ಯುಟ್ಯೂಬ್: ಕನ್ನಡ ಸಾಹಿತಿಗಳ ಸಂದರ್ಶನದ ಧ್ವನಿಮುದ್ರಿಕೆಗಳು

Date: 23-05-2020

Location: ಬೆಂಗಳೂರು


ಬೆಂಗಳೂರು ಆಕಾಶವಾಣಿ ಕೇಂದ್ರವು ಕನ್ನಡ ಸಾಹಿತಿಗಳ ಹಲವು  ಮಹತ್ವದ ಹಾಗೂ ಮೌಲಿಕ ವಿಚಾರ ಒಳಗೊಂಡಿರುವ ಸಂದರ್ಶನಗಳ ಧ್ವನಿಮುದ್ರಿಕೆಗಳನ್ನು ಯೂಟ್ಯೂಬ್ ಗೆ ಅಪ್ಲೋಡ್ ಮಾಡಿದೆ. ಈ ಸಂದರ್ಶನಗಳು ಸಾಮಾನ್ಯರಿಗೂ ಸುಲಭವಾಗಿ ಸಿಗುವಂತೆ ಶ್ಲಾಘನೀಯ ಕೆಲಸ ಮಾಡಿದೆ. ಸಾಹಿತಿಗಳು ಅವರ ಕೃತಿಯಲ್ಲಿ ಸಿಕ್ಕಿರುವುದಕ್ಕಿಂತ ಹೆಚ್ಚಾಗಿ ಅವರ ಕೃತಿಗಳಲ್ಲಿಯ ಸನ್ನಿವೇಶ-ಘಟನೆ ಹಾಗೂ ಪಾತ್ರ ಗಳ ಮೂಲಕ ವ್ಯಕ್ತ ಮಾಡಿರುವ ಜ್ವಲಂತ ಸಮಸ್ಯೆ ಇಲ್ಲವೇ ಧರ್ಮ, ಶಿಕ್ಷಣ ಹೀಗೆ ವಿವಿಧ ವಲಯಗಳ ಲೋಪದೋಷಗಳು ಕುರಿತು ಹೇಳಿರುವ ವಿಚಾರಗಳು, ಭಿನ್ನವಾಗಿ ಅಷ್ಟೇ ಪ್ರಖರವಾಗಿ ವ್ಯಕ್ತವಾಗಿರುವ ವಿಚಾರಗಳು ಇಲ್ಲಿ ಮೂಡಿಬಂದಿವೆ. ತಮ್ಮ ಜೀವನದ ಮೇಲೆ ಪರಿಣಾಮ ಬೀರಿದ ಪರಿಸರ - ಘಟನೆಗಳನ್ನು ಸಹ ಇಲ್ಲಿ ಮೆಲುಕು ಹಾಕಿದ್ದಾರೆ. ಇಂದಿನ ಯುವ ಪೀಳಿಗೆ ಸಾಹಿತಿಗಳಿಗೆ ಹೊಸ ಹೊಳಹನ್ನು ನೀಡಬಲ್ಲ, ಮಾನವ ಚೇತನಕ್ಕೆ ಸ್ಪೂರ್ತಿ ನೀಡಬಲ್ಲ ಅಪರೂಪದ ಮೌಲ್ಯಯುತ ಸಂದರ್ಶನಗಳು ಇಲ್ಲಿವೆ. ಕವಿ ಕುವೆಂಪು, ದ. ರಾ. ಬೇಂದ್ರೆ, ಫ. ಗು. ಹಳಕಟ್ಟಿ, ಯು. ಆ‌ರ್‌. ಅನಂತಮೂರ್ತಿ, ಕೆ. ಎಸ್. ನರಸಿಂಹಸ್ವಾಮಿ, ಗೋಪಾಲಕೃಷ್ಣ ಅಡಿಗ, ಶಿವರಾಮ ಕಾರಂತ, ಮಾಸ್ಟರ್‌ ಹಿರಣ್ಣಯ್ಯ, ಗೋವಿಂದ ಪೈ, ಸುಬ್ಬಣ್ಣ ಕೆ. ವಿ., ಗೊರೂರು ರಾಮಸ್ವಾಮಿ ಅಯ್ಯಂಗಾರ್‌, ಆರ್‌. ಕೆ. ಲಕ್ಷ್ಮಣ್, ಪು.ತಿ.ನ, ದೇವನೂರು ಮಹಾದೇವ, ಚಂದ್ರಶೇಖರ ಕಂಬಾರ, ರಸ್ಕಿನ್ ಬಾಂಡ್ ಹೀಗೆ ಕನ್ನಡ ನಾಡು-ನುಡಿ, ಸಾಹಿತ್ಯಕ್ಕಾಗಿ ತಮ್ಮದೇ ರೀತಿಯಲ್ಲಿ ಶ್ರಮಿಸಿದ ಮಹನೀಯರ ಸಂದರ್ಶನದ ಧ್ವನಿಮುದ್ರಿಕೆಗಳನ್ನು ಕೇಳಬಹುದು. ಈ ಸಂದರ್ಶನಗಳ ಲಿಂಕ್ಅನ್ನು ಇಲ್ಲಿ ನೀಡಲಾಗಿದೆ .

