Poem

ಬಣ್ಣಗಳಾಟ

ಮುಗಿಲ ಮಳೆಬಿಲ್ಲೊಮ್ಮೆ ನಾನಾಗಿದ್ದೆ
ನಿನ್ನ ಹೊಂಗಿರಣಗಳಲಿ ಮಿನುಗುತಲಿದ್ದೆ 
ರವಿಯ ಎಳೆ ಕಿರಣಗಳ ಸೋಂಕಿನಲಿ
ಏಳೇಳು ವರ್ಣಗಳಲಿ ಗರಿಗೆದರಿದ್ದೆ

ನೇರಳೆ! ನೀಲ ಹಸಿರು! ಹಳದಿ! ಕಿತ್ತಳೆ ಕೆಂಪಿನ ಆಕಾರ!
ಸಮ್ಮಿಲನದ ಕ್ಷಣ ಮೂಡಿತ್ತು ಬಿಳಿಯ ಚಿತ್ತಾರ 
ನಿನ್ನ ಮೃದು ವಚನಗಳ ಹನಿಹನಿಯಿಂದ 
ನಭದಲಿ ಸ್ಫುರಿಸಿತೆನ್ನ ರಂಗೇರಿದ ಹೂಹಾರ

ನಾ ನವಿಲಾಗಿ ನಲಿನಲಿದು ಮೈಮರೆತಾಗ
ಮಳೆ ನಿಂತು ಮೋಡಗಳೆಲ್ಲ ಹನಿ ಕಳೆದುಕೊಂಡಾಗ
ಎನ್ನ ಹೊಳಪಿನ ಸೂರ್ಯನು ಅಸ್ತಮಿಸುತ್ತಾ 
ಹೊಳೆವ ನನ್ನ ಬಣ್ಣಗಳಾಟವ ಮರೆಯಾಗಿಸಿದನಾಗ

ನಾನಿಲ್ಲವಾದೆ. 
ಮತ್ತೆ ಮಳೆಯಾಗುವ ತವಕ. 

By: ಸ್ನೇಹ

Comments[13] Likes[29] Shares[4]

Submit Your Comment

Latest Comments

esudass grace
Jul 21,2020

Great. Good work done

N DASARADHI
Jul 21,2020

Wonderful description of nature.

KALYANI
Jul 21,2020

Profound .. immersed with nature

M. Israel
Jul 21,2020

Nicely described..

K Sreedhar
Jul 21,2020

Nicely presented

MadhavMsd Radha A A.RadjaR.AMadhav
Jul 21,2020

Excellent 👌👌

Jayasimhan T M M
Jul 21,2020

Very nice.. congratulations

Neha
Jul 21,2020

Excellent composition!!!

Deepthi
Jul 21,2020

ತುಂಬಾ ಚೆನ್ನಾಗಿ ಇದೆ

Lalitha
Jul 21,2020

Very nice !

Anvesh
Jul 21,2020

Excellent poem

ನಾರಾಯಣ ಮೂರ್ತಿ ಬೂದುಗೂರು
Jul 21,2020

ಹರ್ಶೋಲ್ಲಾಸದ ಬಗೆಬಗೆ ಬಣ್ಣದ ಕಾಮನಬಿಲ್ಲು ಮೂಡುವುದರಲೀ ಹರುಷವುತುಂಬತ ಸಮ್ಮಿಳನದಲಿ ಬಿಳಿಯ ಬಣ್ಣವಾಗಿ ಕಣ್ಮರೆಯಾಗುತ, ಮತ್ತೆ ಸೂರ್ಯನು ಮರೆಯಾಗಲು, ಮತ್ತೊಂದು ಜನುಮತಾಳಲು ಮಳೆಗಾಗಿ ಕಾಯುತಿದೆಯಲ್ಲವೆ. ಸುಂದರ ಭಾವವ್ಯಕ್ತೀಕರಣ... ಶುಭವಾಗಲಿ ನಿಮ್ಮ ಕಾವ್ಯ ಕೃಷಿಗೆ. ನಾರಾಯಣ ಮೂರ್ತಿ ಬೂದುಗೂರು

Naveen R
Jul 21,2020

ಬಹಳಾ ಚನ್ನಾಗಿದೆ!!