Poem

ಬಿಸಿಲು ನಾಡು

ಆಗಸದಲ್ಲೊಂದು  ನಡೆದ ವಿಸ್ಮಯ
ಮೋಡಗಳು ಬಂದಾಗ ಬಿಸಿಲು ಮಾಯ..

 ಸೂರ್ಯ ವಿರಾಮ ಪಡೆಯಲು ಚಂದ್ರನ ಆಗಮನ
ತಂಗಾಳಿಬೀಸಲು ತುಂತುರು ಹನಿಗಳ ಸಿಂಚನ....

 ಮಳೆರಾಯ ಬಂದ ಅತಿಥಿಯಂತೆ  ಬಿಸಿಲುನಾಡಿಗೆ.  
ಬಾವಿ- ಕೆರೆ-ಹಳ್ಳ-ದಿಂಡೆಗಳು ಆಭಾರಿ ಆತನಿಗೆ

 ಇವೆಲ್ಲ ನಡೆದಿದ್ದು ಕೇವಲ ಒಂದುದಿನ
ಭಾಸ್ಕರ ರಜೆಯಲಿದ್ದ ದಿನ
ರಜೆಯಿಂದ ಬಾಸ್ಕರನು ಮರಳಲು
ಮೊದಲಿನಂತೆ ಧಗಧಗಿಸುತ್ತಿದೆ ಬಿಸಿಲು

 ವಿಜಯಪುರ ಇದು ಬಿಸಿಲುನಾಡು
ಪಂಚ ನದಿಗಳ ಬೀಡು
ಮಳೆ ‌ಕಡಿಮೆಯಾಗುವ ಊರು
ಇಲ್ಲಿನ ರೈತರಿಗಿದು  ಪ್ರತಿವರ್ಷವೂ ತಪ್ಪದ ಗೋಳು.

By: ಶ್ರೀರಂಗ್‌ ಪುರಾಣಿಕ್‌

Comments[0] Likes[1] Shares[0]

Submit Your Comment

Latest Comments

No comments are available!