ವೈರುಧ್ಯ ಮೀರುವುದು ಕಾವ್ಯ ಗುಣ: ಸತೀಶ ಕುಲಕರ್ಣಿ

Date: 21-03-2020

Location: ಹಾವೇರಿ


ಕವಿ ಹೆಬಸೂರ ರಂಜಾನ ಅವರ `ಮಂಜಿನೊಳಗಿನ ಕೆಂಡ' ಹಾಯ್ಕು ಕವನ ಸಂಕಲನ ಕುರಿತುಹಾವೇರಿಯ ಹೊಸಮಠದ ಆವರಣದಲ್ಲಿ ವಿಚಾರ ಸಂಕಿರಣ ಜರುಗಿತು. ಹೊಸಮಠ, ಸಾಹಿತಿ ಕಲಾವಿದರ ಬಳಗ ಹಾಗೂ ಶಿಗ್ಗಾವಿಯ ಉತ್ತರ ಸಾಹಿತ್ಯ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ನಡೆದ ವಿಚಾರಣ ಸಂಕಿರಣವನ್ನು ಹಿರಿಯ ಕವಿ ಸತೀಶ ಕುಲಕರ್ಣಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು “ಹಲವು ಅರ್ಥಗಳನ್ನು ಪಡೆಯುವ ಜಪಾನಿ ಭಾಷೆಯ ಹಾಯ್ಕು ಚುಟುಕು ಕಾವ್ಯ ಪ್ರಕಾರ ನಮ್ಮ ಅನುಭವ ಮತ್ತು ಕಲ್ಪನಾ ಶಕ್ತಿಯನ್ನು ವಿಸ್ತರಿಸುವ ಶಕ್ತಿಯುಳ್ಳದ್ದು. ಜಪಾನಿನ ಹಾಯ್ಕು ಕಾವ್ಯಕ್ಕೆ ಛಂದಸ್ಸಿನ ನಿರ್ಬಂಧಗಳಿದ್ದರೂ, ಆ ಕಟ್ಟಳೆಗಳನ್ನು ಮುರಿದು ಜಗತ್ತಿನ ಎಲ್ಲ ಭಾಷೆಗಳಲ್ಲಿ ಮನ್ನಣೆ ಪಡೆದಿದೆ. ರಂಜಾನ ಹೆಬಸೂರರ ‘ಮಂಜಿನೊಳಗಿನ ಕೆಂಡ’ ಇದನ್ನು ಸಮರ್ಥವಾಗಿ ಪ್ರಯೋಗಿಸಿದೆ. ಮಂಜು ಮತ್ತು ಕೆಂಡ ವೈರುಧ್ಯಗಳಾದರೂ, ಅವುಗಳನ್ನು ದಾಟುವುದೇ ಕಾವ್ಯದ ಗುಣ” ಎಂದು ಹೇಳಿದರು.

ಬಸವಶಾಂತಲಿಂಗ ಸ್ವಾಮಿಗಳು ಸಾನ್ನಿಧ್ಯವಹಿಸಿ, “ರಂಜಾನರ ಕಾವ್ಯ ಸಮಾಜ ಜೀವನದ ಎಲ್ಲ ಸ್ಥಿತ್ಯಂತರಗಳನ್ನು ದಕ್ಕಿಸಿಕೊಂಡು ರಚಿತವಾದ ವಿಚಾರ ಕೆಂಡಗಳ ಕಾವ್ಯ. ಮಂತ್ರದಲ್ಲಿ ಶಬ್ದವಿಲ್ಲ, ಶಬ್ದಗಳೇ ಮಂತ್ರವಾಗುವ ಕಾವ್ಯವನ್ನು ರಂಜಾನ ರಚಿಸಿದ್ದರೆ” ಎಂದು ಅಭಿಪ್ರಾಯಪಟ್ಟರು. 

ಕವಿ ರಂಜಾನ ಹೆಬಸೂರರನ್ನು ಹಾಗೂ ಕಿತ್ತೂರ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ರಾಜೇಶ್ವರಿ ರವಿ ಸಾರಂಗಮಠ ಅವನ್ನು ಎಲ್ಲ ಸಂಘಟನೆಗಳ ಪರವಾಗಿ ಸನ್ಮಾನಿಸಲಾಯಿತು.ಮುಖ್ಯ ಅತಿಥಿಯಾಗಿ ಪ್ರೊ. ಮಾರುತಿ ಶಿಡ್ಲಾಪೂರ, ಪತ್ರಕರ್ತ ಮಾಲತೇಶ ಅಂಗೂರ, ಲೇಖಕರಾದ ಜೀವರಾಜ ಛತ್ರದ, ಲಿಂಗರಾಜ ಸೊಟ್ಟಪ್ಪನವರ, ಕಾಂತೇಶ ಅಂಬಿಗೇರ, ಪರಿಮಳಾ ಜೈನ, ಕವಿತಾ ಸಾರಂಗಮಠ, ಡಾ. ಅಂಬಿಕಾ ಹಂಚಾಟೆ, ಎಸ್.ವ್ಹಿ. ಕುಲಕರ್ಣಿ, ಜಿ.ಎಂ. ಓಂಕಾರಣ್ಣನವರ, ವಾಗೀಶ ಹೂಗಾರ, ಮಹಾದೇವ ಕರಿಯಣ್ಣ ಹಾಗೂ ಕವಿ ವೀರೇಶ ಹಿತ್ತಲಮನಿ ಮತ್ತಿತರ ಸಾಹಿತ್ಯಾಸಕ್ತರು  ಭಾಗಿಯಾಗಿದ್ದರು.

MORE NEWS

ಅರಿವಿನ ಕೃಷಿ ನಡೆಸುತ್ತಿರುವ ‘ಸಾಹಿ...

09-04-2020 ಬೆಂಗಳೂರು

ಕಾಂಕ್ರೀಟ್‌ ಕಾಡಿನಲ್ಲೊಂದು ಗುಬ್ಬಿ ಗಾತ್ರದ ಕಾಡು ಜ್ಞಾನಭಾರತಿ ಆವರಣದಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯ. ಹಲವಾ...

ಯಯಾತಿಯ ಮನವೇ ನುಡಿದ ಮುಕುಲಿಕೆ ಮತ್...

08-04-2020 ಬೆಂಗಳೂರು

‘ಹೌದು ಮಹಾರಾಜರೇ, ನೀವೇನೋ ನಾಳೆ ಬರುತ್ತೀರೆಂದಿರಿ. ಆದರೆ, ನಿಮ್ಮ ಕಣ್ಣುಗಳು ಹೇಳುತ್ತಿದ್ದವು;ಇದೀಗ ಬರುತ್ತೇನೆ ...

ಜರ್ಮನಿಯ `ಕನ್ನಡ ಪಂಡಿತ' ಫರ್ಡಿನಾಂ...

07-04-2020 ಬೆಂಗಳೂರು

ಧರ್ಮ ಪ್ರಚಾರ ಮಾಡುವ ಉದ್ದೇಶದಿಂದ ಬಂದ ಕ್ರಿಶ್ಚಿಯನ್ ಪಾದ್ರಿಯೊಬ್ಬ ಕನ್ನಡ ಕಲಿತು ಮಾಡಿದ ಸಾಧನೆ ಅನನ್ಯ ಮತ್ತು ಅಪೂರ್ವ....

Comments

Magazine
With us

Top News
Exclusive
Top Events