ತುಮಕೂರಿನ ಗುರುಕುಲ ಕಲಾ ಪ್ರತಿಷ್ಠಾನದಿಂದ ’ರಾಷ್ಟ್ರಮಟ್ಟದ ಯೂಟ್ಯೂಬ್ ಕಥಾ ಸ್ಪರ್ಧೆ’

Date: 24-11-2021

Location: ತುಮಕೂರು


ತುಮಕೂರಿನ ಗುರುಕುಲ ಕಲಾ ಪ್ರತಿಷ್ಠಾನ ದಿಂದ ರಾಷ್ಟ್ರಮಟ್ಟದ ಯೂಟ್ಯೂಬ್ ಕಥಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

ಕಥಾ ಸ್ಪರ್ಧೆಗೆ ನೋಂದಣಿ ಕಾರ್ಯಕ್ರಮ ಆರಂಭವಾಗಿದ್ದು ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ 2021 ನವೆಂಬರ್ 30, ಮಂಗಳವಾರ ರಾತ್ರಿ 10 ಗಂಟೆಗಯವರೆಗೆ ತಮ್ಮ ಹೆಸರನ್ನು ನೋಂದಾಯಿಸಲು ಅವಕಾಶವಿರುತ್ತದೆ. ಸ್ಪರ್ಧೆಯನ್ನು ನಾಲ್ಕು ಶ್ರೇಣಿಯಲ್ಲಿ ವಿಭಾಗಿಸಲಾಗಿದ್ದು, ಬಹುಮಾನವು ನಗದು ಹಾಗೂ ಪುಸ್ತಕವನ್ನು ಒಳಗೊಂಡಿರುತ್ತದೆ.

ಪ್ರಥಮ ಬಹುಮಾನ 2000 ರೂ. ಮೊತ್ತ ಹಾಗೂ 2000 ಮೌಲ್ಯದ ಪುಸ್ತಕ ಬಹುಮಾನ, ದ್ವಿತೀಯ ಬಹುಮಾನ 1,500 ರೂ. ಮೊತ್ತ ಹಾಗೂ 1,500 ಮೌಲ್ಯದ ಪುಸ್ತಕ ಬಹುಮಾನ ಹಾಗೂ ತೃತೀಯ ಬಹುಮಾನ 1000 ರೂ. ಮೊತ್ತ ಹಾಗೂ 1000 ಮೊತ್ತದ ಪುಸ್ತಕ ಬಹುಮಾನ ಮತ್ತು 100 ಜನ ವಿಜೇತರಿಗೆ ಪುಸ್ತಕ ಬಹುಮಾನವನ್ನು ಹಾಗೂ ಭಾಗವಹಿಸಿದ ಎಲ್ಲರಿಗೂ ಅಭಿನಂದನಾ ಪತ್ರ ನೀಡಲಾಗುತ್ತದೆ ಎಂದು ಪ್ರತಿಷ್ಠಾನ ಸಂಸ್ಥಾಪಕ ಹುಲಿಯೂರು ದುರ್ಗಲಕ್ಷ್ಮಿ ನಾರಾಯಣ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶೇಷ ಸೂಚನೆ ; ಸ್ಪರ್ಧಾರ್ಥಿಗಳು ಪಿನ್ ಕೋಡ್ ಹಾಗೂ ವಾಟ್ಸಪ್ ಮೊಬೈಲ್ ಸಂಖ್ಯೆಯೊಂದಿಗೆ ಪೂರ್ಣವಿಳಾಸವನ್ನು ಹುಲಿಯೂರುದುರ್ಗ ಲಕ್ಷ್ಮೀನಾರಾಯಣ ಅವರ 9972521560 ಮೊಬೈಲ್ ಸಂಖ್ಯೆಗೆ ಕಳುಹಿಸಿ ನೋಂದಾಯಿಸಿಕೊಳ್ಳಬೇಕು. ಸ್ಪರ್ಧಾರ್ಥಿಗಳನ್ನು ಗ್ರೂಪ್ ನಲ್ಲಿ ನಮೂದಿಸಿ ಸ್ಪರ್ಧೆಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

MORE NEWS

ಹಿರಿಯ ಪತ್ರಕರ್ತ ಅರ್ಜುನ್ ದೇವ್ ನಿಧನ

24-04-2024 ಬೆಂಗಳೂರು

ಹಿರಿಯ ಪತ್ರಕರ್ತರು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎನ್. ಅರ್ಜುನ್ ದೇವ್ (92) ಅವರು ಕೆಂಗೇರಿ...

ಪುಸ್ತಕ ಸಂಸ್ಕೃತಿ ಬೆಳೆಸುವುದು ಸಾಮಾಜಿಕ ನ್ಯಾಯದ ಭಾಗ ಅಂತ ಸರ್ಕಾರಗಳು ಭಾವಿಸಬೇಕು: ಬರಗೂರು

23-04-2024 ಬೆಂಗಳೂರು

ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...

ಪ್ರಕಾಶನ ಸಂಸ್ಥೆಯನ್ನು ತೆರೆದಿರುವ ಪ್ರಕಾಶಕರೆಲ್ಲರೂ ಹುಚ್ಚರೇ; ಕೆ.ಎನ್. ಗಣೇಶಯ್ಯ

23-04-2024 ಬೆಂಗಳೂರು

ಪುಸ್ತಕಗಳನ್ನು ಕೊಂಡುಕೊಂಡು ಓದುವವರ ಪ್ರಮಾಣ ಕಡಿಮೆಯೂ ಆಗಿಲ್ಲ ಹೆಚ್ಚು ಕೂಡ ಆಗಿಲ್ಲ. ಬಹುಶಃ ಪುಸ್ತಕವನ್ನು ಓದಬೇಕು ಅನ್...