದಕ್ಕೆ ಮಗುವಿನ ಮೊದಲ ಮಾತು ಎಂದು ಕರೆಯಬಹುದು. ಇದುವೆ ಆ ಮಗುವಿನ ಜಗತ್ತು. ಈ ಜಗತ್ತು ಕ್ರಮೇಣ ಮಗುವಿನ ಬೆಳವಣಿಗೆಯ ಜೊತೆಗೆ ವಿಸ್ತರಿಸಿಕೊಳ್ಳುತ್ತದೆ. ಮಗು ತನ್ನ ಎಳವೆಯಲ್ಲಿ ಪಡೆದುಕೊಂಡ ಗ್ರಹಿಕೆಯ ಹರಹು ಮತ್ತು ಕಸುವಿನ ನೇರದಲ್ಲಿ ಅದು ವಿಸ್ತರಿಸಿಕೊಳ್ಳುತ್ತದೆ.

ಈ ಅಂಕಣದ ಹಿಂದಿನ ಅಂಕಣಗಳು
ಮನುಶ್ಯ ದೇಹರಚನೆ ಮತ್ತು ಬಾಶಾ ಗಳಿಕೆ
ಬಾಶೆ ಮತ್ತು ಮಾತು
ಲಂಬಾಣಿ ಮತ್ತು ಇತರ ಉತ್ತರ ಬಾರತದ ಬಾಶೆಗಳ ಸಹಸಂಬಂದ
ಮಲಯಾಳಂ, ಕೊಡವ ಮತ್ತು ಇತರ ದ್ರಾವಿಡ ಬಾಶೆಗಳೊಂದಿಗನ ಸಹಸಂಬಂದ
ಮರಾಟಿ, ಉರ‍್ದು ಮತ್ತು ಇತರ ದಕ್ಶಿಣದ ಬಾಶೆಗಳೊಡನೆಯ ಸಹಸಂಬಂದ
ಕನ್ನಡ ಮತ್ತು ತಮಿಳು ಸಹಸಂಬಂದ
ತುಳುವಿನೊಡನೆ ಸಹಸಂಬಂದ
ಕನ್ನಡ ಮತ್ತು ತೆಲುಗು ಸಹಸಂಬಂದ
ಬಾರತೀಯ ಇಂಗ್ಲೀಶು
ಇಂಗ್ಲೀಶು ಕನ್ನಡ ಬದುಕಿನೊಳಗೆ
ಇಂಗ್ಲೀಶೆಂಬ ಜಗತ್ತು ಕನ್ನಡ ಜಗತ್ತಿನೊಳಗೆ
ಪರ‍್ಶಿಯನ್ ನಡೆ-ಉರ‍್ದು ಬೆಳವಣಿಗೆ
ಅರಾಬಿಕ್-ಪರ‍್ಶಿಯನ್ ಕನ್ನಡ ಜಗತ್ತಿನೊಳಗೆ
ಸಕ್ಕದದ ಉಬ್ಬರವಿಳಿತ
ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ
ಕನ್ನಡಮುಂ ಸಕ್ಕದಮುಂ
ಕನ್ನಡಮುಂ ಪಾಗದಮುಂ
ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?
ಬೇರೆ ಬಾಶೆಗಳ ನಂಟಿಲ್ಲದೆ ಬದುಕಬಹುದೆ?
ಎರಡು ಬಾಶೆಗಳ ನಡುವೆ ನಂಟು ಹೇಗೆ ಸಾಮಾಜಿಕ ಚಲನೆಯನ್ನು ಪಡೆದುಕೊಳ್ಳುತ್ತದೆ?
ವಿಶ್ವ ತಾಯ್ಮಾತಿನ ದಿವಸ
ಬಾಶೆಗಳ ನಡುವಿನ ನಂಟನ್ನು ಪರಿಬಾವಿಸುವುದು
ಕಲ್ಲು ಕಲ್ಲು ಹೇಗಾಯಿತು, ಯಾಕಾಯಿತು, ಇನ್ನೇನಾಯಿತು?
ಪ್ರತಿ ಪದಕೂ ಒಂದು ಚರಿತೆ ಇದೆ, ಮನುಶ್ಯರಿಗೆ ಮಾತ್ರವಲ್ಲ
ಹೊಲದಲ್ಲಿ ಕನ್ನಡ ಮತ್ತು ಇತಿಹಾಸದ ಅರಿವು
ಅಡುಗೆಮನೆಯ ಬಾಶಿಕ ಜಗತ್ತು ಇಲ್ಲವೆ ಅಡುಗೆಮನೆ ಕನ್ನಡ
ಮನೆಯೊಳಗೆ ಬಾಶಿಕ ಅನುಸಂದಾನ
ಪದಕೋಶದ ಬದುಕು
ಕನ್ನಡ ಪದಕೋಶ ಎಶ್ಟು ದೊಡ್ಡದು?
ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?
ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ವಿವಿದ ಬಗೆಯ ವಾಕ್ಯಗಳು
ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ
ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಬಹು-ವಚನ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಲಿಂಗವೆಂದರೆ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಸಾಮಾಜಿಕ ಬೆಳವಣಿಗೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದ ರಚನೆಯ ಗಟಕಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ಕನ್ನಡದಾಗ ಗ್ ಜ್ ಡ್ ದ್ ಬ್ ದ್ವನಿಗಳು - ಇತ್ತೀಚಿನ ಬೆಳವಣಿಗೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಅಪರೂಪದ ವರ‍್ತ್ಸ-ತಾಲವ್ಯ ದ್ವನಿಗಳು : ‘ಚ್’ ಮತ್ತು ‘ಜ್’
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಬಾಶೆಯ ಬೆಳವಣಿಗೆ-ಬದಲಾವಣೆ
ಮೂಲಕನ್ನಡ
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಕನ್ನಡದಾಗ ದ್ವನಿವಿಗ್ನಾನ
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು

