ಟ್ರಂಪ್‌ ಕುರಿತ ’ಕೃತಿ’ ವಿವಾದ-ಹಿಟ್ಲರ್ ಆತ್ಮಕತೆ‌ಗೆ ಬೇಡಿಕೆ


ಸಾಹಿತ್ಯ ಮತ್ತು ಪುಸ್ತಕಗಳ ಲೋಕ ಎಂದರೆ ಅಲ್ಲಿ ಕೇವಲ ಚಿಂತನೆ- ವಿಚಾರ ಮಾತ್ರ ಇರಬೇಕೆಂದೇನೂ ಅಲ್ಲ. ವಾದ-ವಿವಾದ, ಕುತೂಹಲ, ಆಸಕ್ತಿ ಕೆರಳಿಸುವ ಹತ್ತು ಹಲವು ಸಂಗತಿಗಳು ಇದ್ದೇ ಇರುತ್ತವೆ. ಸಾಹಿತ್ಯಲೋಕದ ಕೆಲವು ವಿದ್ಯಮಾನದ ಬಗ್ಗೆ ಪತ್ರಕರ್ತ ವೆಂಕಟೇಶ ಮಾನು ಅವರು ಇಲ್ಲಿ ಹಂಚಿಕೊಂಡಿದ್ದಾರೆ.

ಟ್ರಂಪ್ ಮಹಾ ಸುಳ್ಳುಗಾರ: ಪುತ್ರಿಯ ಕೃತಿ ಸೃಷ್ಟಿಸಿದ ವಿವಾದ  

ದ್ವೇಷ, ಅಹಂ, ಒಣ ಪ್ರತಿಷ್ಠೆಗಾಗಿ ಸಹೋದರರೇ ಕಾದಾಡಿದ ‘ಮಹಾಭಾರತ’ ಕಥೆ ಭಾರತೀಯರಿಗೆ ಹೊಸದಲ್ಲ.ಅಧಿಕಾರ-ಅಂತಸ್ತು ಹೊಂದಿದ ಶ್ರೀಮಂತರ ಬದುಕಿನಲ್ಲಿ ಇದೇ ನಕಾರಾತ್ಮಕ ಅಂಶಗಳು ಇಂದಿಗೂ ವಿಶ್ವದೆಲ್ಲೆಡೆ ಢಾಳಾಗಿ ಎದ್ದು ಕಾಣುತ್ತವೆ ಎಂಬುದು ವಿಶೇಷ. ಈ ಕಾರಣಕ್ಕಾಗಿಯೇ, ಮಹಾಭಾರತದ ಮಹಾಕಾವ್ಯವು ಸರ್ವ ಕಾಲಕ್ಕೂ ದೇಶ-ಕಾಲಾತೀತ. 

ಇಲ್ಲೇಕೆ ಮಹಾಭಾರತ ಎನ್ನುತ್ತೀರಾ? ವಿಶ್ವದ ದೊಡ್ಡಣ್ಣ ಖ್ಯಾತಿಯ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಹಾ ಸುಳ್ಳುಗಾರನಂತೆ. ಆಸ್ತಿ ಲೂಟಿಕೋರನಂತೆ. ವಂಚನೆಯನ್ನೇ ಬದುಕಾಗಿಸಿಕೊಂಡ ವ್ಯಕ್ತಿಯಂತೆ! ಹೀಗೆ ಆರೋಪಿಸಿದವರು ಟ್ರಂಪ್ ನ ದೊಡ್ಡಣ್ಣನ ಮಗಳು-ಮೇರಿ ಎಲ್. ಟ್ರಂಪ್. ಈಕೆ ಬರೆದ ಪುಸ್ತಕ ‘ಟೂ ಮಚ್ ಆಂಡ್ ನೆವರ್ ಇನಫ್: ಹೌ ಮೈ ಫ್ಯಾಮಿಲಿ ಕ್ರಿಯೆಟೆಡ್ ವರ್ಲ್ಡ್ ಮೋಸ್ಟ್ ಡೆಂಜರಸ್ ಮ್ಯಾನ್’ ಎಂಬ ತನ್ನ ಕೃತಿಯಲ್ಲಿ ಹೀಗೆ ಉಲ್ಲೇಖಿಸಿದ್ದು, ಜು.14 ರಂದು ಬಿಡುಗಡೆಯಾಗಲಿದೆ. 

