Date: 01-10-2024
Location: ಬೆಂಗಳೂರು
ಬೆಂಗಳೂರು: ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ(ರಿ)ಯು ವಿಶ್ವದ 58ನೇ ರಾಷ್ಟ್ರೀಯ ಸಂಸ್ಥೆಗಳ ಪಟ್ಟಿಯಲ್ಲಿ ಒಂದಾಗಿರುವುದು ಇಡೀ ಕರ್ನಾಟಕ್ಕೆ ಹೆಮ್ಮೆಯ ಸಂಗತಿಯಾಗಿದೆ.
2024 ಜೂನ್ 11 ಮತ್ತು 12-ರಂದು ಯುನೆಸ್ಕೋ ಮುಖ್ಯ ಕಛೇರಿಯಲ್ಲಿ ನಡೆದ 10ನೇ ಅಧಿವೇಷನದಲ್ಲಿ ಮಂಡಳಿಗೆ ಮಾನ್ಯತೆ ಘೋಷಿಸಲಾಗಿದೆ(Resolution 10.GA 9) ಎಂದು ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ (ರಿ) ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದ್ದಾರೆ.
ಯುನೆಸ್ಕೂ 2023ರ ಅಮೂರ್ತ ಸಾಂಸ್ಕೃತಿಕ ಪರಂಪರೆ ಜಗತ್ತಿನ, ಸಂರಕ್ಷಣೆ, ಆಂತರಿಕ ಸಮಿತಿಗೆ ಸಲಹೆ ಮಾಡಲು (to advise on UNESCO's 2003 Convention -Safeguarding of Intangible Cultural Heritage) ಮಂಡಳಿ ಮಾನ್ಯತೆ ಪಡೆದಿದೆ.
ಇದು ಸುಧೀರ್ಘವಾಗಿ, ಯಕ್ಷಗಾನದ ಸಂವರ್ಧನೆ, ಪರಂಪರೆ ಪ್ರಸಾರ, ಪ್ರಚಾರ, ದಾಖಲಾತಿ ಈ ಎಲ್ಲಾ ಪ್ರಯತ್ನ ಹಾಗೂ ಸಾಧನೆಗೆ ಅಂತರಾಷ್ಟ್ರೀಯ ಸಾಂಸ್ಕೃತಿಕ ಪರಂಪರೆಯ ಸಮುದಾಯದಲ್ಲಿ ಸಿಕ್ಕ ಗೌರವವಾಗಿದೆ. ಹೊನ್ನಾವರ ತಾಲೂಕಿನ ಗುಣವಂತೆ ಗ್ರಾಮದಲ್ಲಿ ರಂಗಮಂದಿರ, ಯಕ್ಷಗಾನ ಪ್ರದರ್ಶನ, ಯಕ್ಷಗಾನ ಗುರುಕುಲ, ಶಿಕ್ಷಣ, ಆಟವೇ ಪಾಠ, ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ, ಭಾಸಂ, ಪ್ರಾತ್ಯಕ್ಷತೆ, ಅಧ್ಯಯನ, ಕಾರ್ಯಾಗಾರ ಮುಂತಾದ ಕ್ಷೇತ್ರದಲ್ಲಿ ಕಳೆದ 90 ವರುಷದಿಂದ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಮಂಡಳಿಯ ಸಾಧನೆ ಅಪಾರವಾದದ್ದು.
ಬೆಂಗಳೂರು: ಮೈಸೂರಿನ ಕವಿತಾ ಪ್ರಕಾಶನ ಹಾಗೂ ಡಾ. ಮಹಾಂತೇಶ ಬಿರಾದಾರ ಅವರ ‘ಮುಖಪುಸ್ತಕದ ಮರೆಯದ ಮುಖಗಳು’ ಕ...
ಬೆಂಗಳೂರು: ‘ರಾಮಾಯಣದಲ್ಲಿ ಬರುವ ಅನೇಕ ಹೆಣ್ಣು ಪಾತ್ರಗಳು ಕೇವಲ ಪಾತ್ರಗಳಾಗಿರದೆ ರಾಮಾಯಣದ ಆಶಯಕ್ಕೆ ಸ್ಪಂದಿಸುವ ...
ಬೆಂಗಳೂರು: ಜನ ಪ್ರಕಾಶನ, ಬೆಂಗಳೂರು ವಿಜ್ಞಾನ ವೇದಿಕೆ ಹಾಗೂ ಬೆಂಗಳೂರು ಸಮಾಜ ವಿಜ್ಞಾನ ವೇದಿಕೆಯ ಸಹಯೋಗದಲ್ಲಿ ರೂಪ ಹಾಸನ...
©2024 Book Brahma Private Limited.