ವಿವೇಕವನ್ನು ಬಳಸಿಕೊಂಡರೆ ಸಮಸ್ಯೆ ಪರಿಹಾರ- ಶಿವಾಚಾರ್ಯ ಸ್ವಾಮೀಜಿ

Date: 04-08-2022

Location: ದಾವಣಗೆರೆ


“ಮನುಷ್ಯನಿಗೆ ಜೀವನದಲ್ಲಿ ಹಲವಾರು ಸಮಸ್ಯೆಗಳು ಬರುತ್ತಿರುತ್ತವೆ. ಆಗ ಆತನು ತನ್ನಲ್ಲಿರುವ ವಿವೇಕವನ್ನು ಸರಿಯಾಗಿ ಬಳಕೆ ಮಾಡಿಕೊಂಡರೆ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು" ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸ್ಪೂರ್ತಿ ಪ್ರಕಾಶನ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಂಟಿ ಆಶ್ರಯದಲ್ಲಿ ಬುಧವಾರದಂದು ಎಚ್.‌ ಎನ್. ಮಮತಾ ನಾಗರಾಜ್‌ ಅವರ ಮೊದಲ ಕೃತಿ ʻಜೀವನ್ಮುಖಿʼ ಕಿರುನಾಟಕಗಳ ಸಂಕಲನದ ಬಿಡುಗಡೆ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ʻಜೀವನ್ಮುಖಿʼಯಲ್ಲಿರುವ ಹತ್ತೂ ನಾಟಕಗಳನ್ನು ಓದಬಹುದು ಜೊತೆಗೆ ಅಭಿನಯಿಸಿ ನೋಡಲೂಬಹುದಾಗಿದೆ” ಎಂದೂ ಅವರು ಮೆಚ್ಚುಗೆಯ ಮಾತುಗಳನ್ನಾಡಿದರು.

ಲೇಖಕಿ ಮಮತಾ ನಾಗರಾಜ್‌ ಅವರು ತಮ್ಮ ಪುಸ್ತಕದ ಬಿಡುಗಡೆಯ ವೇಳೆ ಮಾತನಾಡಿ, ಕಿರು ನಾಟಕಗಳ ಸಂಕಲನವನ್ನು ಲೋಕಾರ್ಪಣೆ ಮಾಡುತ್ತಿರುವುದು ನನ್ನ ಜೀವನದ ಬಹುಮುಖ್ಯ ಮೈಲಿಗಲ್ಲು. ಹಣದಾಸೆಗಾಗಿ ನಾನು ಬರೆಯುತ್ತಿಲ್ಲ, ನನ್ನ ತೃಪ್ತಿಗಾಗಿ ಬರೆಯುತ್ತೇನೆ ಎಂದು ಎಲ್ಲರಿಗೂ ಧನ್ಯವಾದಗಳನ್ನು ಹೇಳಿದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷೆ ಸುಮತಿ ಜಯ್ಯಪ್ಪ ಅವರು, ತಾಂತ್ರಿಕ ಮಾಧ್ಯಮಗಳ ಹಾವಳಿಯಿಂದಾಗಿ ಇಂದು ಜೀವಂತ ಕಲೆಯನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಎನ್.‌ ಜಿ. ಪುಟ್ಟಸ್ವಾಮಿ, ಯಶಾ ದಿನೇಶ್‌, ಎಚ್.‌ ಕೆ. ಸತ್ಯಭಾಮಾ ಮಂಜುನಾಥ್‌, ಎಚ್.‌ ಎನ್.‌ ಶಿವಕುಮಾರ್‌, ರೂಪಾ ಬಸವರಾಜ್‌ ಉಪಸ್ಥಿತರಿದ್ದರು.

MORE NEWS

ಚಲನಚಿತ್ರ ಸಾಹಿತ್ಯದ ಸಂಬಂಧ ತೆಳುವಾ...

12-08-2022 ಬೆಂಗಳೂರು

ಬೆಂಗಳೂರಿನ ಅಂತರಾಷ್ಟ್ರೀಯ ಕಿರುಚಿತ್ರ ಉತ್ಸವದ ಅಂಗವಾಗಿ ಬೆಂಗಳೂರಿನ ಬನಶಂಕರಿಯ ಸುಚಿತ್ರಾ ಫಿಲ್ಮ್‌ ಸೊಸೈಟಿ ಆವರಣ...

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ...

12-08-2022 ಬೆಂಗಳೂರು.

ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಚ್.‌ ಕೃಷ್ಣಯ್ಯ ಅವರು ಆಗಸ್ಟ್‌ 12 ಶು...

'ನಿಸರ್ಗಪ್ರಿಯ' ಕಾವ್ಯನಾಮದ ಕಾದಂಬರ...

12-08-2022 ಬೆಂಗಳೂರು

'ನಿಸರ್ಗಪ್ರಿಯ' ಕಾವ್ಯನಾಮದ ನಾಟಕಕಾರˌ ಕಾದಂಬರಿಕಾರˌ ಸಂಶೋಧಕˌ ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ರಿಜಿಸ್ಟ್ರಾರ್...