ವ್ಯಕ್ತಿಯ ಕುರಿತು ಪುಸ್ತಕ ಬಂದಲ್ಲಿ ಜೀವನದ ಸಾರ್ಥಕತೆ : ಕಿಚ್ಚ ಸುದೀಪ್

Date: 11-01-2021

Location: ಬೆಂಗಳೂರು


‘ಬಹುಜನರು 70ರ ವಸಂತ ಕಾಣುವುದೇ ಅಪರೂಪ, ಆದರೆ ಗಿರಿಜಾ ಅವರಿಗೆ ಇದರೊಂದಿಗೆ ಆಚರಣೆಯ ಸಂಭ್ರಮವು ಸಿಕ್ಕಿದೆ. ಒಬ್ಬರ ಜೀವನ ಸಾರ್ಥಕತೆ ಪಡೆಯುವುದು ಅವರ ಕುರಿತು ಪುಸ್ತಕ ಬಂದಾಗ. ಅದೀಗ ‘ಗಿರಿಜಾ ಪರಸಂಗದ’ ಮೂಲಕ ಜರುಗಿದ್ದು, ಗಿರಿಜಮ್ಮನವರ ಜೀವನವು ಇಂದು ಆ ಸಾರ್ಥಕತೆಯ ಮಟ್ಟವನ್ನು ತಲುಪಿದೆ’ ಎಂದು ನಟ ಕಿಚ್ಚ ಸುದೀಪ್ ಅವರು ‘ಗಿರಿಜಾ ಪರಸಂಗ’ ಬಿಡುಗಡೆ ಸಮಾರಂಭದಲ್ಲಿ ಶುಭ ನುಡಿದರು.

ಬೆಂಗಳೂರಿನ ಸುಚಿತ್ರ ಫಿಲ್ಮ ಸೊಸೈಟಿಯಲ್ಲಿ ಬುಕ್ ಬ್ರಹ್ಮ ಹಾಗೂ ಅಂಕಿತ ಪುಸ್ತಕ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಗಿರಿಜಾ ಲೋಕೇಶ್ ಅವರ ಆತ್ಮಕಥೆಯ ‘ಗಿರಿಜಾ ಪರಸಂಗ’ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು. ಕೃತಿಯನ್ನು ಪತ್ರಕರ್ತ ಜೋಗಿ ನಿರೂಪಣೆ ಮಾಡಿರುವುದು ಮತ್ತೊಂದು ವಿಶೇಷ.

ನಂತರ ಮಾತನಾಡಿದ ಕವಿ ಎಚ್‌.ಎಸ್. ವೆಂಕಟೇಶ ಮೂರ್ತಿ, ‘ಕಲಾವಿದರ ಜೀವನ ಬೇರೆಯದ್ದೇ ಆಗಿರುತ್ತದೆ. ಅವರು ಸ್ಟಾರ್‌ಗಳ ಹಾಗೆ ಮಿಂಚಿ ಮರೆಯಾಗುವವರಲ್ಲದೆ ಸದಾ ಬೆಳಗುವ ‘ನಂದಾದೀಪ’. ಆ ಸಾಲಿಗೆ ಗಿರಿಜಾ ಲೋಕೇಶ್ ಅವರು ಹೊರತಲ್ಲ’ ಎಂದರು.

ಕಾರ್ಯಕ್ರಮದಲ್ಲಿ ನಟಿ ಜಯಮಾಲಾ, ಪುತ್ರ ಸೃಜನ್‌ ಲೋಕೇಶ್, ಸಂದೇಶ್ ನಾಗರಾಜ್, ಗಿರಿಜಾ ಲೋಕೇಶ್, ಮುಖ್ಯಮಂತ್ರಿ ಚಂದ್ರು, ನಟ ಅಶೋಕ್ ಮುಂತಾದ ತಾರಾ ಬಳಗ ಹಾಗೂ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

MORE NEWS

ಫೆ.19 ರಿಂದ ಜೈಪುರ ಸಾಹಿತ್ಯ ಸಮ್ಮೇ...

20-01-2021 ಬೆಂಗಳೂರು

ಬಹು ನಿರೀಕ್ಷಿತ ಹಾಗೂ ವಿಶ್ವ ಖ್ಯಾತಿಯ ಜೈಪುರ ಸಾಹಿತ್ಯ ಸಮ್ಮೇಳನವು 2021 ರ ಫೆಬ್ರವರಿಯಲ್ಲಿ ಜರುಗಲಿದೆ. ಆದರೆ, ವಿಶೇಷವ...

ಗುವಾಹತಿ ಸಾಹಿತ್ಯ ಮೇಳದಲ್ಲಿ  ಲಾರಿ...

20-01-2021 ಬೆಂಗಳೂರು

ಲಾರಿ ಚಾಲಕರೊಬ್ಬರು ತಮ್ಮ ವೃತ್ತಿ ಜೀವನದಲ್ಲಿಯ ಕೆಲ ಕುತೂಹಲಕಾರಿ ಪ್ರಸಂಗಗಳ ಕುರಿತು ಬರೆದ ಆತ್ಮಕಥನ ಮಾದರಿಯ ಕೃತಿಯು ಇತ...

ಸಿಂಗಾಪುರದ ಲೇಖಕರಾದ ಸಿಮ್, ಮೀಹಾನ್...

20-01-2021 ಬೆಂಗಳೂರು

ಪ್ರಕಟಣಾಪೂರ್ವ ಆಂಗ್ಲ ಭಾಷೆಯ ಕಾಲ್ಪನಿಕ ಕಾದಂಬರಿಗಳಿಗೆ ನೀಡಲಾಗುವ ‘ಎಪಿಗ್ರಾಮ್ ಬುಕ್ಸ್ ಪ್ರಶಸ್ತಿ’ಯನ್ನು...

Comments