Poem

ಬಾಡಿಗೆ ಬಳ್ಳಿ

                "ಬಾಡಿಗೆ ಬಳ್ಳಿ"
ಸ್ವಂತಕ್ಕೆ ಕೊಳ್ಳುವರು ಬರದಿರಲು,
ಬಾಡಿಗೆಗೆ ಬಿಟ್ಟಿದ್ದಾಳೆ ಹೆತ್ತವಳು
ಹೊಟ್ಟೆಯಲಿ ಹುಟ್ಟಿದವಳನು..!

ಒಮ್ಮೆ ಬಂದಿದ್ದರಂತೆ 
ಸ್ವಂತಕ್ಕೆ ,ಕರೆದೊಯ್ಯುಲು ಕೈ ಹಿಡಿದು
ಆಗ ಇರಲಿಲ್ಲವಂತೆ ಇವಳ ಬಳಿ
ಕೇಳಿದಷ್ಟು ಕೊಟ್ಟು
ಕಳುಹಿಸಿಕೊಡುವಷ್ಟು..
ಉಳಿದಳು ಮಗಳು,ಇವಳ ಬಳಿ
ಮರವನು ತಬ್ಬಿ ಬೆಳೆಯುವ ಬಳ್ಳಿ
 
ಬೆಳೆಯಿತು ಬಳ್ಳಿ
ಹೆಮ್ಮರ ಬುಡದ ಗಿಡದಂತೆ,
ಕಲಿಯಿತು ಬೇಗನೆ 
ಬಾಗುವುದ,ಬೀಸುವುದ,ಹೀರುವುದ.!

ಫಲವನು ತುಂಬಿ, ನುಲಿದಿದೆ ಹೊಸಮರ
ಸುಗ್ಗಿಯ ಸಮಯದಿ ಇನಿಯನ ಕೂಗುವ
ಕೋಗಿಲೆಯಂತೆ ಕರೆದಿದೆ ಹೊಸಮರ ಬಾಡಿಗೆಗೆ..
ಬಂದರು ಹಲವರು
ಕೆಲವರು ಅದರಲಿ ಚೌಕಾಸಿ,
ರಸವನು ಹೀರಿ 
ಸಿಪ್ಪೆಯ ಉಳಿಸಿ ಹೋದವರು

ಹೆಮ್ಮರ ಉರುಳಲು
ಸುಗ್ಗಿಯು ಮುಗಿಯಲು
ಉದುರಿವೆ ಹೊಸಮರದೆಲೆಗಳು..
ತರಗೆಲೆ ಸರಿಸಿ,ಚಿಗಿರಿದೆ ಬಳ್ಳಿ
ಹೊಸಮರ ಬುಡದಲಿ
ಹೆಮ್ಮರ ಉರುಳಿದ ಜಾಗದಲಿ..

ಬಾಡಿಗೆಯ ಬಳ್ಳಿಗಳು ಬಳಲದಿರಲಿ
ಹೊಸಬದುಕು ಅವರದಾಗಲಿ

By: ಶಶಿಧರ ಜೆ ಎಂ

Comments[4] Likes[8] Shares[3]

Submit Your Comment

Latest Comments

Jagannatha
Jul 08,2020

Nice shashi

Aghori
Jul 06,2020

ಚೆನ್ನಾಗಿದೆ ನಿಮ್ಮ ಕವನ

Ramaling
Jul 06,2020

Shashi your awesome man , being a Friend.

Shiva
Jul 06,2020

Nice shasi..