ತಂದೆ ಫ್ರೆಡ್ ಜ್ಯೂನಿರ್ ಮದ್ಯವ್ಯಸನಿ. ಆತ ಸತ್ತಾಗ ಮೇರಿಗೆ 16 ವರ್ಷ. ಇಬ್ಬರು ಚಿಕ್ಕಪ್ಪಂದಿರು (ಡೋನಾಲ್ಡ್ ಟ್ರಂಪ್ ಹಾಗೂ ರಾಬರ್ಟ್ ಟ್ರಂಪ್) ಆಸ್ತಿ ಹಂಚಿಕೆಯಲ್ಲಿ ತಮಗೆ ಸತಾಯಿಸಿದ ರೀತಿ, ಡೋನಾಲ್ಡ್ ಟ್ರಂಪ್ ರಾಬಟ್ð ನೊಂದಿಗೆ ಹೇಗೆ ವೈರ ಸಾಧಿಸಿದರು ಎಂಬಿತ್ಯಾದಿ  ಆರೋಪ ಮಾಡಿದ್ದು, ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಪ್ರತಿಷ್ಠೆಗೆ ಕೆಸರು ಮೆತ್ತಿಕೊಳ್ಳುತ್ತಿದೆ. ಮತ್ತೊಂದು ಕಡೆ, ಯಾವುದೇ ಕಾರಣಕ್ಕೂ ಈ ಕೃತಿ ಬಿಡುಗಡೆಯಾಗದಂತೆ ಡೋನಾಲ್ಡ್ ಟ್ರಂಪ್ ಕುಟುಂಬದ ಕಸರತ್ತು ನಡೆಯುತ್ತಿದೆ. ದೊಡ್ಡವರ ಜಗಳ ಬಹು ದೀರ್ಘ-ಮಹಾಭಾರತದಂತೆ. ಜನಸಾಮಾನ್ಯರಿಗೋ-ಒಂದು ಕಥೆಯಂತೆ! ಜಗತ್ತಿನ ಬೆರಳೆಣಿಕೆಯ ಜನರು ಮಾತ್ರ ಸರ್ವಜ್ಞನಂತೆ ಈ ವಿದ್ಯಮಾನವು ‘ಹಾದರ ಕಥೆಯನ್ನು | ಸೋದರರ ವಧೆಯನ್ನು | ಆಧರಿಸಿ ಪುಣ್ಯ ಕಥೆಯೆಂದು, ಕೇಳುವವರು’ ಎಂದುಕೊಳ್ಳುವರು. 

40 ವರ್ಷದ ಹಿಂದೆ ಕೊರಾನಾ ಸಾಹಿತ್ಯಕ ಸುಳಿವು 

ಹೆಮ್ಮಾರಿ ಕೊರಾನಾದಂತಹ ವೈರಾಣು ಬಗ್ಗೆ 40 ವರ್ಷದ ಹಿಂದೆ (1981)ಸುಳಿವು ನೀಡಿರುವ ಕಾದಂಬರಿ ‘ದಿ ಐಸ್ ಆಫ್ ಡಾರ್ಕ್‌ನೆಸ್’ ಜಾಗತಿಕವಾಗಿ ಬಹು ಬೇಡಿಕೆಯ ಪುಸ್ತಕವಾಗಿ ಗಮನ ಸೆಳೆಯುತ್ತಿದೆ. ಕಥೆಯ ಕಾಲ್ಪನಿಕ ಪ್ರಯೋಗಾಲಯದಲ್ಲಿ  ‘ವುಹಾನ್ -400’ ಎಂಬ ಜೈವಿಕ -ಅಸ್ತ್ರವಾಗಿ ಮಾಋಣಾಂತಿಕ ವೈರಾಣು ಸೃಷ್ಟಿಸಿ, ಅದನ್ನು ಪರಿಸರದಲ್ಲಿ ಹಬ್ಬಿಸಿ, ಇಡೀ ಜಗತ್ತೇ ನಲುಗುವಂತಿರುವ ಚಿತ್ರಣವಿದೆ. ಕಾದಂಬರಿಕಾರನ ಕಲ್ಪನೆಯಲ್ಲಿ ಸೃಷ್ಟಿಯಾದ ಈ ಸನ್ನಿವೇಶವು 40 ವರ್ಷದ ನಂತರದ ವಾಸ್ತವತೆಯೊಂದಿಗೆ ಹೋಲುತ್ತದೆ ಮಾತ್ರವಲ್ಲ; ಹಕೀಹತ್ತೇ ಆಗುತ್ತಿದೆ. ಇದು ಹೇಗೆ ಸಾಧ್ಯವಾದೀತು ಎಂಬ ಅಚ್ಚರಿಯ ಕುತೂಹಲ  ಓದುಗರನ್ನು ಕಂಗೆಡಿಸಿದ್ದು, ಅಂತರ್ಜಾಲದಲ್ಲಿ ಈ ಕೃತಿಯ ಖರೀದಿಗೆ ಬೇಡಿಕೆ ಹೆಚ್ಚುತ್ತಿದೆಯಂತೆ.  

