Poem

ಚಿಂತೆ

ಬಿಕ್ಕಿ ಬಿಕ್ಕಿ ಅತ್ತರೂನು
ಚಿಂತೆ ಹೋಗದು
ಸಹಿಸಿ ಒಮ್ಮೆ ನಕ್ಕು ಬಿಡು
ಚಿಂತೆ ಕಾಡದು

ನಭದ ಅಸಂಖ್ಯ ಚುಕ್ಕಿಗಳು
ನಗುತಾ ಹೊಳೆದಿದೆ ನೋಡು
ನಿನಗ್ಯಾಕೆ ಮರುಳೆ 
ಈ ಶೋಕದ ಹಾಡು

ಜಗದ ಪುಷ್ಪರಾಶಿಗಳು
ಅರಳಿ ನಿಂತಿದೆ
ಒಂದೇ ದಿನ ಆಯಸ್ಸು ಆದರೇನು?!
ನಗುವು ತನ್ನ ಸ್ವಂತ ಅಂತಿದೆ

ಎಲ್ಲಾ ಸುಖವು ಇದ್ದರೂನು
ಯಾಕೆ ಮರುಳೆ ನಿನಗೆ ಚಿಂತೆ
ಅತಿ ಆಸೆ ಸರಿಸಿ ನಕ್ಕುಬಿಡು
ಚಿಂತೆ ದೂರ ಹೋಗುವಂತೆ

By: ಜನಾರ್ದನ ಗೊರ್ಟೆ

Comments[0] Likes[1] Shares[4]

Submit Your Comment

Latest Comments

No comments are available!