Poem

ಆಸೆ

ಅಲೆಯ ರಭಸಕ್ಕೆ ಕೊಚ್ಚಿ ಹೋಗಿವೆ ಮನಸ್ಸಿನ ‌ಕಲ್ಪನೆಗಳು‌.
ನನ್ನ ಎಲ್ಲ ಆಸೆಯ ಕಟ್ಟೆ  ಒಡೆದು ಸೇರಿವೆ ಸಮುದ್ರದ  ಆಳದಲ್ಲಿ.
ಈ ಜೀವಕ್ಕೆ  ಪ್ರೀತಿಯ ಅಮೃತ ಬಿಂದು ಬೇಕಾಗಿದೆ.
ಅವಳ ಕಾಲ್ಗೆಜ್ಜೆ ಸದ್ದಿನ ನಾದ.
ಅದೆಷ್ಟೋ ದಿನಗಳಾಗಲಿ ,ಯುಗಗಳಾಗಲಿ 
ಉಸಿರು ಬಿಗಿ ಹಿಡಿದು ಕಾದಿರುವೆ ಪ್ರೀತಿಯ ಬಡಪಾಯಿ.
ಒಮ್ಮೆ ಯಾದರೂ ಪ್ರೀತಿಯ ಜೋಗುಳ ಹಾಡುವ ಆಸೆ ನನ್ನಾಕೆಗೆ.
ಅವಳ ಮಡಿಲಲ್ಲಿ ಮಗುವಾಗುವ ಆಸೆ.
ಚಂದಿರನ ಬೆಳದಿಂಗಳಿನಲ್ಲಿ ಮುತ್ತಿಡುವ ಆಸೆ.
ಕೊರೆವ ಚಳಿಯಲ್ಲಿ ಬೆಚ್ಚಗೆ ಅಪ್ಪುವ ಆಸೆ 
ಮಳೆ ಹನಿಯಲ್ಲಿ ನೆನೆಯುವ ಆಸೆ ..
ಪ್ರೀತಿಯಿಂದ ಒಮ್ಮೆ ಪ್ರೀತಿಸುವ ಆಸೆ..

By: ಶ್ರೀ ಕಿರಣ್

Comments[0] Likes[6] Shares[0]

Submit Your Comment

Latest Comments

No comments are available!