ಪ್ರಚಾರ ಪ್ರಿಯತೆಗಾಗಿ ಬರೆಯದಿರಿ: ಯುವ ಬರಹಗಾರರಿಗೆ ಎಚ್.ಎಸ್.ವಿ ಕಿವಿಮಾತು

Date: 14-11-2019

Location: ಬೆಂಗಳೂರು


ಬೆಂಗಳೂರು: 'ಇಂದಿನ ಯವ ಬರಹಗಾರರು ಸಮಾಜಮುಖಿಯಾದ ಸಾಹಿತ್ಯ ಸೃಷ್ಟಿಗೆ ಒತ್ತುಕೊಡಬೇಕು ಇದು ಸಂಬಂಧಗಳನ್ನು ಬೆಸೆಯುವ ಕೆಲಸ ಮಾಡುವಂತಾಗಬೇಕು' ಎಂದು ಕನ್ನಡ ಮತ್ತು ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಹಾಗೂ ಸಕ್ಕರೆ ಇಲಾಖೆ ಸಚಿವ ಸಿ.ಟಿ. ರವಿ ಹೇಳಿದ್ದಾರೆ.

ನಯನ ಸಭಾಂಗಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜಿಸಿದ್ದ, ಯುವ ಲೇಖಕರ ಚೊಚ್ಚಲ ಕೃತಿ ಬಿಡುಗಡೆ ಹಾಗೂ ಉಚಿತ ಪುಸ್ತಕ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ’ಸಾಹಿತ್ಯ ಬರಹಗಾರನ ಬದುಕಿನ ತಲ್ಲಣಗಳ ಅಭಿವ್ಯಕ್ತಿ ಹೇಗೆಯೋ ಹಾಗೆ ಅದು ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ಅರಿವನ್ನೂ ಇಟ್ಟುಕೊಂಡು ಸೃಷ್ಟಿಯಾಗಬೇಕು’ ಎಂದು ಅವರು ತಿಳಿಸಿದರು.

ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಹೆಚ್.ಎಸ್. ವೆಂಕಟೇಶಮೂರ್ತಿ ಸಾಹಿತ್ಯ ಮತ್ತು ಕಲೆ ಅಂತರಂಗದ ಅನುಭವವನ್ನು ಭಾಷೆಯ ಮೂಲಕ ಅಭಿವ್ಯಕ್ತಿಸುತ್ತದೆ. ಅದು ಸಿದ್ದಿಯಾಗಬೇಕಾದರೆ. ಬರಹಗಾರ ಸಾಧನೆ ಮಾಡಬೇಕು, ಹಾಗೆಯೇ ಏಕಾಂತದಲ್ಲಿ ಅದನ್ನು ಆಸ್ವಾದಿಸಿ ಬರೆಯಬೇಕು. ಆದರೆ ಇಂದಿನ ಯುವ ಬರಹಗಾರರು ದಿಢೀರನೇ ಪ್ರಸಿದ್ಧಿಗೆ ಬರಬೇಕು ಎಂಬ ಧಾವಂತದಲ್ಲಿ ಪ್ರಚಾರ ಪ್ರಿಯತೆಗಾಗಿ ಬರೆಯಲು ಹೊರಡುತ್ತಾರೆ. ಅದು ಸಾಹಿತ್ಯಕ್ಕೆ ಅತ್ಯಂತ ಅಪಾಯಕಾರಿ, ಗಟ್ಟಿಯಾದ ಸಾಹಿತ್ಯ ಸೃಷ್ಟಿಯಾಗಬೇಕಾದರೆ ಆತ ಬದುಕಿನ ನೋವುಗಳನ್ನ ಕಂಡಿರಬೇಕು, ಅನುಭವಿಸಿರಬೇಕು. ಹಾಗಾಗಿ ಇಂದಿನ ಬರಹಗಾರರು ಪ್ರಚಾರಕ್ಕೆ ಹಾತೊರೆಯದೆ ಬದುಕನ್ನು ಅನುಭವಿಸಿ ಶ್ರದ್ದೆಯಿಂದ ವಿನಯಪೂರ್ವಕವಾಗಿ ಬರೆಯುವುದನ್ನು ಕಲಿಯಬೇಕು ಎಂದು ಹೇಳಿದರು.

