Poem

ಅಮ್ಮ-2

"ನನ್ನ ಅಮ್ಮನೇ,
ಚಂದ್ರನ ತೋರಿಸಿ,ಗುಮ್ಮ ಬಂದೆನಿಸಿ,

ಊಟ ಮಾಡಿಸಿದ ಸರ್ವಶ್ರೇಷ್ಠ ತಾಯಿಯೇ,

ಎದೆ ಹಾಲು ಕೊಟ್ಟು ಹಸಿವನ್ನು ನಿಗಿಸಿ,

ನಿದ್ದೆ ಬಂದಾಗ ಜೋಲಾಲಿ ಹಾಡಿ ಮಲಗಿಸಿದವಳೇ ,

ಜೀವನದ ಹಾದಿಯಲ್ಲಿ  ಕಷ್ಟಗಳನ್ನು ಎದುರಿಸಿ,

ತನ್ನೆಲ್ಲಾ, ನೋವುಗಳನ್ನು ಬಚ್ಚಿಟ್ಟು ,

ನಗು ಮೊಗದಲ್ಲಿ ನನ್ನನ್ನು ಪ್ರೀತಿಸಿ ರಕ್ಷಿಸಿದವಳೇ ,

ನೀ ಕೊಟ ಜನ್ಮಕೆ ,ನಾ ಇಂದು

ಚಿರಋಣಿಯಾಗಿರುವೆ ಮಾತೇ,

ಪದಗಳು ಸಾಲದು ನಿನ್ನ ವರ್ಣಿಸಲು,
ಅಮ್ಮ ಅಂದರೆ ಅಷ್ಟೆ ಸಾಕೇ..!
 

By: ಪವನ್

Comments[0] Likes[6] Shares[1]

Submit Your Comment

Latest Comments

No comments are available!