https://www.youtube.com/watch?v=PjUCnXZanwI: (ದ. ರಾ. ಬೇಂದ್ರೆಯವರಿಗೆ ಜ್ಞಾನ ಪೀಠ ಬಂದ ಸಂದರ್ಭದಲ್ಲಿ ಸಂದರ್ಶನ)

 

https://www.youtube.com/watch?v=FiRuF-r59ZI: (ಕೆ. ಎಸ್. ನರಸಿಂಹ ಸ್ವಾಮಿಗಳ ಸಂದರ್ಶನ  - ಕಿ. ರಂ. ನಾಗರಾಜ,ಶೂದ್ರ ಶ್ರೀನಿವಾಸ)

 

https://www.youtube.com/watch?v=Ay8Fc0TfNVI: (ಕೆ. ವಿ. ಸುಬ್ಬಣ್ಣ ಸಂದರ್ಶನ -ಬಿ ವಿ ಕಾರಂತ್ ಮತ್ತು ಕಂಬಾರರಿಂದ ಮಾಗ್ಸಸ್ಸೇ ಪ್ರಶಸ್ತಿ ಬಂದ ಸಂದರ್ಭ)

 

https://www.youtube.com/watch?v=KYBBBtwaJ7Q: (ಗೋರೂರು ರಾಮಸ್ವಾಮಿಗಳ ಸಂದರ್ಶನ ನಿಸಾರ್ ಅಹ್ಮದ್ ಅವರಿಂದ)

 

https://www.youtube.com/watch?v=2Amaype4VNI: (ಗೋವಿಂದ ಪೈ ಗಳ ಸಂದರ್ಶನ)

 

https://www.youtube.com/watch?v=X5PL2Ux0ioo: (ಶಿವರಾಮಕಾರಂತ ಮತ್ತು ವಿ. ಕೃ. ಗೋಕಾಕರ ಸಂದರ್ಶನ ಚೆನ್ನವೀರ ಕಣವಿಯವರಿಂದ)

 

https://www.youtube.com/watch?v=9oYgd4YHtvc: (ಕುವೆಂಪು ಸಂದರ್ಶನ ಜವರೇಗೌಡರಿಂದ)

 

https://www.youtube.com/watch?v=w16yvp34XDM: (ಗೋಪಾಲಕೃಷ್ಣಅಡಿಗರ ಸಂದರ್ಶನ - ಯು ಆರ್ ಅನಂತಮೂರ್ತಿ)

 

https://www.youtube.com/watch?v=CHbNP2PFNss (ಎಸ್‌. ಕೆ. ಕರೀಂ ಖಾನ್‌ ಸಂದರ್ಶನ - ಬಿ. ಎಸ್‌. ಸ್ವಾಮಿ)

 

https://www.youtube.com/watch?v=5DsLygmQyJ8: (ದೇವನೂರು ಮಹಾದೇವ ಸಂದರ್ಶನ)

 

https://www.youtube.com/watch?v=jucA8wbB0lk: (ಪಿ. ಲಂಕೇಶ್ ಸಂದರ್ಶನ)

 

https://www.youtube.com/watch?v=Vuu_Q09I4PQ: (ಪು. ತಿ. ನರಸಿಂಹಚಾರ್‌ ಸಂದರ್ಶನ - ದೊರೆಸ್ವಾಮಿ ಐಯ್ಯಂಗಾರ್‌, ಎಚ್. ಎಸ್‌. ವೆಂಕಟೇಶಮೂರ್ತಿ, ನರಹಳ್ಳಿ ಬಾಲಸುಬ್ರಮಣ್ಯ)