ಬಿಡುಗಡೆಯಾದ ಪುಸ್ತಕಗಳು ಹಾಗೂ ಲೇಖಕರು

ಪುಸ್ತಕಗಳು ಲೇಖಕರು
ಉಲಿಯುವ ಹಕ್ಕಿ ಮತ್ತು ನಕ್ಷತ್ರ ಅಭಿಷೇಕ್‌ ಪೈ
ದುಗುಡದ ಕುಂಡ ರಾಜು ಸನದಿ
ಕೆಂಪು ನಕ್ಷತ್ರದ ಕೆಳಗೆ ಮಲ್ಲಮ್ಮ ಯಾಟಗಲ್‌
ಹಾರುವ ಹಂಸೆ ಆರ್‌.ದಿಲೀಪ್‌ ಕುಮಾರ್‌
ತೇಲಿ ಬಿಟ್ಟ ಹೂ ಅನುಪಮಾ ಕೆ.ಎನ್.
ಮತ್ತೆ ಮೋಡ ಕಟ್ಟುತಿದೆ ಮಲ್ಲಮ್ಮ ಜೊಂಡಿ
ಅವಳೆದೆಯ ಡೈರಿಯೊಳಗೆ ಬಸಯ್ಯ ಸ್ವಾಮಿ ಕಮಲದಿನ್ನಿ
ಉಸಿರು ನಿಲ್ಲುವ ಮುನ್ನ ಮಹೇಶ ಎಂ.ಕಾಳಿ
ಮೀನುಗಾರನ ಮೈನಕ್ಕಿ ಪ್ರಹ್ಲಾದ್ ಡಿ.ಎಂ.
ನಗ್ನ ದೀಪದ ನೆರಳು ಮಿಲನ್ ಎಂ.ಎಚ್.
ಬೆಂಕಿ ಸಮುದ್ರದ ತಂಪು ಮೀನು ಭರಮಣ್ಣ ಗುರಿಕಾರ್
ಅಂತರ್ಮುಖಿ ರಾಘವೇಂದ್ರ ಡಿ. ಆಲೂರು
ಹೂಮನದ ಹನಿ ರಾಜು ಎಸ್
ಪಿವೋಟ್‌ ಪದ್ಯಗಳು ನಜ್ಮಾ ನಜೀರ್‌ ಚಿಕ್ಕನೇರಳೆ
ಕಾಡು ಮಲ್ಲಿಗೆ ಹನುಮಂತಪ್ಪ ಕುರಿ ಎಚ್‌.ಕೆ
ಭಾವ ಚೈತನ್ಯ ಮಧುಸೂದನ ಬಿ.ಎನ್.
ಒಂದೇ ಬಳ್ಳಿಯ ಹೂಗಳು ಮೆಹಬೂಬ ಪಾಷಾ ಎ. ಮಕಾನದಾರ
ಕೌದಿ ಕಲ್ಮೇಶ ಹ. ತೋಟದ
ನೀಲ ನೆತ್ತರು ಎ.ಎಸ್. ಮಣಿಕಂಠ (ಆ.ಸಿ.ಮ)
ಹುಲಿಯ ನೆತ್ತಿಗೆ ನೆರಳು ನದೀಮ ಸನದಿ
ಆತ್ಮ ದೀಪ ರಾಜೇಶ್ ಎಚ್.ಆರ್‌.
ಕಣ್ಣೀರು ಚಲಪತಿ ವಿ.
ಎಂಟಾಣಿ ಪೆಪ್ಪರುಮೆಂಟು ಚಂದ್ರು ಎಂ. ಹುಣಸೂರು
ಶತಮಾನಗಳ ವೇಷ ಎಸ್. ಮೂರ್ಕಣ್ಣಪ್ಪ
ಒಡಲು ವಿಶ್ವನಾಥ ಎನ್ ಗೌಡ
ಮೌನವೇ ಮಾತಾಡು ಬಸವರಜ ಎಸ್. ಶ್ರೀಂಗೇರಿ
ಏನೆಂದು ಹೆಸರಿಡಲಿ? ರಂಜಿತಾ ಮಹಾಂತಪ್ಪ
ಕೋರಿಕೆ ಆಶಾರಾಣಿ ಸಂತೋಷ ಗಿರಿ
