ವಾಹಿನಿ ಕಲಾ ಸಂಘದಿಂದ ಕತೆ, ಕವನ ಸ್ಪರ್ಧೆ ಆಯೋಜನೆ

Date: 17-10-2020

Location: ಬೆಂಗಳೂರು


ಪುತ್ತೂರಿನ ವಾಹಿನಿ ಕಲಾ ಸಂಘವು 2020ನೇ ಸಾಲಿನ ಕತೆ, ಕವನ ಸ್ಪರ್ಧೆಯನ್ನು ಆಯೋಜಿಸಿದೆ.

1.ಬರಹಗಾರರು ತಮ್ಮ ಇಷ್ಟದ ವಿಷಯದಲ್ಲಿ ಕತೆ, ಕವನಗಳನ್ನು ಕಳುಹಿಸಬಹುದು.

2. ಕತೆ,ಕವನಗಳು ಸ್ವತಂತ್ರವಾಗಿರಬೇಕು, ಅನುವಾದ, ಅನುಕರಣೆಗಳಿಗೆ ಅವಕಾಶವಿಲ್ಲ.

3. ಕತೆ, ಕವನಗಳು ಈ ಹಿಂದೆ ಎಲ್ಲಿಯೂ ಪ್ರಕಟಗೊಂಡಿರಬಾರದು‌. ವಿದ್ಯುನ್ಮಾನ ಮಾಧ್ಯಮಗಳಲ್ಲೂ ಪ್ರಕಟಿಸಿರಬಾರದು.

4. ಪ್ರೌಢಶಾಲೆ, ಕಾಲೇಜು ಮತ್ತು ಸಾರ್ವಜನಿಕ ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ವಿದೇಶದಲ್ಲಿ ನೆಲೆಸಿರುವ ಕನ್ನಡಿಗರೆಲ್ಲರೂ ಭಾಗವಹಿಸಬಹುದು. ಶಾಲೆ, ಕಾಲೇಜು ವಿದ್ಯಾರ್ಥಿಗಳು ತಮ್ಮ ಶಾಲೆ ಅಥವಾ ಸಂಸ್ಥೆಯ ಮುಖ್ಯಸ್ಥರಿಂದ ಪ್ರಮಾಣಪತ್ರ ಹಾಗೂ ಗುರುತಿನ ಚೀಟಿ ಪ್ರತಿಯನ್ನು ಲಗತ್ತಿಸಿರಬೇಕು.

5. ಕತೆಗಳು ಆರುನೂರು ಪದಗಳನ್ನು ಮೀರಬಾರದು. ಕವನಗಳು ಇಪ್ಪತ್ತೈದು ಸಾಲುಗಳ ಒಳಗಿರಬೇಕು..

6. ಕತೆ, ಕವನಗಳನ್ನು ಬರೆಯುವಾಗ ತಮ್ಮ ಹೆಸರು ವಿಳಾಸಗಳನ್ನು ಪ್ರತ್ಯೇಕವಾಗಿ ಬರೆದು ಲಗತ್ತಿಸಬೇಕು. ಇ - ಮೈಲ್ ನಲ್ಲಿ ಕಳಿಸುವಾಗ ಕತೆ/ಕವನ ಮತ್ತು ಹೆಸರು ವಿಳಾಸಗಳನ್ನು ಬೇರೆ ಬೇರೆಯೇ ಫೈಲುಗಳಲ್ಲಿ ಬರೆಯಬೇಕು ಹಾಗೂ ಆ ಫೈಲುಗಳನ್ನು ಲಗತ್ತಿಸಬೇಕು.

7. ಒಬ್ಬರು ಒಂದು ಸ್ಪರ್ಧೆಗೆ ಮಾತ್ರ ಪ್ರವೇಶ ಕಳುಹಿಸಬಹುದು.

8. ಕತೆ, ಕವನಗಳನ್ನು ವಾಟ್ಸಪ್ ಮೂಲಕ ಕಳುಹಿಸಬಾರದು.

9. ಮೂರು ವಿಭಾಗಗಳಲ್ಲಿಯೂ ಅತ್ಯುತ್ತಮವಾದ ಒಂದು ಕತೆ ಮತ್ತು ಒಂದು ಕವನಕ್ಕೆ ನಗದು ಬಹುಮಾನವಿದೆ. ಉತ್ತಮವಾದ ಕತೆ/ ಕವನಗಳಿಗೆ ಪುಸ್ತಕ ಬಹುಮಾನ ನೀಡಲಾಗುತ್ತದೆ.

ನಿಮ್ಮ ಕತೆ, ಕವನಗಳನ್ನು ಕಳುಹಿಸುವ ವಿಳಾಸ

ಎಸ್. ಕೆ. ಗೋಪಾಲಕೃಷ್ಣ ಭಟ್,

ಆಯೋಜಕರು,

ವಾಹಿನಿ ಕತೆ/ ಕವನ ಸ್ಪರ್ಧೆ 2020,

ನಂ.105, ಅಕ್ಷರ,

ಬ್ರಾಡ್ವೇ ಇಲೈಟ್ ಅಪಾರ್ಟ್ಮೆಂಟ್,

ಕುಳಾಯಿ ಹೊಸಬೆಟ್ಟು,

ಮಂಗಳೂರು.575019

ಇ ಮೈಲ್ ವಿಳಾಸ - madhuravahinikalasangha@gmail.com

MORE NEWS

ಪುಸ್ತಕ ಸಂಸ್ಕೃತಿ ಬೆಳೆಸುವುದು ಸಾಮಾಜಿಕ ನ್ಯಾಯದ ಭಾಗ ಅಂತ ಸರ್ಕಾರಗಳು ಭಾವಿಸಬೇಕು: ಬರಗೂರು

23-04-2024 ಬೆಂಗಳೂರು

ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...

‘ಕಠಾರಿ ಅಂಚಿನ ನಡಿಗೆ’ ಸಮಕಾಲೀನ ವಿಡಂಬನೆಗಳ ಪುಸ್ತಕ: ಶಿವಸುಂದರ್

22-04-2024 ಬೆಂಗಳೂರು

ಬೆಂಗಳೂರು: ಚಂದ್ರಪ್ರಭ ಕಠಾರಿಯವರು ವಿಡಂಬನೆಗಳನ್ನು ಬರೆದಿದ್ದಾರೆ. ವಿಡಂಬನೆ, ಲೇವಡಿ ಮಾಡುವುದಕ್ಕೆ ಇಂದು ಬಹಳ ಧೈರ್ಯ ಬ...

ಜೋಗಿ ಅವರ 'ಭಗ್ನಪ್ರೇಮಿಯ ಅಪೂರ್ಣ ಡೈರಿ' ಕೃತಿ ಬಿಡುಗಡೆ ಸಮಾರಂಭ

22-04-2024 ಬೆಂಗಳೂರು

ಬೆಂಗಳೂರು: ಸಾವಣ್ಣ ಪ್ರಕಾಶನದ 200ನೇ ಕೃತಿ, ಲೇಖಕ ಜೋಗಿ ಅವರ ‘ಭಗ್ನಪ್ರೇಮಿಯ ಅಪೂರ್ಣ ಡೈರಿ’ ಬಿಡುಗಡೆ ಕಾ...