ಟೊಟೊ ಪುರಸ್ಕಾರ: ಅಂತಿಮ ಹಂತಕ್ಕೆ 9 ಬರಹಗಾರರು

Date: 06-12-2022

Location: ಬೆಂಗಳೂರು


ಸೃಜನಶೀಲ ಯುವ ಬರಹಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸ್ಥಾಪಿತವಾದ ಟೊಟೊ ಪುರಸ್ಕಾರವು ಹದಿನೆಂಟು ವರ್ಷಗಳಿಂದ ಯುವ ಪ್ರತಿಭೆಗಳಿಗೆ ಪ್ರೊತ್ಸಾಹ ನೀಡುತ್ತಾ ಬಂದಿದೆ. ಇದು ಕಳೆದ ಹನ್ನೆರಡು ವರ್ಷಗಳಿಂದ ಕನ್ನಡಕ್ಕೂ ವಿಸ್ತೃತಗೊಂಡಿದ್ದು, ಹದಿಮೂರನೆಯ ವರ್ಷಕ್ಕೆ ಕಾಲಿಡುತ್ತಿದೆ. ಈ ಪ್ರಶಸ್ತಿಯನ್ನು ಟೊಟೊ ಫಂಡ್ಸ್ ದಿ ಆರ್ಟ್ಸ್ (Toto Funds the Arts - TFA) ಸಂಸ್ಥೆಯು ಸ್ಥಾಪಿಸಿ ನಿರ್ವಹಿಸುತ್ತಿದೆ. ಕನ್ನಡದ ಸೃಜನಶೀಲ ಯುವ ಬರಹಗಾರರಿಗೆ ಮೀಸಲಾದ 2023ನೇ ಸಾಲಿನ ಟೊಟೊ ಪುರಸ್ಕಾರಕ್ಕಾಗಿ ಟೊಟೊ ಫಂಡ್ಸ್ ದಿ ಆರ್ಟ್ಸ್ ಸಂಸ್ಥೆಯು ಪ್ರವೇಶಗಳನ್ನು ಆಹ್ವಾನಿಸಿತ್ತು.

ಕನ್ನಡ 2023ನೇ ಸಾಲಿನ ಸೃಜನಾತ್ಮಕ ಬರವಣಿಗೆಗಾಗಿ TOTO ಪ್ರಶಸ್ತಿಗಾಗಿ TFA 63 ಅರ್ಜಿಗಳನ್ನು ಸ್ವೀಕರಿಸಿದೆ. ಈ ಪೈಕಿ ಒಂಬತ್ತು ಬರಹಗಾರರು ಪ್ರಶಸ್ತಿಗಾಗಿ ಅಂತಿಮ ಪಟ್ಟಿಯಲ್ಲಿದ್ದಾರೆ.

1. ಮುನವ್ವರ್ ಜೋಗಿಬೆಟ್ಟು, ಬೆಳ್ತಂಗಡಿ, ದಕ್ಷಿಣ ಕನ್ನಡ
2. ಅಜಯ್ ವರ್ಮ ಅಲ್ಲೂರಿ, ರಾಯಚೂರು
3. ದಾದಾಪೀರ್ ಜೈಮನ್, ಬೆಂಗಳೂರು
4. ಕಪಿಲ್ ಹುಮನಾಬಾದ್, ಕಲಬುರ್ಗಿ
5. ಸ್ನೇಹಜಯ ಕಾರಂತ್, ಉಡುಪಿ
6. ಸುವರ್ಣ ಚೆಲ್ಲೂರು, ಕೊಪ್ಪಳ
7. ರಟ್ಟೆಹಳ್ಳಿ ರಾಘವಾಂಕೂರ, ಹಂಪಿ
8. ಸಂಹಿತ್ ಅಂಶು, ಉಡುಪಿ
9. ಅಜಯ್ ಪಂಡಿತ್ ಜಿ, ಸಾಗರ್

ಇವರನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿದ್ದು, ಕೊನೆಯ ಹಂತದ ಆಯ್ಕೆ ನಡೆಯಬೇಕಿದೆ.

ಟೊಟೊ ಪುರಸ್ಕಾರವು 50,000 ರೂಪಾಯಿಗಳ ನಗದು ಬಹುಮಾನವನ್ನು ಒಳಗೊಂಡಿದೆ.

MORE NEWS

ಸಾಧನೆಯ ಹಾದಿಯಲ್ಲಿ ಎಲ್ಲರೂ ಏಕಾಂಗಿ - ಬಿ. ಪುರಂದರ ಭಟ್

16-04-2024 ಬೆಂಗಳೂರು

ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಸಾಹಿತ್ಯ ಬಳಗದ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಅಂಬ...

'ಮಕ್ಕಳ ಕತೆಗಳ ಅನನ್ಯ ಪ್ರೀತಿ ರಾಮೇಂದ್ರ ಕುಮಾರ' ಕುರಿತು ವಿಚಾರಣ ಸಂಕಿರಣ 

15-04-2024 ಬೆಂಗಳೂರು

ಬೆಂಗಳೂರು: ಜೀವನಾನುಭವವನ್ನು ವಿಸ್ತರಿಸುವ, ಮಕ್ಕಳ ಭವಿಷ್ಯವನ್ನು ಉಜ್ವಲವಾಗಿ ರೂಪಿಸುವ ಕೆಲಸವನ್ನು ಹಿಂದೆ‌ ಅಜ್ಜಿ...

ಏಪ್ರಿಲ್ 18ರಂದು ‘ಡಾ.ರಾಜಕುಮಾರ್ ಸಿರಿಗನ್ನಡ ಪ್ರಶಸ್ತಿ’ ಪ್ರದಾನ ಸಮಾರಂಭ

15-04-2024 ಬೆಂಗಳೂರು

ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಾ, ಧೀರ...