 

ಲಾಕ್ ಡೌನ್: ಓದುಗರ ಬೇಸರ ಕಳೆದ ಹಿಟ್ಲರ್ ಆತ್ಮಕತೆ

ಜಾಗತಿಕವಾಗಿ ಎರಡು ಮಹಾಯುದ್ಧಗಳಿಗೆ ಕಾರಣವಾದ ಅಡಾಲ್ಫ್ ಹಿಟ್ಲರ್ ನ ಅವಧಿಯಲ್ಲಿ ಸಾವಿರಾರು ಜನ ಸತ್ತರು ಎಂಬುದು ಇತಿಹಾಸ. ಕೊರೊನಾ ವೈರಾಣು ಸೃಷ್ಟಿಸಿದ ಜೈವಿಕ ಯುದ್ಧವು ಜಾಗತಿಕ ಮಹಾಯುದ್ಧಗಳಿಗಿಂತಲೂ ಭೀಕರ ಎಂಬುದು ವರ್ತಮಾನ. ಈಗಿನ ಲಾಕ್ ಡೌನ್ ಅವಧಿಯಲ್ಲಿ ಜನ ತಮ್ಮ ಬೇಸರ ಕಳೆಯಲು ಓದಿದ್ದು, ಅದೇ ಹಿಟ್ಲರ್ ನ ಅಥ್ಮಕತೆ-ಮೈ ಕೆಂಫ್. 

ಓಡಿಸ್ಸಾದ ನಾರ್ತ್-ಈಸ್ಟ್ ಸೆಂಟರ್ ಫಾರ್ ಟ್ರೇನಿಂಗ್, ಅಡ್ವೋಕಸಿ ಅಂಡ್ ರಿಸರ್ಚ್ (ಎನ್ಇಸಿ ಟಿಅಆರ್) ಸಂಸ್ಥೆಯು ನಡೆಸಿದ ಸಮೀಕ್ಷೆಯಿಂದ ಈ ಮಾಹಿತಿ ಬಹಿರಂಗಗೊಂಡಿದೆ. 

