ವರನಿಂದ ಪ್ರೇಯಸಿ ವಧುವಿಗೆ ನೂರು ಪುಸ್ತಕಗಳ ಕೊಡುಗೆ 

Date: 04-04-2020

Location: ಕೇರಳ


ಸಾಹಿತ್ಯಕ್ಕೆ ಏನೆಲ್ಲಾ ಶಕ್ತಿ ಇದೆ ಎಂಬುದಕ್ಕೆ ಇಜಾಸ್ ಅಜ್ನಾ ಜೋಡಿ  ಸಾಕ್ಷಿಯಾಗಿದೆ. ಕಳೆದ ವರ್ಷ ಅವರಿಬ್ಬರು ಪರಸ್ಪರ ಮೆಚ್ಚಿ ವಿವಾಹವಾಗಲು ನಿರ್ಧರಿಸಿದ್ದರು. ಮದುವೆಯಾಗುವ ಭಾವಿ ಪತಿಯು ತನಗೆ ಏನು ಮಹರ್‌ (ವಧು ದಕ್ಷಿಣೆ) ಬೇಕೆಂದು ಕೇಳಿದಾಗ, ಕ್ಷಣವೂ ಯೋಚಿಸದೇ ಜೀವನ ಪೂರ್ತಿ ಉಡುಗೊರೆಯೊಂದಿಗೆ ಕ್ಷಣಗಳನ್ನು ಕಳೆಯಬಹುದಾದ, ತನಗೆ ಮಹತ್ವ ಎನಿಸಿದ, ಇಷ್ಟದ ಲೇಖಕರ ನೂರು ಪುಸ್ತಕಗಳ ಪಟ್ಟಿ ನೀಡಿದ್ದಾಳೆ. ಸಾಮಾನ್ಯವಾಗಿ ಮಹರ್‌ನಲ್ಲಿ ಚಿನ್ನ, ಆಸ್ತಿ ಅಥವಾ ಇತರೆ ಬೆಲೆ ಬಾಳುವ ಉಡುಗೊರೆಯನ್ನು ಕೇಳಲಾಗುತ್ತದೆ. ಆದರೆ, ಒಬ್ಬ ವಧು ತನಗೆ ಬೇಕಾದುದನ್ನು ಬೇಡಿಕೊಳ್ಳಬಹುದು ಎಂಬುದನ್ನು ಅಜ್ನಾ ತೋರಿಸಿಕೊಟ್ಟಿದ್ದಾಳೆ. 

ತನ್ನ ಮನದನ್ನೆಯ ಈ ವಿಶಿಷ್ಟ-ಉದಾತ್ತ ಉದ್ದೇಶವನ್ನು ತಿಳಿದ ಇಜಾಸ್, ತಕ್ಷಣವೇ  ಹೊಸ ಪುಸ್ತಕಗಳ ಹುಡುಕಾಟವನ್ನು ಶುರುಮಾಡಿ, ಇದೀಗ ಅವರು ಮಲಗುವ ಕೋಣೆಯೊಳಗೆ ಒಂದು ದೊಡ್ಡ ಕಪಾಟಿನಲ್ಲಿ ನೂರು ಪುಸ್ತಕಗಳಿವೆ. ಈ ನೂರು ಪುಸ್ತಕಗಳಲ್ಲಿ ಭಾರತದ ಸಂವಿಧಾನ, ಖಲೀದ್ ಹುಸೇನಿ ಅವರ ಪುಸ್ತಕಗಳು ಮತ್ತು ಮುರಕಾಮಿಯ ಕೆಲವು ಪುಸ್ತಕಗಳಲ್ಲದೇ, ಕುರಾನ್, ಬೈಬಲ್ ಮತ್ತು ಭಗವದ್ಗೀತೆ ಮುಂತಾದವು ಇವೆ.

2019 ಡಿಸೆಂಬರ್ 29 ರಂದು ಈ ಜೋಡಿ ವಿವಾಹವಾಗಿದೆ. ಪ್ರಸ್ತುತ ಈ ಪುಸ್ತಕಗಳನ್ನು ಓದಲು ನಿಗದಿತ ಸಮಯವನ್ನು ಮೀಸಲಿಟ್ಟಿದ್ದು, ಕೇರಳದ ಸಾಹಿತ್ಯ ಕಾರ್ಯಕ್ರಮಗಳಿಗೆ ಭೇಟಿ ನೀಡುತ್ತಿದ್ದರು. ಆದರೆ ಕರೊನಾ ಲಾಕ್‌ಡೌನ್‌ನಿಂದಾಗಿ ಸಾಹಿತ್ಯ ಕಾರ್ಯಕ್ರಮಗಳು ತಪ್ಪಿವೆ. ಮನೆಯಲ್ಲಿ ಕುಳಿತು ಓದಲು ಸಮಯಾವಕಾಶ ಸಿಕ್ಕಿದೆ ಎನ್ನುತ್ತಾ ಪುಸ್ತಕಗಳಲ್ಲಿ ಮುಳುಗಿದೆ ಈ ದಂಪತಿ.

 

MORE NEWS

ಅಸಂಖ್ಯ ಸ್ತ್ರೀಯರ ನೈಜ ಚಿತ್ರಣ ‘ನೋ...

04-07-2020 ಬೆಂಗಳೂರು

‘ಲೇಖಿಕಾ ಸಾಹಿತ್ಯ ವೇದಿಕೆ’ ಆಯೋಜಿಸಿದ್ದ ಪುಸ್ತಕಾವಲೋಕನದಲ್ಲಿ ಈ ಬಾರಿ ಲೇಖಕಿ ಡಿ. ಯಶೋದಾ ಅವರು ಬೇ...

ತಿರುಪತಿ ಭಂಗಿ ಅವರ ‘ಕೆಂಪರೋಡ್’ ಕೃ...

03-07-2020 ಬೆಂಗಳೂರು

ಕಥೆಗಾರ ಅಬ್ಬಾಸ್ ಮೇಲಿನಮನಿ ಹಾಗೂ ಸಾಹಿತಿ ಪ್ರಕಾಶ್ ಖಾಡೆ ಅವರು ತಿರುಪತಿ ಭಂಗಿ ಅವರ ‘ಕೆಂಪರೋಡ್’ ಕ...

ವಿವಿಧ ಅಕಾಡೆಮಿಗಳಿಗೆ ನೂತನ ಸದಸ್ಯರ...

02-07-2020 ಬೆಂಗಳೂರು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ವಿವಿಧ ಅಕಾಡೆಮಿಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದ್ದು, ಅ...

Comments

ಸ್ಪರ್ಧೆಯ ಕತೆಗಳು
ಸ್ಪರ್ಧೆಯ ಕವಿತೆಗಳು
Magazine
With us

Top News
Exclusive
Top Events