ವಾಸ್ತವಿಕತೆಗೆ ಉತ್ತಮ ಸಾಹಿತ್ಯಕ ಮೌಲ್ಯ, ‘ಎನ್ ಕೌಂಟರ್’ ವಿಷೇಶತೆ: ಬಿದರಿ ಪ್ರಶಂಸೆ

Date: 24-01-2021

Location: ಬೆಂಗಳೂರು


ಲೇಖಕ ಕುಂ.ವಿ. ಅವರ ಎನ್ ಕೌಂಟರ್ ಕಾದಂಬರಿಯು ಸತ್ಯಕ್ಕೆ ಅಪಚಾರವಾಗದಂತೆ ವಸ್ತುಸ್ಥಿತಿಯನ್ನು ಆಧರಿಸಿದ ವರದಿಯಾಗಿದೆ. ಆದರೆ, ಉತ್ತಮ ಸಾಹಿತ್ಯಕ ಮೌಲ್ಯ ಪಡೆದಿದೆ ಎಂದು ನಿವೃತ್ತ ಐಜಿಪಿ ಹಾಗೂ ಎನ್ ಕೌಂಟರ್ ವಿಶೇಷ ಪರಿಣಿತ ಅಧಿಕಾರಿ ಶಂಕರ ಬಿದರಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಅಂಕಿತ ಪುಸ್ತಕ ಹಾಗೂ ಬುಕ್ ಬ್ರಹ್ಮ ಸಹಯೋಗದಲ್ಲಿ ಆಯೋಜಿಸಿದ್ದ ಖ್ಯಾತ ಕಾದಂಬರಿಕಾರ ಕುಂ. ವೀರಭದ್ರಪ್ಪ ಅವರ ‘ಎನ್ ಕೌಂಟರ್’ ಕಾದಂಬರಿಯನ್ನು ಬುಕ್ ಬ್ರಹ್ಮ ಫೇಸ್‌ಬುಕ್‌ ಲೈವ್‌ನಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಎನ್ ಕೌಂಟರ್ ಕಾದಂಬರಿಯು ಕಪೋಲಕಲ್ಪಿತವಲ್ಲ. ಎನ್ ಕೌಂಟರ್ ಗೆ ಒಳಗಾದ ಅಪರಾಧಿಯ ಪ್ರದೇಶಕ್ಕೂ, ಮನೆಯ ಸದಸ್ಯರಿಗೂ ಭೇಟಿ ಮಾಡಿ, ಅವರ ಅಭಿಪ್ರಾಯಗಳನ್ನು ಪಡೆದು, ಯಾವುದೇ ಪೂರ್ವಗ್ರಹವಿಲ್ಲದೇ ಬರೆದ ಕಾದಂಬರಿ ಇದು. ಸುಮಾರು 30ವರ್ಷಗಳ ಹಿಂದೆ (1990) ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದ ತಾವು ಬಳ್ಳಾರಿ ಭೀಮ್ಲಾನಾಯಕ ಹೆಸರಿನ ಆಂಧ್ರಪ್ರದೇಶದ ಕುಖ್ಯಾತ ಈ ರೌಡಿಯನ್ನು ಎನ್ ಕೌಂಟರ್ ಮಾಡಲಾಗಿತ್ತು. ಆ ವ್ಯಕ್ತಿಯ ಚಾರಿತ್ರಿಕ ಅಂಶಗಳನ್ನು ಕುತೂಹಲ ಕೆರಳಿಸುವಂತಿದ್ದವು. ಜೊತೆಗೆ ವಾಸ್ತವತೆಯನ್ನು ಅಣುಕಿಸುವಂತಿದ್ದವು. ಆದ್ದರಿಂದ, ಈ ಬಗ್ಗೆ ಕಾದಂಬರಿ ಬರೆಯಲು ಕೇಳಿಕೊಂಡಿದ್ದೆ. ಆದರೆ, ಕುಂ.ವಿ. ಅವರು ಬರೆದೇ ಬಿಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಕಾದಂಬರಿ ರಚನೆಯಲ್ಲೂ ಕುಂ.ವಿ. ಅವರ ಕುಶಲ ಕಲೆಗಾರಿಕೆ ಮೆಚ್ಚತಕ್ಕದ್ದು. ವಾಸ್ತವ ಘಟನೆಯನ್ನು ಕಲಾತ್ಮಕವಾಗಿ ರಚಿಸಿದ್ದಾರೆ. ಅವರ ಆಳವಾದ ಜ್ಞಾನಕ್ಕೆ ಈ ಕಾದಂಬರಿ ಕನ್ನಡಿ ಹಿಡಿಯುತ್ತದೆ ಎಂದು ಪ್ರಶಂಸಿಸಿದರು.

ನಂತರ ಮಾತನಾಡಿದ ಲೇಖಕ ಅಗ್ರಹಾರ ಕೃಷ್ಣಮೂರ್ತಿ, ‘ಮನುಷ್ಯ ಸಹಜ ಮಾನವ ಸ್ವರೂಪಿ ಮೂಲಭೂತಗುಣವನ್ನು ಈ ಕೃತಿಯಲ್ಲಿ ಕಾಣಬಹುದು. ಮಾನವೀಯ ಹಾಗೂ ಕ್ರೌರ್ಯ ಜಗತ್ತಿನ ಚಟುವಟಿಕೆಗಳನ್ನು ಮುಖಾಮುಖಿಯಾಗಿ ಕೂರಿಸಿದ್ದು ಲೇಖಕರ ಹೆಗ್ಗಳಿಕೆಗೆ ಸಾಕ್ಷಿ ಎಂದರು.

ಕೃತಿಕಾರ ಕುಂ. ವೀರಭದ್ರಪ್ಪ, ಪತ್ರಕರ್ತ ದೇವು ಪತ್ತಾರ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...