Poem

ಅವಾಂತರ

ಮನಸುಗಳು ಮನೆಯಲ್ಲಿವೆ
ಕನಸುಗಳು ಹೊರಗೆ ಗರಿಗೆದರಿವೆ ಬದುಕ ದಾರಿ ತಿಳಿಯದೆ
ಭಾವನೆಗಳ  ಬಾವಿಬತ್ತಿದೆ.

ಹಗಲು ಇರುಳು ಚಿಂತೆಗಳು
ಕಂತೆ ಕಟ್ಟಿ ಸುಳಿದಿರಲು
ಸಂತಸದ ತಂಗಾಳಿ
ಇನ್ನೂ  ದೂರವಾಗಿದೆ.

ಕರುಣೆ ತೋರದ
ಕಾರುಣ್ಯ ಬೀರದ
ಭೂಮಿ ಇನ್ನೊಮ್ಮೆ ಅತ್ತಿದೆ
ನಮ್ಮೊಡನಿರಳು ಬೆಚ್ಚಿದೆ.

ನಮ್ಮದೇ ಕರ್ಮ ಕಥೆಗಳು
ಗರಿಬಿಚ್ಚಿ ಕೂತಿವೆ
ಹಾರಲಾರದೆ ಇನ್ನೊಮ್ಮೆ 
ಮುಗ್ಗರಿಸಿ ಬಿದ್ದಿವೆ.

ಸಪ್ತಸಾಗರ ತಂಪಾಗಿದೆ
ಗೊಂದಲದ ಗೂಡಾಗಿದೆ
ಭವನೆಗಳ ಬೆಟ್ಟವಾಗಿದೆ
ಬರದ ಭೂದಿಯಾಗಿವೆ.

ಚಡಪಡಿಸುವ ಚಕ್ರಗಳು
ಇಂದೂ ತಿರುಗುತ್ತಿವೆ
ಚಕ್ರವ್ಯೂಹವ ಭೇದಿಸಲು ಕಾಯುತ್ತಿವೆ ಹಾದಿ ಅಭಿಮನ್ಯುವಿನ.
 

By: ದಿವಾಕರ್ ಶೆಟ್ಟಿ ಅಡ್ಯಾರ್

Comments[3] Likes[8] Shares[1]

Submit Your Comment

Latest Comments

Sunita Kunder
Jul 08,2020

Very well written 👍

Shaila
Jul 08,2020

Nice

Purushotham Shetty
Jul 08,2020

Very nice poem