 

https://www.youtube.com/watch?v=q2EJq_k3eBU: (ಗುಬ್ಬಿ ವೀರಣ್ಣ - ಬಿ. ಜಯಮ್ಮ, ಗುಬ್ಬಿ ವೀರಣ್ಣ)

 

https://www.youtube.com/watch?v=NsH-hMEnmvE: (ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಸಂದರ್ಶನ)

 

https://www.youtube.com/watch?v=A5GRnC7_ItM: (ಯು. ಆರ್‌. ಅನಂತಮೂರ್ತಿ ಸಂದರ್ಶನ - ಎ. ಎನ್‌. ಮನುಚಕ್ರವರ್ತಿ)

 

https://www.youtube.com/watch?v=5qWjuweAmzk: (ಚಂದ್ರಶೇಖರ ಕಂಬಾರ ಸಂದರ್ಶನ)

 

https://www.youtube.com/watch?v=T7ZRU3JvBzk: (ಕಿ. ರಂ. ನಾಗರಾಜರ ಸಂದರ್ಶನ - ಅಗ್ರಹಾರ ಕೃಷ್ಣಮೂರ್ತಿ)

 

https://www.youtube.com/watch?v=xK-tsYXoYwQ: (ಜಿ. ಎಸ್. ಶಿವರುದ್ರಪ್ಪ ಸಂದರ್ಶನ)

 

https://www.youtube.com/watch?v=0lm5tCTM6RU: (ಸಿದ್ಧಯ್ಯ ಪುರಾಣಿಕ್ ಸಂದರ್ಶನ)

 

https://www.youtube.com/watch?v=_E1i-vc1hXc: (ಡಿ.ವಿ.ಜಿ ಅವರ ಸಂದರ್ಶನ ಎನ್. ಎಸ್‌. ಸೀತಾರಾಮಶಾಸ್ತ್ರಿ ಅವರಿಂದ)

 

https://www.youtube.com/watch?v=u8GWwP-6ZFA : (ಎಸ್. ವಿ. ರಂಗಣ್ಣ ಅವರ ಸಂದರ್ಶನ)

 

https://www.youtube.com/watch?v=D6H9MDetzj4: (ಮಾಸ್ತಿ ವೆಂಕಟೇಶ ಅಯ್ಯಂಗಾರ ಸಂದರ್ಶನ ವಿ. ಸೀತಾರಾಮಯ್ಯ ಅವರಿಂದ)

 

https://www.youtube.com/watch?v=jBMTRxQ9ZeE: (ರಸ್ಕಿನ್‌ ಬಾಂಡ್‌ ಅವರ ಸಂದರ್ಶನ)

 

MORE NEWS

ಅಸಂಖ್ಯ ಸ್ತ್ರೀಯರ ನೈಜ ಚಿತ್ರಣ ‘ನೋ...

04-07-2020 ಬೆಂಗಳೂರು

‘ಲೇಖಿಕಾ ಸಾಹಿತ್ಯ ವೇದಿಕೆ’ ಆಯೋಜಿಸಿದ್ದ ಪುಸ್ತಕಾವಲೋಕನದಲ್ಲಿ ಈ ಬಾರಿ ಲೇಖಕಿ ಡಿ. ಯಶೋದಾ ಅವರು ಬೇ...

ತಿರುಪತಿ ಭಂಗಿ ಅವರ ‘ಕೆಂಪರೋಡ್’ ಕೃ...

03-07-2020 ಬೆಂಗಳೂರು

ಕಥೆಗಾರ ಅಬ್ಬಾಸ್ ಮೇಲಿನಮನಿ ಹಾಗೂ ಸಾಹಿತಿ ಪ್ರಕಾಶ್ ಖಾಡೆ ಅವರು ತಿರುಪತಿ ಭಂಗಿ ಅವರ ‘ಕೆಂಪರೋಡ್’ ಕ...

ವಿವಿಧ ಅಕಾಡೆಮಿಗಳಿಗೆ ನೂತನ ಸದಸ್ಯರ...

02-07-2020 ಬೆಂಗಳೂರು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ವಿವಿಧ ಅಕಾಡೆಮಿಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದ್ದು, ಅ...

Comments

ಸ್ಪರ್ಧೆಯ ಕತೆಗಳು
ಸ್ಪರ್ಧೆಯ ಕವಿತೆಗಳು
Magazine
With us

Top News
Exclusive
Top Events