Poem

ಬೆಟ್ಟದ ಜೀವ


ಬೆಟ್ಟದ ಜೀವ

ಮಳೆಗಾಲದಲಿ ಥಂಡಿಗೆ ನಡುಗಿ
ನಿಂತೆ ಮುದುಡಿ ನೆನೆ ನೆನೆದು

ಬಿರು ಬೆಸಗೆಯಲಿ ನೀರಿರದೆ ಒಣಗಿ
ಬೇರುಗಳನಿಳಿಸುತ ನಿಂತೆ

ಚಳಿಗಾಲದಲಿ ಪರ್ಣಗಳಕೊಡವಿ
ಬರಿಗೈಯಾದೆ ಏನೂ ಇರದೆ

ಬೆಳೆದ ಬೆಟ್ಟದ ಜೀವ ನಾನು
ನನ್ನ ಕೇಳುವವರಾರು.?

ಯಾರೋ ಹೇಳುವ ಹಾಗೇ 
ಹುಟ್ಟೇ ಪುಣ್ಯವಂತೆ..!!?

ಬುಡಕೆ ನೀರು ಹಾಕಿದವರಿಲ್ಲ
ಪ್ರೀತಿ ತೋರಿ ಮೈ ಸವರಲಿಲ್ಲ

ಜೀವ ಹಿಡಿದು ನೀರಿಗಾಗಿ ಮೈಲಿಗಟ್ಟಲೇ
ಬೇರು ಬೆಳಸುತ್ತ ಒಳಗೆ ಮಾಗಿದ್ದು ಬಿಟ್ಟರೆ
ಮೇಲೆರಲಿಲ್ಲ ಬೆಳಯಲಿಲ್ಲ ಬಾಹ್ಯರೂಪ
ಈ ನತದೃಷ್ಟ ಕುರೂಪಕ್ಕೆ ಹಣ್ಣು ಇಲ್ಲ

ಆಳೆತ್ತರ ಬೆಳಯುವಷ್ಟರಲ್ಲಿ ಎಷ್ಟು ವತ್ಸರಗಳುರುಳಿದವೋ..?
ಅದೋ ಯಾರೋ ಬಂದರು ಈಗ
ಸುಗಂಧವೆನ್ನುತ ನನ್ನ

ಅಪರೂಪದ ಔಷಧವಂತೆ ಈಗ
ಹೊರತೊಗಟೆ ಹೆರೆದು ಕೆತ್ತಿ ಚಕ್ಕೆಯನು
ಎಲೆಗಳನು ಹರಿದು ಬೇರುಗಳ ಬಗೆದು..
ಹಳದಿ ಹಲ್ಲುಗಳ ಕಿರಿದು ನಗುಮೊಗದಿ

ಬೇಕಾದ್ದು ಸಿಕ್ಕಿ ಬಯಕೆ ತೀರಿತೆನ್ನುವ ಭರದಲಿ 
ತಿರುಗಿಬನೋಡದೆ ನಡೆದಿಹರು ಭರ್ರನೆ ವಾಹನವನೇರಿ

By: ಮಹೇಂದ್ರ ಹೆಗಡೆ ಸಂಕಿಮನೆ

Comments[4] Likes[19] Shares[1]

Submit Your Comment

Latest Comments

PEER SAHEB BIRABBI
Jul 24,2020

ನನ್ನವ್ವ ಗಭ೯ದಲ್ಲಿಯೇ ಆಶ್ರಯ ಕೊಟ್ಟು ಒಂಬತ್ತು ತಿಂಗಳು ಹೊತ್ತು, ಹೆತ್ತು, ತನಗೆ ತಾನೇ ದೇಹವ ದಂಡಿಸಿ ಗಭ೯ವೇ ಬಸಿದು ಜೀವಕೊಟ್ಟ ಕರುಣಾಮಯಿ ನನ್ನವ್ವ ತಾನು ಹಸಿವಿನಿಂದ ಬಳಲಿದರೂ ಮರೆಮಾಚಿ ಮಗುವಿಗೆ ಹಾಲಿನ ಅಭಿಷೇಕ ಮಾಡುವ ಜೀವ ನನ್ನವ್ವ, ತನ್ನ ಹಸಿವನ್ನೂ ಲೆಕ್ಕಿಸದೆ,ಮಗುವಿನ ಹೊಟ್ಟೆ ತುಂಬಿಸೋ ದಾನಮಯಿ ನನ್ನವ್ವ ತಾನು ಸೋತರು ನಮಗೆ ಜಗವ ಗೆಲ್ಲುವುದ ಕಲಿಸಿದ ಧೀರ ಮಾತೆ ನನ್ನವ್ವ, ಕಷ್ಟ,ಆಯಾಸಗಳನ್ನು ಬದಿಗಿಟ್ಟು ಮಗುವಿನ ಭವಿಷ್ಯ ರೂಪಿಸುವ ನಿಸ್ವಾಥಿ೯ ಜೀವನಾಡಿ ನನ್ನವ್ವ ತಾನು ಬಡವಳಾದರೂ ನನಗೆ ಬಡತನದ ನೆರಳು ಸೋಕದೆ, ಶ್ರೀಮಂತಿಕೆಯ ತೊಟ್ಟಿಲಲಿ ತೂಗಿದ ಹೃದಯ ಶ್ರೀಮಂತಳು, ನಿಸ್ವಾಥ೯ ಒಲವ ಹೆಸರು ನನ್ನವ್ವ *ರಚನೆ : ಪೀರ್ ಸಾಹೇಬ್ ಬೀರಬ್ಬಿ*

MANJUNATH
Jul 16,2020

ಮನುಷ್ಯನ ವಿಕೃತಿಗೆ ಬದಲಾಗಿ ಪ್ರಕೃತಿಯು ಆಗಾಗ ಪಾಠ ಕಲಿಸುತ್ತದೆ....

Priyanka Kulkarni
Jul 06,2020

Nice ....

Priya Hegde
Jul 06,2020

Theme of the poem is figured out very well...