ಉರ್ದು ಕಾವ್ಯದ ಗೌರವದ ಪ್ರತೀಕ ಗಜಲ್ - ಜ್ಯೋತಿ ದೇವಣಗಾಂವ

Date: 25-11-2021

Location: ಶಹಾಪುರ


ಗಜಲ್ ಎಂಬುದು ಉರ್ದು ಕಾವ್ಯದ ಘನತೆ, ಪ್ರತಿಷ್ಠೆ ಹಾಗೂ ಗೌರವದ ಪ್ರತೀಕವಾಗಿದ್ದು, ಗಂಭೀರ ಸಾಹಿತ್ಯ ರೂಪವಾಗಿದೆ - ಜ್ಯೋತಿ ದೇವಣಗಾಂವ , ಲೇಖಕಿ

ಪಟ್ಟಣದ ಫಕೀರೇಶ್ವರ ಮಠದ ಬಯಲು ಬಸವ ಮಂಟಪದಲ್ಲಿ ಸಗರದ ಕಲಾನಿಕೇತನ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಲೇಖಕ ಸಿದ್ಧರಾಮ ಹೊನ್ಕಲ್ ರವರು ರಚಿಸಿರುವ ‘ಆತ್ಮಸಖಿಯ ಧ್ಯಾನದಲ್ಲಿ’ ಎಂಬ ಗಜಲ್ ಕೃತಿ ಕುರಿತು ಅವರು ಮಾತಣಾಡಿದರು.

ಸಿದ್ಧರಾಮ ಹೊನ್ಕಲ್ ರವರ ಈ ಕೃತಿ ಗಜಲ್ ನ ಪ್ರೇಮಕಾವ್ಯಕ್ಕೆ ಒಂದು ಬಹುದೊಡ್ಡ ಕೊಡುಗೆ ಎಂದು ಕೃತಿಯ ಗಜಲ್ ಗಳ ವೈವಿಧ್ಯತೆಯನ್ನು ಅವರು ಶ್ಲಾಘಿಸಿದರು.

ಕಲಬುರ್ಗಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ವಾಸುದೇವ ಸೇಡಂ ಅವರು ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿ, ಗಜಲ್ ಎಂಬುದು ಎದೆಯೊಳಗಿನ ಪಿಸುಮಾತು.ಕಾವ್ಯ ಮನುಷ್ಯನ ಅಭಿವ್ಯಕ್ತಿ ಸ್ವಾತಂತ್ರ್ಯದ ಅಂಗವೂ ಹೌದು,ಆದ್ದರಿಂದ ಭಾರತೀಯ ಪರಂಪರೆಯಲ್ಲಿ ಗಜಲ್ ಗೆ ವಿಶೇಷ ಸ್ಥಾನವಿದೆ ಎಂದು ನುಡಿದರು. ದೇಶ ಹಾಗೂ ಭಾಷೆಯ ಜನರ ದನಿಯಾಗಿ, ಸಂಸ್ಕೃತಿಯಾಗಿ, ರಸಿಕತೆಯ ಎದೆಯ ಹಾಡಾಗಿ,ಪ್ರೇಮ ಕಾಮದ ಅಂತರಂಗದ ಸಂವೇದನೆಯಾಗಿ,ಎಲ್ಲದಕ್ಕಿಂತ ಮುಖ್ಯ ಸುಂದರ ಕಾವ್ಯವಾಗಿ, ಸರ್ವರನ್ನು ಸೆಳೆಯುವ ಶಕ್ತಿ ಈ ಗಜಲ್ ಸಾಹಿತ್ಯಕ್ಕಿದೆ ಎಂದು ಅಭಿಪ್ರಾಯಪಟ್ಟರು.

ಲೇಖಕ ಹಾಗೂ ಹಿರಿಯ ಸಾಹಿತಿ ಸಿದ್ಧರಾಮ ಹೊನ್ಕಲ್ ಮಾತನಾಡಿ,ಗಜಲ್ ಎನ್ನುವ ಶಬ್ದವೂ ಕಿವಿಗೆ ಬೀಳುತ್ತಲೇ ಹೃದಯದ ಮಿಡಿತ ಪುಳಕಗೊಳ್ಳುತ್ತದೆ. ತಾಜಾ ಬೆಣ್ಣೆಯ ಕೋಮಲತೆ ಅರಳಿನಿಂತ ಪುಷ್ಪಲತೆಯ ಪರಿಮಳದ ಅನುಭೂತಿಯನ್ನು ಕರುಣಿಸುತ್ತದೆ.ಪ್ರೀತಿಯಿಂದ ಹಸಿದ ಮನಸ್ಸನ್ನು ತಣಿಸುವ, ಅಂಧಕಾರವನ್ನು ಮರೆಯಾಗಿಸುವ ಮಧುರತೆ ಇರುತ್ತದೆ. ಆದ್ದರಿಂದ ಗಜಲ್ ಕೃತಿಗಳನ್ನು ಓದಿ ಆಳಕ್ಕಿಳಿದು ಅಧ್ಯಯನ ಮಾಡಿದಾಗ ಮಾತ್ರ ಗಜಲ್ ಸಾಹಿತ್ಯ ಅರ್ಥವಾಗುತ್ತದೆ ಎಂದು ಹೇಳಿದರು.

ಸಮಾರಂಭದ ವೇದಿಕೆಯ ಮೇಲೆ ಫಕಿರೇಶ್ವರ ಮಠದ ಪರಮ ಪೂಜ್ಯ ಗುರುಪಾದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು, ಚನ್ನ ವೀರಯ್ಯ ಸ್ವಾಮಿಗಳು, ಇಲಕಲ್ಲದ ಡಾ: ಬಸವರಾಜ ಗವಿಮಠ,ಸಿದ್ಧಲಿಂಗಣ್ಣ ಆನೇಗುಂದಿ,ಟ್ರಸ್ಟ್ ಅಧ್ಯಕ್ಷ ಬಸವರಾಜ ಸಿಣ್ಣೂರು ಹಾಗೂ ಇತರರು ಉಪಸ್ಥಿತರಿದ್ದರು.

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...