Poem

ಅದೇಕೆ ಬಿಟ್ಟು ಬಂದೆ

ಅದೇಕೆ ಬಿಟ್ಟು ಬಂದೆನೋ ನಿನ್ನ.....
ನಿನ್ನ ನೆನೆನೆನೆದು ಮನಸ್ಸಾಯಿತು ಖಿನ್ನ
ಅದೆಷ್ಷೋ  ಆಸೆ ಹೊತ್ತು, ಹುಡುಕಾಡಿ,
ಕಾಡಿ ಚೌಕಾಸಿ ಮಾಡಿ ನನ್ನದನ್ನಾಗಿಸಿ
ಅದೇಕೆ ಬಿಟ್ಟು ಬಂದೆನೋ ನಿನ್ನ.....

ನನ್ನದನ್ನಾಗಿಸಿದ ನಿನ್ನ ಸಿಂಗರಿಸಿ ಸವಿಯಲು
ಚೆಲ್ಲಿದೆ ಪ್ರೇಮದಿ ಕೈಚಳಕದ ಅಮಲು
ಹಾಗೆಯೇ ಹಾಕಿದೆ ನಿನ್ನ ಹಸಿರುತನಕ್ಕೆ ಅರಿಷಣ 
ಕೊಬ್ಬರಿ ಬೆಲ್ಲ ಹಾಗು ಶ್ವೇತ ಲವಣ
ಅದೇಕೆ ಬಿಟ್ಟು ಬಂದೆನೋ ನಿನ್ನ.....

ಇನ್ನಾರಿಗೂ ಸಲ್ಲದು ನೀನು, ನನಗಷ್ಷೇ ದಕ್ಕಿದೆ ನೀನು 
ಎಂಬ ಅಹಂ ಭಾವ ಬೆಳದಾಗ, ಎದೆ ಉಬ್ಬಿಸಿ ನಡೆದಾಗ
ನನ್ನೊಡನೆ ಬರಲಿಲ್ಲ ನೀನು, ಜೊತೆ ತೊರೆದು ಅಲ್ಲೇ ನಿಂತೆ ನೀನು
ಎಂಬರಿವು ಬಂದಾಗ ಮನ ಮುದುಡಿದಾಗ
ಅದೇಕೆ ತೋರೆದೆಯೋ ಎನ್ನ.......

By: ವಿಜಯಲಕ್ಷ್ಮಿ ನಾಡಗೌಡ

Comments[0] Likes[1] Shares[0]

Submit Your Comment

Latest Comments

No comments are available!