Poem

ದಾಖಲೆ

*ದಾಖಲೆ*

ದಾಖಲೆ ಬೇಕಂತೆ ದಾಖಲೆ
ಎಲ್ಲಿಂದ ತರಲಿ ಸಾಬೀತು ಮಾಡಲು *ದಾಖಲೆ* 
ಮಾನವೀಯತೆಗೆ ಎಲ್ಲಿಂದ ತರಲಿ *ದಾಖಲೆ* 
ಮನುಷ್ಯತ್ವಕ್ಕೆ ಅದರ ತತ್ವಕ್ಕೆ ಹೆಗೆ ತರಲಿ *ದಾಖಲೆ* ...

ಜಲೀಲ, ಜೊಸೆಫ್, ಜಗ್ಗಿಯ ಗೆಳೆತನಕ್ಕೆ 
ಎಲ್ಲಿಂದ ತರಲಿ *ದಾಖಲೆ* ...
ರಂಜಾನಿನ ಖೀರು, ಕ್ರಿಸ್ಮಸ್ ನ ಕೆಕು
ಯುಗಾದಿಯ ಬೇವು- ಬೆಲ್ಲಗಳ ಸಮಾನತೆಗೆ ಎಲ್ಲಿಂದ ತರಲಿ *ದಾಖಲೆ* 

ವಿವೇಕ-ಹಂಸರ, ಷರೀಫ- ಗೊವಿಂದ ಭಟ್ಟರ, ಬಿಸ್ಮಿಲ್ಲಾ- ಕಾಶಿ ವಿಶ್ವನಾಥನ, 
ಅಬ್ದುಲ್ ಕಲಾಮ್- ಶಿವಸುಬ್ರಮಣಿಯನ್ ರ..
ಧರ್ಮಾತೀತ ಸಂಭಂದಕ್ಕೆ ಹೆಗೆ ತರಲಿ *ದಾಖಲೆ*

ಗೀತೆ, ಕುರಾನ್, ಬೈಬಲ್ ಗಳ ಪ್ರೆಮ ಸಂದೇಶಗಳಿಗೆ ತರಲಿ ಯಾವ *ದಾಖಲೆ*
ಜನ್ಮದಿಂದಲೂ ಧಮನಿಯೊಳಗಡಗಿರುವ ಭಾರತೀಯನೆಂಬ ಪೌರತೆಗೆ ಎಲ್ಲಿಂದ ತರಲಿ *ದಾಖಲೆ*

ನಾನು ಇಲ್ಲಿಯವನೆಂದು ಹೆಳಿದ ಅಪ್ಪ
ನೀನು ಭಾರತೀಯನೆಂದು ಹೆಳಿದ ಗುರು
ತಾಯಿ ಭಾರತೀಯೂ ನಿನ್ನ ತಾಯಿ ಎಂದು ಹೆಳಿದ ನನ್ನಮ್ಮ..
ಇವರುಗಳ ದಿಗ್ದರ್ಶನಕ್ಕೆ ತರಲಿ ಯಾವ *ದಾಖಲೆ*...
ತರಲಿ ಯಾವ ದಾಖಲೆ ತರಲಿ ಯಾವ ದಾಖಲೆ...
 

By: ಅಗ್ನಿದಿವ್ಯ (ಅಮರೇಶ ಪಾಟೀಲ)

Comments[0] Likes[1] Shares[0]

Submit Your Comment

Latest Comments

No comments are available!