 

MORE NEWS

ಸೆರೆಯೊಳಗೆ ಪ್ರಕೃತಿ ಧರ್ಮದ ಭವ್ಯತೆ

02-10-2024 ಬೆಂಗಳೂರು

"ಯಶವಂತ ಚಿತ್ತಾಲರ ಸೆರೆ ಕಥೆಯನ್ನು ಒಂದು ದೃಷ್ಟಾಂತವಾಗಿ ನೋಡಬಹುದಾದದ್ದು. ತಂದೆಯ ಶ್ರಾದ್ಧದ ದಿನದಂದೇ ಮಗನ ಮದುವೆ...

ಧರ್ಮಸಿಂಗ್ : ಮರೆಯಲಾಗದ ಕೆಲವು ನೆನಪುಗಳು

26-09-2024 ಬೆಂಗಳೂರು

"ಎನ್. ಧರ್ಮಸಿಂಗ್ ಅವರನ್ನು ಮೊಟ್ಟ ಮೊದಲ ಬಾರಿ ನಾನು ಅತ್ಯಂತ ಹತ್ತಿರದಿಂದ ನೋಡಿದ್ದು 1972ರಲ್ಲಿ. ಆಗ ನಾನು ಹೈಸ್...

ಕನ್ನಡ ವಿಮರ್ಶೆ -1

23-09-2024 ಬೆಂಗಳೂರು

"ಪಾಶ್ಚಾತ್ಯ ಸಾಹಿತ್ಯ ಮತ್ತು ವಿಮರ್ಶೆ, ಸಂಸ್ಕೃತ ಸಾಹಿತ್ಯ ಮತ್ತು ಮೀಮಾಂಸೆ, ಕನ್ನಡ ಸಾಹಿತ್ಯ ಪರಂಪರೆ ಮತ್ತು ಹೊಸ...