ಉರ್ದು ಸಾಹಿತ್ಯ : ಭಾರತದ ಹನ್ಫಿ, ಪಾಕಿಸ್ತಾನದ ಅಖಿಲ್ ಅವರಿಗೆ ಕತಾರ್ ದೇಶದ ಪ್ರತಿಷ್ಠಿತ ಎಎಫ್ ಯುಎಎ ಪ್ರಶಸ್ತಿ

Date: 22-01-2021

Location: ಬೆಂಗಳೂರು


ತಮ್ಮ ಸಾಹಿತ್ಯದ ಮೂಲಕ ಉರ್ದು ಭಾಷೆಯ ಪ್ರಸಾರ ಸಿರಿವಂತಿಕೆ ಹೆಚ್ಚಿಸಿದ ಖ್ಯಾತಿಯ ಭಾರತದ ಪ್ರಸಿದ್ಧ ಕವಿ, ವಿದ್ವಾಂಸ ಶಮೀಮ್ ಹನ್ಫಿ ಹಾಗೂ ಪಾಕಿಸ್ತಾನದ ಕವಿ ಪ್ರೊ. ಮೊಯಿನುದ್ದೀನ್ ಅಖಿಲ್ ಅವರಿಗೆ 2021 ವರ್ಷದ ಕತಾರ್ ದೇಶದ ಪ್ರತಿಷ್ಠಿತ ಸಿಲ್ವರ್ ಜುಬಲಿ ಅಲ್ಮಿ ಫ್ರಾಗ್ -ಏ-ಉರ್ದು ಅರಬ್ (ಎಎಫ್ ಯು ಎಎ) ಪ್ರಶಸ್ತಿ ಲಭಿಸಿದೆ.

ಜಗತ್ತಿನೆಲ್ಲೆಡೆ ಉರ್ದು ಭಾಷೆಯ ಸಾಹಿತ್ಯ ಪ್ರಸಾರಕ್ಕಾಗಿ 1996ರಲ್ಲಿ ಮಸೀಜ್ -ಏ-ಉರ್ದು ಅರಬ್ (ಎಂಎಫ್ ಯುಎ) ಎಂಬುವರು ಸ್ಥಾಪಿಸಿದ ಉರ್ದು ಸಾಹಿತ್ಯ ಸಂಘಟನೆಯ ಮೂಲಕ ಪ್ರತಿ ವರ್ಷ ಈ ಪ್ರಶಸ್ತಿ ನೀಡಲಾಗುತ್ತಿದೆ.

ಕತಾರ್ ದೇಶದ ಅನುಮತಿಯೊಂದಿಗೆ 2021ರ ಅಕ್ಟೋಬರ್ ಇಲ್ಲವೇ ನವೆಂಬರ್ ನಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಿದ್ದು, ಪ್ರಶಸ್ತಿಯು 1.50 ಲಕ್ಷ ರೂ., ಹಾಗೂ ಚಿನ್ನದ ಪದಕವನ್ನು ಒಳಗೊಂಡಿದೆ.

ನವದೆಹಲಿ ಹಾಗೂ ಲಾಹೋರ್ ನಲ್ಲಿರುವ ಉರ್ದು ವಿದ್ವಾಂಸರು ಸಂಘಟನೆಯು ಆಯೋಜಿಸಿದ್ದ ಅಂತರ್ಜಾಲ ಸಭೆಯಲ್ಲಿ ಪ್ರೊ. ಶಮೀಮ್ ಹನ್ಫಿ ಹಾಗೂ ಪ್ರೊ. ಮೊಯಿನುದ್ದೀನ್ ಅಖಿಲ್ ಅವರ ಹೆಸರುಗಳು ಪ್ರಶಸ್ತಿಗಾಗಿ ಶಿಫಾರಸು ಮಾಡಲಾಗಿತ್ತು ಎಂದು ಸಂಘಟನೆ ಅಧ್ಯಕ್ಷ ಮೊಹಮ್ಮದ್ ಅತಿಖ್ ತಿಳಿಸಿದ್ದಾರೆ.

ಪ್ರೊ. ಶಮೀಮ್ ಹನ್ಫಿ ಅವರು ಮೂಲತಃ ಉತ್ತರ ಪ್ರದೇಶದ ಸುಲ್ತಾನಪುರದವರು. ಹನ್ಫಿ ನವದೆಹಲಿಯ ಜಾಮಿಯಾ ಮಿಲೈ ಇಸ್ಲಾಮಿಯಾ ಸಂಸ್ಥೇಯಲ್ಲಿ ಸೇವೆ ಸಲ್ಲಿಸಿ ಈಗ ನಿವೃತ್ತರು. ಅವರು ಹೆಸರಾಂತ ರಂಗಕರ್ಮಿ, ವಿಮರ್ಶಕ, ಇತಿಹಾಸ ತಜ್ಞರು, ಕವಿಗಳಾಗಿದ್ದಾರೆ. ಗಜಲ್ ಕಾ ಮಮಝಮಾಮ, ಕಹಾನಿ ಕೆ ಪಂಚ ರಂಗ್, ಫಿರಾಕ್, ದಯಾರ್-ಎ-ಶಾಬ್ ಕಾ ಮುಸಾಫಿರ್ ಸೇರಿದಂತೆ ಹತ್ತು ಹಲವು ಕೃತಿಗಳನ್ನು ರಚಿಸಿದ್ದಾರೆ. ವಿಮರ್ಶೆ ಕುರಿತೇ ಅವರು 20ಕ್ಕೂ ಅಧಿಕ ಕೃತಿಗಳನ್ನು ಬರೆದಿದ್ದಾರೆ.

