”ಡಬ್ಲ್ಯು.ಬಿ.ಯೇಟ್ಸ್ ಕವಿಯ ಎಪ್ಪತ್ತು ಕವನಗಳು: ಸಾರ್ಥಕ ಅನುವಾದಿತ ಕೃತಿ’

Date: 12-01-2020

Location: ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರ, ಚಾಮರಾಜಪೇಟೆ, ಬೆಂಗಳೂರು


ಡಬ್ಲ್ಯು.ಬಿ.ಯೇಟ್ಸ್ ಕವಿಯ ಎಪ್ಪತ್ತು ಕವನಗಳ ಅನುವಾದವು ಸಾರ್ಥಕ ಮಾತ್ರವಲ್ಲ; ಮಾದರಿಯೂ ಹಾಗೂ ಅನುಕರಣೀಯವೂ ಆಗಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರು ಅಭಿಪ್ರಾಯಪಟ್ಟರು.

ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಉದಯ ಪ್ರಕಾಶನ ಹಾಗೂ ಪ್ರೊ.ವಿ. ಕೃಷ್ಣಮೂರ್ತಿರಾವ್ ಅಭಿಮಾನಿ ಬಳಗವು ಜಂಟಿಯಾಗಿ ಆಯೋಜಿಸಿದ್ದ ಪ್ರೊ. ವಿ.ಕೃಷ್ಣಮೂರ್ತಿ ರಾವ್ ಅವರು ಅನುವಾದಿಸಿರುವ ’ಡಬ್ಲ್ಯು.ಬಿ.ಯೇಟ್ಸ್ ಕವಿಯ ಎಪ್ಪತ್ತು ಕವನಗಳು’ ಕೃತಿಯ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರೊ. ವಿ.ಕೃಷ್ಣಮೂರ್ತೀ ರಾವ್ ಅವರ ಓದು, ಅಧ್ಯಯನ, ವಿವೇಕ, ಅನುವಾದದ ರಮಣೀಯತೆ-ಈ ಸಂಕಲನದ ಪುಟಪುಟಗಳಲ್ಲಿಯೂ ಎದ್ದು ಕಾಣುತ್ತವೆ. ಇದೊಂದು ಸಾರ್ಥಕ ಹಾಗೂ ಅನುಕರಣೀಯ ಅನುವಾದ ಎಂದು ಪ್ರಶಂಸಿಸಿದರು.

ಖ್ಯಾತ ಅನುವಾದಕ ಪ್ರೊ. ಓ.ಎಲ್. ನಾಗಭೂಷಣ ಕೃತಿಯನ್ನು ಲೋಕಾರ್ಪಣೆ ಮಾಡಿ, ಡಬ್ಲ್ಯು.ಬಿ.ಯೇಟ್ಸ್ ಕವಿಯು ಆಧುನಿಕ ಇಂಗ್ಲಿಷ್ ಕಾವ್ಯ ಚರಿತ್ರೆಯಲ್ಲಿ ಪ್ರಸಿದ್ಧ ಕವಿ. ವಿದ್ವಾಂಸನೂ ಹೌದು. ಈತನ ಕವನಗಳು ಕಳೆದ ನೂರು ವರ್ಷದಿಂದ ಪ್ರಪಂಚದ ವಿವಿಧ ಭಾಷೆಗಳಿಗೆ ಅನುವಾದಗೊಂಡಿವೆ. ಕನ್ನಡವೂ ಸಹ ಕಳೆದ ಅರ್ಧ ಶತಮಾನಕ್ಕಿಂತ ಹೆಚ್ಚಾಗಿ ಈತನ ಕಾವ್ಯ ಭಾವಗಳನ್ನು ತನ್ನ ಸ್ವತ್ತಾಗಿ ಮಾಡಿಕೊಂಡಿದೆ ಎಂದರು.

ಅನುವಾದಕ ಜಯಪ್ರಕಾಶ ನಾರಾಯಣ (ಜೆ.ಪಿ) ಮಾತನಾಡಿ, ಪ್ರೊ. ವಿ.ಕೃಷ್ಣಮೂರ್ತಿ ರಾವ್ ಅವರು ಇಂಗ್ಲಿಷ್ ವಿದ್ಯಾರ್ಥಿ. ಇಂಗ್ಲಿಷ್ ಕಾವ್ಮದ ಮರ್ಮವನ್ನು ಚೆನ್ನಾಗಿ ಅರಿತವರು. ಅನುವಾದಕರು. ಈಗಾಗಲೇ ಐದು ಕನ್ನಡ ಕಾವ್ಯ ಸಂಕಲನಗಳನ್ನು ಪ್ರಕಟಿಸಿರುವ ಅವರು, ನಮ್ಮ ನಡುವಿನ ಮುಖ್ಯ ಕವಿಗಳಲ್ಲಿ ಒಬ್ಬರು. ಕಳೆದ 4 ವರ್ಷಗಳವರೆಗೆ ಯೇಟ್ಸ್ ಕವಿತೆಗಳನ್ನು ಧ್ಯಾನಿಸಿ, 70 ಕವಿತೆಗಳನ್ನು ಅನುವಾದಿಸಿದ್ದಾರೆ. ಕವನ ಸಂಕಲನದ ಚಾರಿತ್ಯ್ರಕ ನೆಲೆಗಳನ್ನು ತಿಳಿಸಲು ಪ್ರವೇಶಿಕೆಗಳನ್ನು ನೀಡಿದ್ದಾರೆ ಎಂದರು. ಬಿ.ಆರ್. ಪರಮೇಶ್, ಎಂ.ಡಿ.ಶೈಲಜಾ, ಸತ್ಯಮಂಗಲ ಮಹದೇವ ಸೇರಿದಂತೆ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

 

MORE NEWS

ಚಳವಳಿಗಳು ಕಾಲಘಟಕ್ಕೆ ಸೀಮಿತವಾಗಬಾರ...

19-01-2020 ಬೆಂಗಳೂರು

ಬೆಂಗಳೂrರು ವಿಶ್ವ ವಿದ್ಯಾಲಯದ ಕುಲಪತಿಗಳ ಮನೆ ಬಳಿಯ ಸಾಹಿತ್ಯವನದಲ್ಲಿ ಬಾಪು ಗಾಂಧೀ ಹಾಗೂ ಅವರ ಚಳವಳಿ ಕುರಿತ ಸಂವಾದ ಕಾರ...

ಆತ್ಮಚಿಂತನೆಯ ಸಾರವತ್ತಾದ ಕೃತಿ ’ಉತ...

18-01-2020 ಚಾಮರಾಜಪೇಟೆ, ಬೆಂಗಳೂರು.

ಉದಯ ಪ್ರಕಾಶನದಿಂದ ಮಲ್ಲೇಪುರಂ ಜಿ. ವೆಂಕಟೇಶ ಅವರ ‘ಉತ್ತರಯಾನ’ ಕೃತಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಲೋ...

ಮೈಸೂರಿನಲ್ಲಿ ’ಧರೆಗೆ ದೊಡ್ಡೋರು ಮಂ...

18-01-2020 ಮೈಸೂರು

ನೀಲಗಾರ ಬೆಟ್ಟದಬೀಡು ಸಿದ್ಧಶೆಟ್ಟರು ಹಾಡಿರುವ ಹಾಗೂ ಪಿ.ಕೆ.ರಾಜಶೇಖರ ಅವರು ಸಂಪಾದಿಸಿರುವ ’ಜನಪದ ಮಹಾಕಾವ್ಯ ಧರೆಗ...

With us

Top News
Exclusive
Top Events