ಕಾಡುತ್ತಿದೆ ಕನಸುಗಳು ಗೌತಮ್‌ ಎ. ಸಕ್ಕರಕಿ
ಸೆಳೆತಗಳ ಸುಳಿಯಲ್ಲಿ ಗರ್ಭಿತ ಗರಿ ಚಂದ್ರಯ್ಯ ಚಪ್ಪರದಳ್ಳಿಮಠ
ನೆಲ ಮೂಲ ಚಿಂತನೆ ಡಾ. ವೆಂಕಟೇಶ್ವರ ಕೆ. ಕೊಲ್ಲಿ
ಉರಿಯ ಪೇಟೆಯಲಿ ಪತಂಗ ಮಾರಾಟ ರಾಮಕೃಷ್ಣ ಸುಗತ
ಹಾಣಾದಿ ಕಪಿಲ ಪಿ. ಹುಮನಾಬಾದೆ
ಆಸ್ಥೆ ವಿನೋದ್ ಕೆ.ಎಲ್
ಸ್ವಾತಂತ್ಯ್ರಶ್ರೀ ರಮೇಶ ವ್ಹಿ
ಮರೆವಿನ ಹಿಂದೆ ಗಣೇಶ ಹನಮಸಾಗರ (ಬೀಜಿ)
ಗೊರುಕನ 1974 ರಂಗನಾಥ್‌
ಪಾದಗಂಧ ಭಾಗ್ಯಜ್ಯೋತಿ ಹಿರೇಮಠ
ಬಿಸಿಲು ಕಾಡುವ ಪರಿ ಮೆಹಬೂಬ್‌ ಮಠದ
ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ ಕವಿತೆ ಸುಮಿತ್‌ ಮೇತ್ರಿ
ಕಾಗದದ ದೋಣಿ ನರಸಿಂಹ ಮೂರ್ತಿ ಹಳೇಹಟ್ಟಿ
ತಂಬೂರಿನಾದ ಡಾ. ಸೋಮಕ್ಕ ಮಾದಾಪೂರ
ಮಹಿಳಾ ಸಾಹಿತ್ಯ- ಸಮಸ್ಯೆ ಮತ್ತು ಸವಾಲುಗಳು ಪ್ರೇಮಾಂಜಲಿ ಮರೆಪ್ಪ ಕಲಕೇರಿ
ಬಯಲು ಬಾಗಿಲು ಕಾನಕಾನಳ್ಳಿ ಶಿವಮಾಧು ಎಂ.
ತಿಳಿವ ನೋಟ ವಿ. ಅರ್ಪಿತ
ವಚನ ಭಾಷೆ ಡಾ. ನಾಗರಾಜ ದೊರೆ
ಮಣ್ಣೊಡಲ ಮೊಳಕೆ ಪಾರ್ವತಿ ಕನಕಗಿರಿ
ವ್ಯಕ್ತಿನಾಮ ಮಗತ್ತು ಶಾಸನಗಳ ಭಾಷಿಕ ಸಂಗತಿಗಳು ಡಾ. ನಟರಾಜು ಜೆ.ಆರ್‌.
ಆಳಂದ ಆಚರಣೆಗಳು ಅವಿನಾಶ ಎಸ್. ದೇವನೂರ
ಸತ್ಯ ಪಥದ ನಿತ್ಯ ಸಂತ ಸುಮ ಚಂದ್ರಶೇಖರ್‌
ಮಡಿಲ ನಕ್ಷತ್ರ ರೇಖಾ ಭಟ್ಟ, ಹೊನ್ನಗದ್ದೆ
ಜನಪದರ ನೋಟ ರಜಿಯಾ ನದಾಫ್‌

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...