ಹಿಟ್ಲರ್ ನ ಆತ್ಮಕತೆ-ಮೈ ಕೆಂಫ್, ಟಾಲಸ್ಟಾಯಿ ಅವರ ಅನ್ನಾಕರೆನಿನಾ  ಹಾಗೂ ಯುದ್ಧ ಮತ್ತು ಶಾಂತಿ, ಕವಿ ಶೇಕ್ಸಪಿಯರ್, ಚಾರ್ಲ್ಸ್ ಡಿಕನ್ಸ್, ಶರತ್ ಚಂದ್ರ ಚಟರ್ಜಿ, ನೊಬಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯಸೇನ್ ಅವರ ಕೃತಿಗಳು ಹೀಗೆ ಪುರಾಣೇತಿಹಾಸ, ಶಾಸ್ತ್ರೀಯ, ಕಾಲ್ಪನಿಕ ಹಾಗೂ ಆಧುನಿಕ ಸಾಹಿತ್ಯ ಪ್ರಕಾರದ ಕೃತಿಗಳೆಡೆಗೆ ಕೊರೊನಾ ಸನ್ನಿವೇಶದ ಹಿನ್ನೆಲೆಯಲ್ಲಿ ಇರುವ ಓದುಗರ ಆಸಕ್ತಿಯನ್ನು ಆನ್ ಲೈನ್ ಮೂಲಕ ತಿಳಿಯುವುದು ಈ ಸಮೀಕ್ಷೆಯ ಉದ್ದೇಶವಾಗಿತ್ತು.16ರ ಹರೆಯದ ಹುಡುಗರಿಂದ 60ರ  ವೃದ್ಧರು ಸಮೀಕ್ಷೆಗೆ ಸ್ಪಂದಿಸಿ. ಲಾಕ್ ಡೌನ್ ಅವಧಿಯಲ್ಲಿ ತಾವು ಓದುತ್ತಿರುವ ಪುಸ್ತಕ ಕುರಿತು ಮಾತನಾಡಿದ್ದಾರೆ. ಆ ಪೈಕಿ ಶೇ. 55 ರಷ್ಟು ಪುರುಷರು, ಶೇ. 45ರಷ್ಟು ಮಹಿಳೆಯರು ಸೇರಿದ್ದಾರೆ. ಮೈ ಕೆಂಫ್ ಹೊರತುಪಡಿಸಿದರೆ ಅತಿ ಹೆಚ್ಚು ಜನ ಓದಿದ್ದು-ಟಾಲಸ್ಟಾಯಿ ಅವರ ಅನ್ನಾ ಕರೆನಿನಾ ಹಾಗೂ ಯುದ್ಧ ಮತ್ತು ಶಾಂತಿ ಕೃತಿಗಳು. ಓದುಗರ ಪೈಕಿ ಶೇ. 69 ಜನ ಪುಸ್ತಕಗಳನ್ನು ಶೇ.7ರಷ್ಟು ಜನ ಇ-ಪುಸ್ತಕಗಳನ್ನು ಓದಿದ್ದಾರ ಎಂಬುದು ಸಂಸ್ಥೆ ಕಂಡುಕೊಂಡ ಫಲಿತಾಂಶ. 

*

MORE FEATURES

ಸೈನ್ಸ್ ಫಿಕ್ಷನ್ ಸಿನಿಮಾ ನೋಡಿದ ಅನುಭವ ಈ ಕೃತಿ ನೀಡುತ್ತದೆ

29-03-2024 ಬೆಂಗಳೂರು

"ಕಾದಂಬರಿಯ ಒಂದಿಷ್ಟು ಭಾಗದಲ್ಲಿ ಹೇಳ ಹೊರಟಿರುವ ವಿಷಯವನ್ನು ಒಂದಿಷ್ಟು ಜಟಿಲವಾಗಿ ಹೇಳಿರುವುದು ಹಾಗೂ ಕಾದಂಬರಿಯ ಕ...

ವಚನಗಳ ಮೂಲಕ ಶರಣರ ಒಡನಾಟ ಅನುಭವಿಸಬಹುದು: ಡಿ.ಶಬ್ರಿನಾ ಮಹಮದ್ ಅಲಿ

29-03-2024 ಬೆಂಗಳೂರು

'ಬನ್ನಿರಿ ಶರಣರೇ' ಎಂಬುದು ಈ ಕವನ ಸಂಕಲನ ಮೊದಲ ಕವನವಾಗಿದ್ದು, ಈ ಕವಿತೆಯಲ್ಲಿ ಕವಿ ಸಮಾಜಕ್ಕೆ ಒಂದು ಕರೆಯನ್ನು...

ಪೂರ್ಣಿಮಾ ಮಾಳಗಿಮನಿ ಕಂಡ `ಗಿಣಿಬಾಗಿಲು' 

28-03-2024 ಬೆಂಗಳೂರು

"ಸಪ್ನ ಬುಕ್ಸ್ ಪ್ರಕಟಿಸಿದ ಹರೀಶ್ ಕೇರ ಅವರ ವಿಶಿಷ್ಟವಾದ ಶೀರ್ಷಿಕೆ ಇರುವ ಈ ಕೃತಿಯಲ್ಲಿನ ಒಂದೊಂದು ಅಧ್ಯಾಯವೂ ಒಂದ...