ಪ್ರೊ. ಮೊಯಿನುದ್ದೀನ್ ಅಖಿಲ್ ಅವರು ಪಾಕಿಸ್ತಾನದ ಕರಾಚಿ ಬಳಿಯ ಲಂಧಿ ಗ್ರಾಮದವರು. ಅಮೆರಿಕೆಯ ಎಂಬೆಸಿಯಲ್ಲಿ ಉರ್ದು ಶಿಕ್ಷಕರಾಗಿ ವೃತ್ತಿ ಆರಂಭಿಸಿ, ವಿಶ್ವದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಉರ್ದು ಸಾಹಿತ್ಯದ ಸಿರಿವಂತಿಕೆ ಕುರಿತು ವಿಶೇಷ ಉಪನ್ಯಾಶಗಳನ್ನು ನೀಡಿದ್ದಲ್ಲದೇ ಹತ್ತು ಹಲವು ಕೃತಿಗಳನ್ನು ರಚಿಸಿದ್ದಾರೆ. ಜಪಾನಿನ ವಿದೇಶಾಂಗ ವಿನಿಮಯ ಇಲಾಖೆಯ ಭಾಷಾ ವಿಭಾಗದಲ್ಲಿ ಬೊಧಕರಾಗಿದ್ದರು. ಉರ್ದು ಹಾಗೂ ಆಂಗ್ಲ ಭಾಷೆಯಲ್ಲಿ ಸುಮಾರು 70ಕ್ಕೂ ಅಧಿಕ ಕೃತಿಗಳು ಹಾಗೂ 400ಕ್ಕೂ ಅಧಿಕ ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ಕೊಯ್ಟೊ ವಿಶ್ವವಿದ್ಯಾಲಯದ ಏಷ್ಯಾ-ಆಫ್ರಿಕಾ ಏರಿಯಾ ಸ್ಟಡೀಸ್ ಸೆಂಟರ್ ಗೆ ಇವರು ತಮ್ಮ ಗ್ರಂಥಾಲಯದಲ್ಲಿದ್ದ 28,000 ಕ್ಕೂ ಅಧಿಕ ಕೃತಿಗಳನ್ನು ದೇಣಿಗೆ ನೀಡಿದ್ದಾರೆ.

 

MORE NEWS

‘ಕಠಾರಿ ಅಂಚಿನ ನಡಿಗೆ’ ಸಮಕಾಲೀನ ವಿಡಂಬನೆಗಳ ಪುಸ್ತಕ: ಶಿವಸುಂದರ್

22-04-2024 ಬೆಂಗಳೂರು

ಬೆಂಗಳೂರು: ಚಂದ್ರಪ್ರಭ ಕಠಾರಿಯವರು ವಿಡಂಬನೆಗಳನ್ನು ಬರೆದಿದ್ದಾರೆ. ವಿಡಂಬನೆ, ಲೇವಡಿ ಮಾಡುವುದಕ್ಕೆ ಇಂದು ಬಹಳ ಧೈರ್ಯ ಬ...

ಜೋಗಿ ಅವರ 'ಭಗ್ನಪ್ರೇಮಿಯ ಅಪೂರ್ಣ ಡೈರಿ' ಕೃತಿ ಬಿಡುಗಡೆ ಸಮಾರಂಭ

22-04-2024 ಬೆಂಗಳೂರು

ಬೆಂಗಳೂರು: ಸಾವಣ್ಣ ಪ್ರಕಾಶನದ 200ನೇ ಕೃತಿ, ಲೇಖಕ ಜೋಗಿ ಅವರ ‘ಭಗ್ನಪ್ರೇಮಿಯ ಅಪೂರ್ಣ ಡೈರಿ’ ಬಿಡುಗಡೆ ಕಾ...

ನಟ ಎಂ. ಎಸ್‌. ಉಮೇಶ್‌ ಅವರಿಗೆ ಡಾ. ರಾಜಕುಮಾರ ಸಂಸ್ಕೃತಿ ದತ್ತಿ ಪ್ರಶಸ್ತಿ ಪ್ರದಾನ

21-04-2024 ಬೆಂಗಳೂರು

ಬೆಂಗಳೂರು: ನನ್ನ ಕಲಾರಂಗದ ಬೆಳವಣಿಗೆಗೆ ಇದೇ ವೇದಿಕೆ ಕಾರಣ. ಈ ವೇದಿಕೆ ನನ್ನನ್ನ ಸಾಕಿದೆ, ಬೆಳೆಸಿದೆ, ನನಗೆ ತಿಳುವಳಿಕೆ...