Poem

ಅನುಮಾನವೆ ಇಲ್ಲ, ಅಭಿಮಾನಿ ನಾ ಇಲ್ಲಿ

ಮುಂಜಾನೆಯ ಮಂಜಿನಲ್ಲಿಯು

ನಿಮ್ಮ ಮನೆಯ ಕಿಟಕಿಯಲ್ಲಿ ಇಣುಕಿ

ನಿನ್ನ ನೋಡಲು ಯತ್ನಿಸುವ ಸೂರ್ಯನಿಗೂ ಗೊತ್ತು,

ನೀ ನಡುರಾತ್ರಿಯವರಿಗೆ ಚಂದ್ರನೊಂದಿಗೆ ಚಕ್ಕಂದ ಆಡಿರುವೆ ಎಂದು.........
            ತಡರಾತ್ರಿಯಲ್ಲಿ ನಿನ್ನೊಂದಿಗೆ ಇರುವ

ಚಂದ್ರನಿಗೂ ಗೊತ್ತು ನೀನು ಇಡೀ ದಿನ

ಸೂರ್ಯನೊಂದಿಗೆ ಸರಸ-ಸಲ್ಲಾಪವಾಡಿರುವುದು
     ಆದರೂ
ಸೂರ್ಯಚಂದ್ರರಿಬ್ಬರೂ ನಿನ್ನನ್ನು ಶಂಕಿಸದೆ

ಪ್ರೀತಿಸಿ ನನ್ನ  ವೈರಿಗಳಾಗಿರುವರು...
          ಪಾಂಡವರಿಗೆ ಪಾಂಚಾಲಿ ಆಗಿದ್ದದ್ದು ಆ ದ್ರೌಪದಿ,

ಆದರೆ ನೀ ಇಲ್ಲಿ ತ್ರಿಪದಿ..... ಅಂತೆಯೇ ಬರೆಯಲು ಕುಳಿತಿದ್ದೆ

ನಿನ್ನ ಕುರಿತು ತ್ರಿಪದಿಯೊಂದನ್ನು ನಾನು ಆದರೆ ತಿಳಿಯದೆ

ಗೀಚಿರುವ ತೋಚಿದ್ದನ್ನು ,ತಪ್ಪು ಹುಡುಕದೆ

ಅರ್ಪಿಸಿಕೋ ಈ ಪ್ರೀತಿಯನ್ನು ಅಳಲನ್ನು
  

By: ಅಮೀರ್‌ ಮುಲ್ತಾನಿ

Comments[0] Likes[2] Shares[0]

Submit Your Comment

Latest Comments

No comments are available!