ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ವಿಚಾರ ಕಮ್ಮಟ

Date: 15-10-2019

Location: ಕುಪ್ಪಳಿ, ತೀರ್ಥಹಳ್ಳಿ, ಶಿವಮೊಗ್ಗ.


ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನವು ಪ್ರತಿ ವರ್ಷ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹಯೋಗದಲ್ಲಿ ಏರ್ಪಡಿಸುವ ವಿಚಾರ ಕಮ್ಮಟವನ್ನು ಈ ವರ್ಷ 2019ರ ನವೆಂಬರ್ ತಿಂಗಳ ದಿನಾಂಕ 8, 9 ಮತ್ತು 10 ರಂದು ಮೂರುದಿನಗಳ ಕಾಲ ಕುಪ್ಪಳ್ಳಿ, ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ಏರ್ಪಡಿಸಿದೆ. ಪ್ರಸಿದ್ಧ ಭಾಷಾತಜ್ಞ ಡಾ.ಕೆ.ವಿ.ನಾರಾಯಣ ಕಮ್ಮಟದ ನಿರ್ದೇಶಕರಾಗಿರುತ್ತಾರೆ. ಕವಿ, ನಾಟಕಕಾರ ಡಾ.ಕೆ.ವೈ.ನಾರಾಯಣಸ್ವಾಮಿ ಸಂಚಾಲಕರಾಗಿರುತ್ತಾರೆ. ಈ ಬಾರಿ "ನಮ್ಮ ಜೀವನ ದೃಷ್ಟಿ;ನಮ್ಮ ಜೀವನ ವಿಧಾನ" ಎಂಬ ವಿಷಯ ಕುರಿತ ಚರ್ಚೆ ನಡೆಯಲಿದೆ. ಯಾವುದೇ ಶುಲ್ಕವಿಲ್ಲ. ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ಊಟ, ವಸತಿ ಕಲ್ಪಿಸಲಾಗುವುದು.ನಲವತ್ತೈದು ವಯೋಮಿತಿಯ ಸಾಹಿತ್ಯ ಬೋಧಕರು, ಸಂಶೋಧನಾ ವಿದ್ಯಾರ್ಥಿಗಳಿಗೆ ಆದ್ಯತೆ. ಆಸಕ್ತರು ತಮ್ಮ ಸ್ವವಿವರವನ್ನು

ಅಧ್ಯಕ್ಷರು,

ಡಾ.ಬೆಸಗರಹಳ್ಳಿರಾಮಣ್ಣ ಪ್ರತಿಷ್ಟಾನ,

ನಂ. 15, 2ನೇ ಅಡ್ಡರಸ್ತೆ, ನಿಸರ್ಗ ಬಡಾವಣೆ,

ಉಲ್ಲಾಳ ಆರ್.ಟಿ.ಓ. ಕಚೇರಿ ಹತ್ತಿರ,

ವಿಶ್ವೇಶ್ವರಯ್ಯ ಬಡಾವಣೆ, ಬೆಂಗಳೂರು-560 091

ಇಲ್ಲಿಗೆ ಕಳುಹಿಸಬಹುದು. ಅಥವಾ ಈ ಮೇಲ್ drbrtrust@gmail.com ಗೆ ಕಳಿಸಬಹುದು. ಅಥವಾ ವೆಬ್ ಸೈಟ್ www.besagarahalliramanna.org ಇಲ್ಲಿ ನೀಡಿರುವ ನಮೂನೆಯ

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...